ಆಗ್ರಾ (ಉತ್ತರ ಪ್ರದೇಶ):ನಗರದ ಸರ್ಕಾರಿ ಬಾಲ ಗೃಹಯೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಸೂಪರಿಂಟೆಂಡೆಂಟ್ ಪೂನಂ ಪಾಲ್ ಬಾಲಕಿಯನ್ನು ಚಪ್ಪಲಿಯಿಂದ ಥಳಿಸುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದೆ. ಡಿಎಂ( ಜಿಲ್ಲಾ ಮ್ಯಾಜಿಸ್ಟ್ರೇಟ್) ಆದೇಶದ ಮೇರೆಗೆ ಬಾಲ ಗೃಹದ ಅಧೀಕ್ಷಕಿ(ಸೂಪರಿಂಟೆಂಡೆಂಟ್)ಯನ್ನು ಸೆಪ್ಟೆಂಬರ್ 12ರಂದು ಅಮಾನತುಗೊಳಿಸಲಾಗಿದೆ.
ಆಯುಕ್ತೆ ರೀಟಾ ಮಹೇಶ್ವರಿ ಹೇಳಿದ್ದೇನು?:ಆಯುಕ್ತೆ ರೀಟಾ ಮಹೇಶ್ವರಿ ಅವರ ಪ್ರಕಾರ, ''ಆರೋಪಿ ಸೂಪರಿಂಟೆಂಡೆಂಟ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಆಗ್ರಾದ ಪಂಚಕುಯಾನ್‌ನಲ್ಲಿರುವ ಸರ್ಕಾರಿ ಬಾಲ ಗೃಹದ ವಿಡಿಯೋ ವೈರಲ್ ಆಗಿದೆ. ಸೆಪ್ಟೆಂಬರ್ 4ರಂದು ವೈರಲ್ ಆಗಿದ್ದ ವಿಡಿಯೋದಲ್ಲಿ, ಸೂಪರಿಂಟೆಂಡೆಂಟ್ ಪೂನಂ ಪಾಲ್ ಹಾಸಿಗೆಯ ಮೇಲೆ ಮಲಗಿದ್ದ ಹುಡುಗಿಯ ಮೇಲೆ ಯಾವುದೇ ಕಾರಣವಿಲ್ಲದೇ, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ'' ಎಂದು ಅವರು ತಿಳಿಸಿದ್ದಾರೆ.
ತನಿಖಾ ವರದಿ ಬಂದ ಬಳಿಕ ಸೂಪರಿಂಟೆಂಡೆಂಟ್ ಅಮಾನತು:ಈ ಕುರಿತು ಡಿಎಂ ಭಾನುಚಂದ್ರ ಗೋಸ್ವಾಮಿ ಅವರು, ಈ ಪ್ರಕರಣದ ತನಿಖೆಯನ್ನು ನಗರ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು. ತನಿಖೆಯ ಸಮಯದಲ್ಲಿ, ತಂಡವು ಸೂಪರಿಂಟೆಂಡೆಂಟ್ನ ಅಮಾನವೀಯ ವರ್ತನೆಯ ಕುರಿತಂತೆ ಹಲವು ಪುರಾವೆಗಳನ್ನು ಗಮನಿಸಿದೆ. ತನಿಖಾ ವರದಿಯನ್ನು ಸ್ವೀಕರಿಸಿದ ಡಿಎಂ ಸೆಪ್ಟೆಂಬರ್ 12 ರಂದು ಅಧೀಕ್ಷಕಿಯನ್ನು ಅಮಾನತುಗೊಳಿಸಿದ್ದಾರೆ.
ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು:ಅಲ್ಲದೇ ಆರೋಪಿ ಸರ್ಕಾರಿ ಬಾಲ ಗೃಹದ ಸೂಪರಿಂಟೆಂಡೆಂಟ್ ಪೂನಂ ಪಾಲ್ ಮತ್ತು ಸಿಬ್ಬಂದಿ ವಿರುದ್ಧ ಶಹಗಂಜ್ ಪೊಲೀಸ್ ಠಾಣೆಯಲ್ಲಿ ಜಿಲ್ಲಾಡಳಿತವು ಸೆ.13 ರಂದು ಬಾಲ ನ್ಯಾಯ ಕಾಯ್ದೆ (2015) ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ವೈರಲ್ ವಿಡಿಯೋವನ್ನು ಪರಿಶೀಲಿಸಿದ ನಂತರ ಆರೋಪಿತೆ ಸೂಪರಿಂಟೆಂಡೆಂಟ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಆಯುಕ್ತೆ ರಿತು ಮಹೇಶ್ವರಿ ತಿಳಿಸಿದ್ದಾರೆ. ಜೊತೆಗೆ ಆಕೆ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬಿಜೆಪಿ ಮುಖಂಡನಿಗೆ ಮಹಿಳೆಯರಿಂದ ಚಪ್ಪಲಿಯಿಂದ ಹಲ್ಲೆ: ಫಿರೋಜಾಬಾದ್ನ ವಿಡಿಯೋ ವೈರಲ್