ಬರೇಲಿ (ಉತ್ತರಪ್ರದೇಶ): ಶಾಲಾ ಮುಖ್ಯೋಪಾಧ್ಯಾಯರೊಬ್ಬರು ತಮ್ಮ ಶಾಲೆಯ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಮುಖ್ಯೋಪಾಧ್ಯಾಯ ತನ್ನ ಹೇಯ ಕೃತ್ಯವನ್ನು ವಿಡಿಯೋ ಮಾಡಿ ಬಾಲಕಿಯನ್ನು ಬೆದರಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಸಂತ್ರಸ್ತ ಬಾಲಕಿ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂತ್ರಸ್ತ ಶಾಲಾ ಬಾಲಕಿ ನೀಡಿರುವ ದೂರಿನಂತೆ, ನವಾಬ್ ಗಂಜ್ನ ಶಾಲಾ ಮುಖ್ಯೋಪಾಧ್ಯಾಯರಾದ ಪರಶುರಾಮ್ ಎಂಬವರು ದೌರ್ಜನ್ಯ ಎಸಗಿರುವುದಾಗಿ ದೂರಿದ್ದಾರೆ. ಸಂತ್ರಸ್ತ ಬಾಲಕಿಯು ಈ ಬಾರಿಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದರು. ಕಳೆದ ವರ್ಷ ನಡೆದ ಪರೀಕ್ಷೆಯ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಬಾಲಕಿಯಲ್ಲಿ ಪರೀಕ್ಷಾ ಪತ್ರದಲ್ಲಿ ಕೆಲ ತಪ್ಪುಗಳಾಗಿದ್ದು, ಇವುಗಳನ್ನು ಸರಿಪಡಿಸಲು ನವಾಬ್ ಗಂಜ್ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ, ಆರೋಪಿಯು ಇಲ್ಲಿ ಒಂದು ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಾಲಕಿ ದೂರಿದ್ದಾರೆ.
ಅಷ್ಟೇ ಅಲ್ಲದೆ ಆರೋಪಿ ಪರಶುರಾಮ್ ತನ್ನ ಹೇಯ ಕೃತ್ಯವನ್ನು ವಿಡಿಯೋ ಮಾಡಿ , ಈ ಬಗ್ಗೆ ಯಾರಿಗಾದರೂ ಹೇಳಿದರೆ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ. ಇದರಿಂದ ಬೆದರಿದ ಬಾಲಕಿಯೂ ಯಾರ ಬಳಿಯೂ ಈ ಬಗ್ಗೆ ಹೇಳಿಲ್ಲ. ಈ ವಿಡಿಯೋವನ್ನು ಬಳಸಿಕೊಂಡು ಆರೋಪಿ ಪರಶುರಾಮ್ ಬಾಲಕಿ ಮೇಲೆ ಆಗಾಗ್ಗೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಹೇಳಲಾಗಿದೆ. ಅಲ್ಲದೇ ಬಾಲಕಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಬಾಲಕಿ ದೂರಿದ್ದಾರೆ.
ಇದನ್ನೂ ಓದಿ :ಅಪ್ರಾಪ್ತೆ ರೇಪ್ ಮಾಡಿ, ಕೊಂದು ಕಬೋರ್ಡ್ನಲ್ಲಿ ಶವ ಬಚ್ಚಿಟ್ಟಿದ್ದ ಪಾತಕಿ!