ಕರ್ನಾಟಕ

karnataka

ETV Bharat / bharat

ಪತ್ನಿಯ ಬರ್ಬರವಾಗಿ ಕೊಂದು, ಮಗನನ್ನು ರೈಲ್ವೆ ಹಳಿಗೆ ದೂಡಿ ಕೊಲೆಗೆ ಯತ್ನಿಸಿದ ಪಾಪಿ ಅಪ್ಪ! - ಮಗನನ್ನು ರೈಲ್ವೆ ಹಳಿಗೆ ಹಾಕಿ ಸಾಯಿಸಲು ಯತ್ನ

crime news: ಮದ್ಯಪಾನ ವಿಷಯವಾಗಿ ನಡೆಯುತ್ತಿದ್ದ ಜಗಳದಲ್ಲಿ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ, 2 ವರ್ಷದ ಮಗನನ್ನು ರೈಲ್ವೆ ಹಳಿಗೆ ಹಾಕಿ ಕೊಲೆಗೆ ಯತ್ನಿಸಿದ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ನಡೆದಿದೆ.

ಪತ್ನಿ ಕೊಂದು ಮಗನ ಕೊಲೆಗೆ ಯತ್ನ
ಪತ್ನಿ ಕೊಂದು ಮಗನ ಕೊಲೆಗೆ ಯತ್ನ

By

Published : Jul 27, 2023, 9:41 PM IST

ಅಲಿಗಢ( ಉತ್ತರಪ್ರದೇಶ):ಕೌಟುಂಬಿಕ ಕಲಹದಿಂದ ಬೇಸತ್ತ ಗಂಡನೊಬ್ಬ ಪತ್ನಿಯನ್ನು ಕೊಂದು, 2 ವರ್ಷದ ಮಗನನ್ನು ರೈಲ್ವೆ ಹಳಿಗಳ ಮೇಲಿಟ್ಟು ಕೊಲೆಗೆ ಪ್ರಯತ್ನಿಸಿದ ಘಟನೆ ಉತ್ತರಪ್ರದೇಶದ ಅಲಿಗಢ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಜನರು ಮಗುವನ್ನ ರಕ್ಷಿಸಿದ್ದಾರೆ. ಬಳಿಕ ಕೊಲೆಗಡುಕ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಲಿಗಢದ ಮೌಲಾನಾ ಆಜಾದ್ ನಗರದಲ್ಲಿ ನಿವಾಸಿಯಾದ ಆಸಿಫ್ ಕೊಲೆಗಾರ. 4 ವರ್ಷಗಳ ಹಿಂದೆ ಆರೋಪಿ ಆಸಿಫ್​ , ಹಿನಾ ಎಂಬಾಕೆಯನ್ನು ಮದುವೆಯಾಗಿದ್ದ. ದಂಪತಿಗೆ ಓರ್ವ ಪುತ್ರಿ ಇದ್ದಾಳೆ. ದಂಪತಿ ಮಧ್ಯೆ ಯಾವ್ಯಾವುದೋ ವಿಚಾರಕ್ಕಾಗಿ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಆಸಿಫ್​ ಬೇಸತ್ತಿದ್ದ. ಬುಧವಾರ ರಾತ್ರಿ ಊಟ ಮುಗಿಸಿಕೊಂಡು ಎಲ್ಲರೂ ಮಲಗಿದ ವೇಳೆ ಪತ್ನಿಯನ್ನು ಆಸಿಫ್​ ಹರಿತವಾದ ವಸ್ತುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಬಳಿಕ 2 ವರ್ಷದ ಮಗನನ್ನು ಎತ್ತಿಕೊಂಡು ಹೋಗಿ ರೈಲ್ವೆ ಹಳಿಯ ಮೇಲೆ ಹಾಕಿ ಸಾಯಿಸಲು ಪ್ರಯತ್ನಿಸಿದ್ದಾನೆ. ಇದನ್ನು ಕಂಡ ಜನರು ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಆರೋಪಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ. ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರ ಸಂಬಂಧಿಕರಿಂದ ದೂರು ಪಡೆದು ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕುಡಿತವೇ ಜಗಳಕ್ಕೆ ಕಾರಣ?:ಆಸಿಫ್​ ದಿನವೂ ಮದ್ಯಪಾನ ಮಾಡುತ್ತಿದ್ದ ಎಂಬುದು ದಂಪತಿ ನಡುವಿನ ಜಗಳಕ್ಕೆ ಕಾರಣ ಎಂದು ತಿಳಿದು ಬಂದಿದೆ. ಆರೋಪಿ ಕುಡಿದು ಬರುವುದನ್ನು ಪತ್ನಿ ಪ್ರಶ್ನಿಸುತ್ತಿದ್ದಳು, ಇದು ಜಗಳಕ್ಕೆ ನಾಂದಿಯಾಗಿತ್ತು. ದಿನವೂ ತಗಾದೆ ತೆಗೆಯುತ್ತಿದ್ದ ಪತ್ನಿ ಮೇಲೆ ಆಸಿಫ್​ ಸಿಟ್ಟು ಬೆಳೆಸಿಕೊಂಡಿದ್ದ ಇದೇ ಕಾರಣಕ್ಕಾಗಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕುಟುಂಬ ಸದಸ್ಯರು ಮತ್ತು ಸುತ್ತಮುತ್ತಲಿನ ಜನರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಶೀಲ ಶಂಕಿಸಿ ಪತ್ನಿ ಕೊಂದ ಪತಿ:ಕರ್ನಾಟಕದ ಮೈಸೂರಿನಲ್ಲಿ ಶೀಲ ಶಂಕಿಸಿ ಪತ್ನಿಯನ್ನು ಪತಿಯೇ ಕೊಲೆ ಮಾಡಿದ ಘಟನೆ ಈಚೆಗೆ ನಡೆದಿತ್ತು. ನಗರದ ಕೆಎಸ್‌ಆರ್‌ಟಿಸಿ ಲೇಔಟ್ ನಿವಾಸಿ ಲೋಕೇಶ್ ಆರಾಧ್ಯ ಆರೋಪಿಯಾಗಿದ್ದು, ಪತ್ನಿ ಪಲ್ಲವಿ ಹತ್ಯೆಯಾದ ರ್ದುದೈವಿ.

ಲೋಕೇಶ್ ಮತ್ತು ಪಲ್ಲವಿ ಅವರು 9 ವರ್ಷದ ಹಿಂದೆ ಮದುವೆಯಾಗಿದ್ದರು. ಇವರಿಗೆ 7 ವರ್ಷದ ಮಗನಿದ್ದು, ಕೆಲಕಾಲ ಈ ದಂಪತಿ ಮೈಸೂರು ತಾಲೂಕಿನ ವರುಣಾದಲ್ಲಿ ವಾಸವಾಗಿದ್ದರು. ಮಗನನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂಬ ಕಾರಣದಿಂದ ಕಳೆದ 2 ತಿಂಗಳ ಹಿಂದೆ ಮೈಸೂರಿಗೆ ಬಂದು ಕೆಎಸ್‌ಆರ್‌ಟಿ ಬಡವಾಣೆಯಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ಇದ್ದರು.

ಆರೋಪಿ ಪತಿ ಲೋಕೇಶ್ ಆಗ್ಗಾಗೆ ತನ್ನ ಹೆಂಡತಿಯ ಶೀಲವನ್ನು ಶಂಕಿಸಿ ಜಗಳ ಮಾಡುತ್ತಿದ್ದರು. ಹೀಗಿರುವಾಗ ಜೂನ್​ 16 ರಂದು ಹೆಂಡತಿ ಪಲ್ಲವಿಯ ಮೇಲೆ ಹಲ್ಲೆ ಮಾಡಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಈ ಸಂಬಂಧ ಪಲ್ಲವಿ ಅವರ ತಂದೆ ಆಲನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿ ಲೋಕೇಶ್‌ನ ಶೋಧ ನಡೆಸುವಾಗ ಆತನೇ ಬಂದು ಪೊಲೀಸ್ ಠಾಣೆಗೆ ಶರಣಾಗಿದ್ದ.

ಇದನ್ನೂ ಓದಿ:ಅನುಕಂಪದ ನೌಕರಿಯ ಆಸೆ.. ಪತಿಯನ್ನೇ ಮುಗಿಸಿದ ಪತ್ನಿ!

ABOUT THE AUTHOR

...view details