ಅಲಿಗಢ (ಉತ್ತರ ಪ್ರದೇಶ):ಇಲ್ಲಿನ ಶಾಲೆಯೊಂದರ ಪ್ರಾಂಶುಪಾಲರು, ''ಹಿಂದೂ ದೇವಾಲಯಗಳಲ್ಲಿ ಪ್ರಾರ್ಥನೆ ಮತ್ತು ನೈವೇದ್ಯಗಳನ್ನು ಅರ್ಪಿಸುವುದನ್ನು ಬೂಟಾಟಿಕೆ'' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಮಂಗಳವಾರ ಹಿಂದೂ ಯುವವಾಹಿನಿ ಸಂಘಟನೆಯ ಮುಖಂಡರು, ಸಾಸ್ನಿ ಗೇಟ್ ಪ್ರದೇಶದಲ್ಲಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೇ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಮುದ್ರಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಪ್ರಾಂಶುಪಾಲರು ಹಿಂದೂ ಧರ್ಮದ ಆತ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಹಿಂದೂ ಯುವವಾಹಿನಿ ಹೇಳಿದೆ. ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಆಗ್ರಾ ರಸ್ತೆಯಲ್ಲಿರುವ ಶಾಲೆಯ ಸಂಸ್ಥಾಪಕರ ಹುಟ್ಟುಹಬ್ಬದ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಹಿಂದೂ ಧರ್ಮದಲ್ಲಿನ ಪೂಜೆ ಹಾಗೂ ನೈವೇದ್ಯಗಳನ್ನು ಬೂಟಾಟಿಕೆ ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ, ಶ್ರೀಕೃಷ್ಣನ ಕುರಿತು ಗೋವರ್ಧನ ಪರ್ವತವನ್ನು ಬೆರಳು ತುದಿಯಲ್ಲಿ ಹಿಡಿದಿರುವುದು ಸುಳ್ಳಾಗಿದ್ದು, ಇಂತಹ ವಿಷಯಗಳ ಮೂಲಕ ಹಿಂದೂ ಧರ್ಮವು ಕೇವಲ ಬೂಟಾಟಿಕೆಯನ್ನು ಹಬ್ಬಿಸುತ್ತದೆ. ಶ್ರೀಕೃಷ್ಣನಂಥ ಅವತಾರ ಈ ಭೂಮಿಯ ಮೇಲೆ ನಡೆದಿಲ್ಲ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ ಎಂಬ ಆರೋಪವೂ ಪ್ರಾಂಶುಪಾಲರ ಮೇಲಿದೆ.
ಹಿಂದೂ ಯುವ ವಾಹಿನಿಯ ಧಾರ್ಮಿಕ ಪ್ರಚಾರಕ ಗರಂ:ಪೂಜಿಸುವುದು ಕೇವಲ ಬೂಟಾಟಿಕೆ. ಶ್ರೀಕೃಷ್ಣನ ಬಗ್ಗೆ ಹೇಳಿರುವ ಮಾತುಗಳು ಜನರನ್ನು ಮೂರ್ಖರನ್ನಾಗಿಸುವಂಥದ್ದು, ಸನಾತನ ಧರ್ಮಕ್ಕೆ ಅಪಮಾನ ಮಾಡಿರುವಂತಹ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ ಎಂದು ಹಿಂದೂ ಯುವ ವಾಹಿನಿಯ ಧಾರ್ಮಿಕ ಪ್ರಚಾರಕ ವಿವೇಕ್ ಕುಮಾರ್ ಶರ್ಮಾ ಕಿಡಿಕಾರಿದ್ದಾರೆ.