ಲಖನೌ( ಉತ್ತರ ಪ್ರದೇಶ) : ರಾಜ್ಯದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಬಾಟಲ್ನಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನು ಇಬ್ಬರು ಮಕ್ಕಳಿಗೆ ಬಲವಂತವಾಗಿ ಕುಡಿಸುವ ಮೂಲಕ ಪುಂಡರ ಗುಂಪೊಂದು ಅನಾಗರಿಕರಂತೆ ವರ್ತಿಸಿದೆ. ಜೊತೆಗೆ, ಮಕ್ಕಳಿಬ್ಬರ ಖಾಸಗಿ ಭಾಗಕ್ಕೆ ಹಸಿರು ಮೆಣಸಿನಕಾಯಿ ಉಜ್ಜಿ ದೌರ್ಜನ್ಯ ಎಸಗುವ ಮೂಲಕ ಥಳಿಸಿದ್ದಾರೆ. ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಆಧಾರದ ಮೇಲೆ ಕ್ರಮ ಕೈಗೊಂಡಿರುವ ಪೊಲೀಸರು ಆರು ಜನರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಮೂತ್ರ ಕುಡಿಯಲು ನಿರಾಕರಿಸಿದ್ದಕ್ಕೆ ಬೆದರಿಕೆ :ಘಟನೆಯು ಸಿದ್ದಾರ್ಥನಗರ ಜಿಲ್ಲೆಯ ಪತ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಕ್ಕಳ ಜೊತೆ ಅನುಚಿತವಾಗಿ ವರ್ತಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಮೊದಲು ಆರೋಪಿಗಳು ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿದರು. ಬಳಿಕ ಇಬ್ಬರೂ ಮಕ್ಕಳಿಗೆ ಅದನ್ನು ಕುಡಿಯಲು ಹೇಳಿದರು. ಕುಡಿಯಲು ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿ ಥಳಿಸಿದ್ದಾರೆ.
ಇದನ್ನೂ ಓದಿ :ಆಟೋ ಚಾಲಕನನ್ನ ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಗ್ಯಾಂಗ್
ವಿಡಿಯೋದಲ್ಲಿ, ಬಾಲಕರು ತಮ್ಮ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡು, ಪ್ಯಾಂಟ ಅನ್ನು ಕೆಳಕ್ಕೆ ಎಳೆದುಕೊಂಡು ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಅವರ ಖಾಸಗಿ ಭಾಗಕ್ಕೆ ಹಸಿರು ಮೆಣಸಿನಕಾಯಿ ಉಜ್ಜಿದ್ದಾನೆ. ಅಷ್ಟೇ ಅಲ್ಲದೆ, ಇಂಜೆಕ್ಷನ್ ಟ್ಯೂಬ್ನಿಂದ ಬಾಲಕರಿಗೆ ಪೆಟ್ರೋಲ್ ಇಂಜೆಕ್ಟ್ ಮಾಡಲಾಗಿದೆ. ನೋವಿನಿಂದ ಬಾಲಕರು ಚೀರಾಡಿದ್ದಾರೆ.