ಮೈನ್‌ಪುರಿ(ಉತ್ತರಪ್ರದೇಶ):ಯುಪಿ ರೋಡ್ ವೇಸ್‌ನಿಂದ ವಜಾಗೊಂಡ ಗುತ್ತಿಗೆ ಆಪರೇಟರ್ ಮೋಹಿತ್ ಸಾವಿನ ವಿವಾದ ಹೆಚ್ಚಾಗುತ್ತಿದೆ. ಸೋಮವಾರ ಗುರು ಪೊಲೀಸ್ ಠಾಣೆ ವ್ಯಾಪ್ತಿಯ ಉಷ್ಮಾ ರೈಲ್ವೇ ಗೇಟ್ ಎದುರು ಗುತ್ತಿಗೆ ಆಪರೇಟರ್ ಮೋಹಿತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ಜಿಆರ್‌ಪಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿತ್ತು. ಕೆಲಸದಿಂದ ವಜಾಗೊಳಿಸಿದ ನಂತರ ಮೋಹಿತ್ ಒತ್ತಡಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಮೋಹಿತ್ ಪತ್ನಿ ಆರೋಪಿಸಿದ್ದಾರೆ.
ಮಾಹಿತಿ ಪ್ರಕಾರ, ನಾಗ್ಲಾ ಖುಶಾಲಿ ಗ್ರಾಮದ ನಿವಾಸಿ ರಾಜೇಂದ್ರ ಯಾದವ್ ಅವರ ಪುತ್ರ ಮೋಹಿತ್ ಯಾದವ್ (36) ಅವರು ಖುಶಾಲಿ ಮತ್ತು ಪಟ್ಟಣ ಘಿರೋರ್ ಗ್ರಾಮದಲ್ಲಿ ಮನೆ ಹೊಂದಿದ್ದಾರೆ. ಬರೇಲಿ ಡಿಪೋದಲ್ಲಿ ಕಳೆದ 8 ವರ್ಷಗಳಿಂದ ಗುತ್ತಿಗೆ ಆಪರೇಟರ್ ಆಗಿದ್ದರು. ಜೂನ್ 3 ರಂದು ಮೋಹಿತ್ ಅವರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಬರೇಲಿ-ದೆಹಲಿ ಹೆದ್ದಾರಿಯಲ್ಲಿ ಬಸ್ ನಿಲ್ಲಿಸಿ ಇಬ್ಬರು ಪ್ರಯಾಣಿಕರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿದ ಆರೋಪ ಅವರ ಮೇಲಿದೆ. ಇದಾದ ಬಳಿಕ ರಸ್ತೆ ನಿರ್ವಹಣಾ ಅಧಿಕಾರಿಗಳು ಚಾಲಕನ ಮೇಲೆ ಕ್ರಮ ಕೈಗೊಂಡು ಕೆಲಸದಿಂದ ಅಮಾನತುಗೊಳಿಸಿದ್ದರು.
ತೀವ್ರ ಒತ್ತಡಕ್ಕೊಳಗಾಗಿದ್ದ ಮೋಹಿತ್ ತನ್ನ ಕುಟುಂಬ ಸದಸ್ಯರೊಂದಿಗೆ ತನ್ನ ಹಳ್ಳಿಯಲ್ಲಿ ಉಳಿದುಕೊಂಡಿದ್ದರು. ಸೋಮಾವಾರ ಗ್ರಾಮದ ಮನೆಯಿಂದ ಪಟ್ಟಣದ ಮನೆಗೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಕೊಸ್ಮಾ ರೈಲ್ವೆ ಗೇಟ್ ಬಳಿ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೋಹಿತ್ ಯಾದವ್ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.