ಬರೇಲಿ (ಉತ್ತರ ಪ್ರದೇಶ):ಬರೇಲಿಯಲ್ಲಿ ನಡೆದ ಕಿರುಕುಳದ ವಿರುದ್ಧದ ವಿದ್ಯಾರ್ಥಿನಿಯೊಬ್ಬಳು ಪ್ರತಿಭಟಿಸಿದ್ದಳು. ಹುಡುಗರು ಚುಡಾಯಿಸುವುದನ್ನು ಹುಡುಗಿಯೊಬ್ಬಳು ವಿರೋಧಿಸಿದ್ದಳು. ಈ ವೇಳೆ ಆಕ್ರೋಶಗೊಂಡ ಹುಡುಗರು ವಿದ್ಯಾರ್ಥಿನಿಯನ್ನು ರೈಲಿನ ಮುಂದೆ ಎಸೆದಿದ್ದಾರೆ. ಚಲಿಸುತ್ತಿದ್ದ ರೈಲಿಗೆ ವಿದ್ಯಾರ್ಥಿನಿ ಸಿಲುಕಿದ್ದ ಪರಿಣಾಮ, ಆಕೆಯ ಒಂದು ಕೈ ಹಾಗೂ ಎರಡೂ ಕಾಲುಗಳು ತುಂಡಾಗಿವೆ. ಮಾಹಿತಿ ತಿಳಿದ ಪೊಲೀಸರು ಆಗಮಿಸಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲವು ಮೂಳೆಗಳು ಮುರಿದು ಹೋಗಿರುವ ಕಾರಣ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ.
ಮಾಹಿತಿಯ ಪ್ರಕಾರ, ವಿದ್ಯಾರ್ಥಿನಿ ಕೋಚಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಅಧ್ಯಯನ ಮಾಡಲು ಹೋಗುತ್ತಿದ್ದಳು. ದಾರಿಯಲ್ಲಿ ಹೋಗುತ್ತಿದ್ದ ಹುಡುಗನೊಬ್ಬ ಈ ವಿದ್ಯಾರ್ಥಿನಿಗೆ ಆಗಾಗ ಅಡ್ಡಿಪಡಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈತನು ಹಲವು ಬಾರಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆ. ಚುಡಾಯಿಸುವಿಕೆಯಿಂದ ಬೇಸತ್ತ ವಿದ್ಯಾರ್ಥಿನಿ ಮನೆಯವರಿಗೂ ಕೂಡ ವಿಷಯ ತಿಳಿಸಿದ್ದಳು. ಈ ಬಗ್ಗೆ ಕುಟುಂಬಸ್ಥರು, ಆರೋಪಿಯ ಸಂಬಂಧಿಕರಿಗೆ ದೂರು ನೀಡಿದ್ದರು.
ವಿದ್ಯಾರ್ಥಿನಿ ಕೋಚಿಂಗ್‌ಗೆ ಹೋಗಿದ್ದ ವೇಳೆ ಘಟನೆ:ಮಂಗಳವಾರ ವಿದ್ಯಾರ್ಥಿನಿ ಕೋಚಿಂಗ್‌ಗೆ ತೆರಳಿದ್ದಳು ಎನ್ನಲಾಗಿದೆ. ಇದಾದ ಬಳಿಕ ರೈಲ್ವೆ ಕ್ರಾಸಿಂಗ್ ಬಳಿ ಆಕೆ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅವಳ ಒಂದು ಕೈ ಮತ್ತು ಎರಡೂ ಕಾಲುಗಳನ್ನು ಕಟ್ ಆಗಿದ್ದವು. ಹುಡುಗರ ಗುಂಪು ತನ್ನನ್ನು ರೈಲಿನ ಮುಂದೆ ಎಸೆದು ಕೊಲ್ಲಲು ಯತ್ನಿಸಿದ್ದರು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಆರೋಪಿಗಳು ಕಳೆದ ಎರಡು ತಿಂಗಳಿನಿಂದ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದರು ಎಂದು ಹುಡುಗಿಯ ಕುಟುಂಬಸ್ಥರು ತಿಳಿಸಿದ್ದಾರೆ.