ಕರ್ನಾಟಕ

karnataka

ETV Bharat / bharat

ಟ್ರೈನ್​ ಇಂಜಿನ್​ಗೆ ನೇತಾಡುತ್ತಲೇ ಇತ್ತು ಯುವಕನ ಮೃತದೇಹ; ಮುಂದೆ ಸಾಗುತ್ತಲೇ ಇತ್ತು ರೈಲು

Dead Body hanging on Engine: ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಯುವಕನ ಮೃತ ದೇಹವೊಂದು ರೈಲು ಇಂಜಿನ್‌ನ ಮಂಭಾಗದಲ್ಲಿ ಸಿಲುಕಿಕೊಂಡು ನೇತಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ವಾಹನವನ್ನು ನಿಲ್ಲಿಸಿ ಮುಂದಿನ ಕ್ರಮೈ ಕೈಗೊಂಡರು.

dead body on engine in firozabad  dead body hanging on engine  dead body on engine train running  ಟ್ರೈನ್​ ಇಂಜಿನ್​ಗೆ ನೇತಾಡುತ್ತಲೇ ಇತ್ತು ಯುವಕನ ಮೃತದೇಹ  ಮುಂದೆ ಸಾಗುತ್ತಲೇ ಇತ್ತು ರೈಲು  ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ದುರಂತ  ಯುವಕನ ಮೃತ ದೇಹ  ರೈಲು ಇಂಜಿನ್‌ನ ಮಂಭಾಗದಲ್ಲಿ ಸಿಲುಕಿ  ಅಚ್ಚರಿಯ ಪ್ರಕರಣವೊಂದು ಬೆಳಕಿಗೆ  ಫರೂಕಾಬಾದ್ ಪ್ಯಾಸೆಂಜರ್ ರೈಲಿನ ಇಂಜಿನ್​
ಟ್ರೈನ್​ ಇಂಜಿನ್​ಗೆ ನೇತಾಡುತ್ತಲೇ ಇತ್ತು ಯುವಕನ ಮೃತದೇಹ

By ETV Bharat Karnataka Team

Published : Nov 14, 2023, 10:29 AM IST

ಟ್ರೈನ್​ ಇಂಜಿನ್​ಗೆ ನೇತಾಡುತ್ತಲೇ ಇತ್ತು ಯುವಕನ ಮೃತದೇಹ

ಫಿರೋಜಾಬಾದ್(ಉತ್ತರಪ್ರದೇಶ):ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬನ ಮೃತದೇಹ ಫರೂಕಾಬಾದ್ ಪ್ಯಾಸೆಂಜರ್ ರೈಲಿನ ಇಂಜಿನ್​ನ ಮುಂಭಾಗ ನೇತಾಡುತ್ತಿತ್ತು. ಇದು ಲೋಕೋ ಪೈಲಟ್​ ಗಮನಕ್ಕೆ ಬರದ ಹಿನ್ನೆಲೆ ರೈಲು ಮುಂದಕ್ಕೆ ಸಾಗುತ್ತಲೇ ಇತ್ತು. ರೈಲು ಹಲವಾರು ಕಿಲೋಮೀಟರ್ ಪ್ರಯಾಣಿಸಿದ ನಂತರ ಟ್ರ್ಯಾಕ್ ಬದಿಯಲ್ಲಿ ನಿಂತಿದ್ದ ಸ್ಥಳೀಯರು ರೈಲಿನ ಇಂಜಿನ್​ಗೆ ನೇತಾಡುತ್ತಿದ್ದ ಮೃತದೇಹವನ್ನು ಗಮನಿಸಿದ್ದಾರೆ. ಈ ಬಗ್ಗೆ ಲೋಕೋ ಪೈಲಟ್​ ಅವರ ಗಮನಕ್ಕೆ ತರಲು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಬಳಿಕ ಈ ಸಂಗತಿಯನ್ನು ಕೊ ಪೈಲಟ್​ ಗಮನಕ್ಕೆ ತರುವಲ್ಲಿ ಯಶಸ್ವಿಯಾದರು.

ಇನ್ನು, ಈ ವಿಷಯ ಲೋಕೋ ಪೈಲಟ್​ ಗಮನಕ್ಕೆ ಬಂದಾಕ್ಷಣ ಕೂಡಲೇ ರೈಲನ್ನು ನಿಲ್ಲಿಸಿದ್ದರು. ಆಗ ಮೃತ ದೇಹವನ್ನು ನೋಡಿ ರೈಲ್ವೇ ಪೊಲೀಸರಿಗೆ ಮಾಹಿತಿ ರವಾನಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದರು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಫರೂಕಾಬಾದ್ ಶಿಕೋಹಾಬಾದ್ ರೈಲ್ವೆ ವಿಭಾಗದಲ್ಲಿ ಈ ಘಟನೆ ನಡೆದಿದೆ.

ಫರೂಕಾಬಾದ್‌ನಿಂದ ಶಿಕೋಹಾಬಾದ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಇಂಜಿನ್‌ನ ಮುಂಭಾಗಕ್ಕೆ ಸಿಲುಕಿಕೊಂಡಿದ್ದ ಯುವಕನ ಮೃತದೇಹ ನೇತಾಡುತ್ತಿತ್ತು. ಭೂದಾ ಭರತನ ಗ್ರಾಮದಲ್ಲಿ ಟ್ರ್ಯಾಕ್ ಬಳಿ ಕುಳಿತಿದ್ದ ಸ್ಥಳೀಯರು ಇದನ್ನು ಕಂಡು ಜೋರಾಗಿ ಕಿರುಚಿಕೊಂಡಿದ್ದಾರೆ. ಶಬ್ದ ಕೇಳಿ ರೈಲಿನ ಲೋಕೋ ಪೈಲಟ್ ಸ್ವಲ್ಪ ದೂರದ ನಂತರ ರೈಲನ್ನು ನಿಲ್ಲಿಸಿದರು. ಇದಾದ ಬಳಿಕ ಮೃತದೇಹವನ್ನು ಕೆಳಗಿಳಿಸಿ, ಠಾಣಾ ಅಧೀಕ್ಷಕ ಶಿಕೋಹಾಬಾದ್ ಅವರಿಗೆ ವಿಷಯದ ಬಗ್ಗೆ ಮಾಹಿತಿ ನೀಡಲಾಯಿತು.

ಠಾಣೆ ಅಧೀಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತರನ್ನು 26 ವರ್ಷದ ಸೌರವ್ ಕುಮಾರ್ ಎಂದು ಗುರುತಿಸಲಾಗಿದ್ದು, ಸಿರ್ಸಗಂಜ್ ಪೊಲೀಸ್ ಠಾಣೆಯ ನಾಗ್ಲಾ ಮದರಿ ಗ್ರಾಮದ ನಿವಾಸಿ ಬೆಂಗಾಲಿ ಬಾಬು ಅವರ ಮಗ ಎಂದು ಗುರುತಿಸಲಾಗಿದೆ. ಯುವಕನ ಶವ ಇಂಜಿನ್‌ಗೆ ಹೇಗೆ ನೇತಾಡುತ್ತಿತ್ತು ಎಂಬುದು ಯಾರಿಗೂ ತಿಳಿದಿಲ್ಲ. ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಶಿಕೋಹಾಬಾದ್ ಸ್ಟೇಷನ್ ಸೂಪರಿಂಟೆಂಡೆಂಟ್ ರಾಜೇಶ್ವರ್ ಸಿಂಗ್ ಮಾತನಾಡಿ, ಫರೂಕಾಬಾದ್ ಪ್ಯಾಸೆಂಜರ್ ಸಿಬ್ಬಂದಿಯಿಂದ ಇಂಜಿನ್‌ನ ಮುಂಭಾಗ ಮೃತದೇಹ ನೇತಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು, ಇಂಜಿನ್​​ಗೆ ಸಿಲುಕಿಕೊಂಡಿದ್ದ ಮೃತದೇಹವನ್ನು ಬೇರ್ಪಡಿಸಲಾಯಿತು. ಬಳಿಕ ಈ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿದೆ. ಇದಾದ ನಂತರ ರೈಲು ಮುಂದಕ್ಕೆ ಪ್ರಯಾಣ ಬೆಳಸಿತು.

ಓದಿ:ಸಿಗದ ಆಂಬ್ಯುಲೆನ್ಸ್: ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಬಾಲಕಿ ಶವ ಸಾಗಿಸಿದ ಬುಡಕಟ್ಟು ಕುಟುಂಬ

ABOUT THE AUTHOR

...view details