ಲಖನೌ, ಉತ್ತರಪ್ರದೇಶ:ನಗರದಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮದುವೆಯಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ಮಹಿಳೆಯೊಬ್ಬಳು ಎಂಜಿನಿಯರ್ ಒಬ್ಬರ ಜೊತೆ ಪ್ರೀತಿಯ ನಾಟಕವಾಡಿದ್ದಾಳೆ. ಬಳಿಕ ಏಕಾಂತದಲ್ಲಿದ್ದ ಫೋಟೋಗಳನ್ನು ತೆಗೆದು ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದ ಹಿನ್ನೆಲೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಬಿಟ್ಟಿರುವ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ.
ಯುವಕನ ಅಶ್ಲೀಲ ಚಿತ್ರ ತೆಗೆದ ಮಹಿಳೆ:ಸರೋಜಿನಿ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಪ್ರಯಾಗ್‌ರಾಜ್ ನಿವಾಸಿ ಕೆಲ ದಿನಗಳ ಮಟ್ಟಿಗೆ ಸರೋಜಿನಿನಗರ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ಸಮಯದಲ್ಲಿ ಆತ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಆತನಿಗೆ ಅದೇ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮಹಿಳೆಯೊಂದಿಗೆ ಸ್ನೇಹ ಬೆಳೆದಿದೆ. ವಾಟ್ಸ್ಆ್ಯಪ್ ಚಾಟ್ ಜೊತೆಗೆ ಇಬ್ಬರೂ ವಿಡಿಯೋ ಕಾಲ್ನಲ್ಲಿ ಮಾತನಾಡತೊಡಗಿದ್ದಾರೆ. ಇದಾದ ನಂತರ ಮಹಿಳೆಯೂ ಹುಡುಗನ ಕೋಣೆಗೆ ಬರಲು ಆರಂಭಿಸಿದ್ದಾಳೆ. ಈ ವೇಳೆ ಮಹಿಳೆ ಇಂಜಿನಿಯರ್‌ನ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ನಕಲಿ ಖಾತೆಯ ಮೂಲಕ ಫೋಟೋಗಳು ವೈರಲ್: ’’ಆರೋಪಿ ಮಹಿಳೆ ತನ್ನಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದಳು. 10 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಳು. ಬಳಿಕ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ಫೋಟೋಗಳನ್ನು ವೈರಲ್ ಆಗುತ್ತವೆ ಎಂದು ಬೆದರಿಕೆ ಕೂಡಾ ಹಾಕಿದ್ದಳು, ನಾನು ಹಣ ನೀಡಲು ನಿರಾಕರಿಸಿದಾಗ ಮಹಿಳೆ ಫೇಸ್‌ಬುಕ್‌ನಲ್ಲಿ ಸುಮಾರು 38 ನಕಲಿ ಖಾತೆಗಳನ್ನು ಸೃಷ್ಟಿಸಿ ನನ್ನ ಚಿತ್ರಗಳನ್ನು ವೈರಲ್ ಮಾಡಿದ್ದಾಳೆ‘‘ ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಹಲವು ಯುವಕರಿಂದ ಹಣ ವಸೂಲಿ :ಈ ಬಗ್ಗೆ ಸಂತ್ರಸ್ತ ಎಂಜಿನಿಯರ್ ಸೈಬರ್ ಕ್ರೈಂ ಎಡಿಜಿ, ಸೈಬರ್ ಕ್ರೈಂ ಎಸ್ಪಿಗೂ ದೂರು ನೀಡಿದ್ದಾರೆ. ಅದರ ತನಿಖೆಯಲ್ಲಿ ಆರೋಪಿ ಮಹಿಳೆ ಈಗಾಗಲೇ ಅನೇಕ ಯುವಕರ ಅಶ್ಲೀಲ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಅವರಿಂದ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಅವಳ ವಿಚ್ಛೇದನ ಪ್ರಕರಣವು ನ್ಯಾಯಾಲಯದಲ್ಲಿ ನಡೆಯುತ್ತಿದೆ. ದೂರು ನೀಡಿದರೂ ಮಹಿಳೆಯನ್ನು ಬಂಧಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.