ಅಯೋಧ್ಯೆ, ಉತ್ತರಪ್ರದೇಶ: ಧರ್ಮನಗರಿ ಅಯೋಧ್ಯೆಯಲ್ಲಿರುವ ರಾಮಜನ್ಮಭೂಮಿ ಸಂಕೀರ್ಣದ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಪಿಎಸಿ ಕಾನ್ಸ್ಟೇಬಲ್ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ 6:15ಕ್ಕೆ ರಾಮಜನ್ಮಭೂಮಿ ಕಾಂಪ್ಲೆಕ್ಸ್‌ಗೆ ಹೊಂದಿಕೊಂಡಿರುವ ವೇದ ಮಂದಿರದ ಸಮೀಪ ಕ್ರಾಸಿಂಗ್ ಅರಣ್ಯದ ಬಳಿ ಪಿಎಸಿ ಕಾನ್ಸ್ಟೇಬಲ್ ಕರ್ತವ್ಯದಲ್ಲಿದ್ದರು.
ಮಳೆಯಿಂದಾಗಿ ರೈಫಲ್‌ಗೆ ನೀರು ನುಗ್ಗಿದೆ ಎಂದು ಹೇಳಲಾಗುತ್ತಿದೆ. ಬ್ಯಾರೆಲ್ ಸ್ವಚ್ಛಗೊಳಿಸುತ್ತಿದ್ದಾಗ ಏಕಾಏಕಿ ಗುಂಡು ಹಾರಿದ್ದು, ಪಿಎಸಿ ಕಾನ್ಸ್ಟೇಬಲ್ಗೆ ಗುಂಡು ತಗುಲಿದೆ. ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಘಟನೆ ಕುರಿತು ಮೃತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಎಸ್‌ಪಿ ಸೆಕ್ಯುರಿಟಿ ಪಂಕಜ್ ಪಾಂಡೆ ಅವರು ಈ ಬಗ್ಗೆ ಮಾತನಾಡಿ, 2019 ರ ಬ್ಯಾಚ್ ಕಾನ್ಸ್ಟೇಬಲ್ ಕುಲದೀಪ್ ಕುಮಾರ್ ತ್ರಿಪಾಠಿ ಅವರಿಗೆ ಸುಮಾರು 30 ವರ್ಷ ವಯಸ್ಸು. ತ್ರಿಪಾಠಿ ಅವರು ಪಿಎಸಿ 25 ಬೆಟಾಲಿಯನ್ ರಾಯ್ ಬರೇಲಿ ಬಿ ಕಂಪನಿಯ ಕಾನ್ಸ್ಟೇಬಲ್ ಆಗಿದ್ದರು. ವೇದ ಮಂದಿರದ ಬಳಿಯ ಕ್ರಾಸಿಂಗ್ ಅರಣ್ಯದಲ್ಲಿ ಅವರ ಕರ್ತವ್ಯ. ಶುಕ್ರವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಕಾನ್ಸ್ಟೇಬಲ್ ಅವರ ಗನ್‌ಗೆ ನೀರು ನುಗ್ಗಿದೆ. ಹೀಗಾಗಿ ತ್ರಿಪಾಠಿ ತನ್ನ ಬ್ಯಾರೆಲ್ ಸ್ವಚ್ಛಗೊಳಿಸಲು ಯತ್ನಿಸುತ್ತಿದ್ದರು ಎಂದು ತಿಳಿಸಿದರು.
ಬ್ಯಾರೆಲ್ ಸ್ವಚ್ಛಗೊಳಿಸುವ ಭರದಲ್ಲಿ ಗುಂಡು ಹಾರಿದ್ದು, ಆ ಗುಂಡು ಕತ್ತಿಗೆಗೆ ತಗುಲಿದೆ. ಕರ್ತವ್ಯದಲ್ಲಿದ್ದ ಇತರ ಸಿಬ್ಬಂದಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಖನೌಗೆ ಸ್ಥಳಾಂತರಿಸಲಾಗುತ್ತಿತ್ತು. ಅಷ್ಟರಲ್ಲೇ ಅವರು ಸಾವನ್ನಪ್ಪಿದರು. ಇನ್ನು ಅವರ ಮೃತ ದೇಹವನ್ನು ಮರಣೊತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಎಸ್‌ಪಿ ಸೆಕ್ಯುರಿಟಿ ಪಂಕಜ್ ಪಾಂಡೆ ತಿಳಿಸಿದ್ದಾರೆ.
ಓದಿ:ಕೈಯಲ್ಲಿ ಗನ್ ಹಿಡಿದು ಮಹಿಳೆ ಹೈಡ್ರಾಮಾ.. ಕಾರಿನಿಂದ ಗುದ್ದಿ ಆರೋಪಿ ಸೆರೆ ಹಿಡಿದ ಪೊಲೀಸರು!
ಗುಂಡು ಹಾರಿಸಿ ಇಬ್ಬರ ಹತ್ಯೆ ಮಾಡಿದ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್:ಸಾಕುನಾಯಿಗಳ ವಿಚಾರವಾಗಿ ನಡೆದ ಜಗಳದಲ್ಲಿ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ವೊಬ್ಬರು ಗುಂಡು ಹಾರಿಸಿ ಇಬ್ಬರನ್ನು ಕೊಲೆಗೈದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ಜುಲೈ 17ರ ಗುರುವಾರ ತಡರಾತ್ರಿ ನಡೆದಿತ್ತು. ಘಟನೆಯಲ್ಲಿ ಓರ್ವ ಗರ್ಭಿಣಿ ಸೇರಿ ಇತರ ಆರು ಮಂದಿ ಗಾಯಗೊಂಡಿದ್ದರು. ಶುಕ್ರವಾರ ಬೆಳಗ್ಗೆ ಆರೋಪಿ ಸೆಕ್ಯೂರಿಟಿ ಗಾರ್ಡ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದರು.
ಮೃತರನ್ನು ರಾಹುಲ್ ವರ್ಮಾ (28) ಹಾಗೂ ಈತನ ಸೋದರ ಮಾವ ವಿಮಲ್ ಅಮ್ಚಾ (35) ಎಂದು ಗುರುತಿಸಲಾಗಿದೆ. ವಿಮಲ್ ಅಮ್ಚಾ ಹೇರ್ ಕಟಿಂಗ್ ಸಲೂನ್ ನಡೆಸುತ್ತಿದ್ದರು. ರಾಜ್ಪಾಲ್ ಸಿಂಗ್ ರಾಜಾವತ್ ಗುಂಡು ಹಾರಿಸಿದ ಆರೋಪಿ. ಈತ ಬ್ಯಾಂಕ್ ಆಫ್ ಬರೋಡಾದ ಸ್ಥಳೀಯ ಶಾಖೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಪರವಾನಗಿ ಹೊಂದಿದ್ದ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.