ಪಾಟ್ನಾ (ಬಿಹಾರ):ಹಾಡಹಗಲೇ ನರ್ಸ್ವೊಬ್ಬರನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು ನಡೆದಿದೆ. ಇಲ್ಲಿನ ಮೇದಾಂತ ಆಸ್ಪತ್ರೆಯ ನರ್ಸ್ ಸೋನಿ ಕುಮಾರಿ ಎಂಬುವವರೇ ಕೊಲೆಯಾದವರು ಎಂದು ಗುರುತಿಸಲಾಗಿದೆ. ಆದರೆ, ಈ ಕೊಲೆಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ.
ಹತ್ಯೆಯಾದ ಸೋನಿ ಕುಮಾರಿ ಪೂರ್ಣಿಯಾ ನಿವಾಸಿದ್ದು, ಮೇದಾಂತ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಆಸ್ಪತ್ರೆಯ ಸಮೀಪವೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಸೋನಿ ಕುಮಾರಿ ಅವರಿಗೆ ಇರಿಯಲಾಗಿದೆ. ಕೊಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಕಂಕರ್‌ಬಾಗ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಆದರೆ, ಹಾಡಹಗಲೇ ನರ್ಸ್ ಮೇಲೆ ಚಾಕುವಿನಿಂದ ದಾಳಿ ಮಾಡಿದ ಘಟನೆಯು ನಾಗರಿಕರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ ನರ್ಸ್ ಸೋನಿ ಕುಮಾರಿ ಅವರನ್ನು ಏಕೆ ಹತ್ಯೆ ಮಾಡಲಾಗಿದೆ ಮತ್ತು ಇದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೇ, ಯಾವುದೇ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶವ ಪಕ್ಕದ ಮನೆಯಲ್ಲಿ ಹೂತಿಟ್ಟಿರುವ ಸ್ಥಿತಿಯಲ್ಲಿ ಪತ್ತೆ: ಅತ್ಯಾಚಾರ ಎಸಗಿ ಕೊಲೆ ಶಂಕೆ
ಕಳೆದ ತಿಂಗಳು ಬಿಹಾರದ ಮುಜಾಫರಪುರದಲ್ಲಿ ಪ್ರಾಪರ್ಟಿ ಡೀಲರ್ ಮತ್ತು ಆತನ ಅಂಗರಕ್ಷಕ ಸೇರಿ ಇಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಕೊಲೆ ಮಾಡಿದ್ದರು. ಅಲ್ಲದೇ, ಈ ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದರು. ಮೃತ ಉದ್ಯಮಿಯನ್ನು ಅಶುತೋಷ್ ಶಾಹಿ ಎಂದು ಗುರುತಿಸಲಾಗಿತ್ತು.
ಪ್ರಾಪರ್ಟಿ ಡೀಲರ್ ಉದ್ಯಮ ನಡೆಸುತ್ತಿದ್ದ ಅಶುತೋಷ್ ಶಾಹಿ ವಕೀಲರೊಬ್ಬರ ಮನೆಗೆ ತೆರಳಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮನೆಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ಮಾಡಿದ್ದರು. ಇದರ ಪರಿಣಾಮ ಅಶುತೋಷ್ ಶಾಹಿ ಗುಂಡು ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅಲ್ಲದೇ, ಇವರ ರಕ್ಷಣೆಗೆ ಬಂದ ಅಂಗರಕ್ಷಕರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಇದರಿಂದ ಗಾಯಗೊಂಡಿದ್ದ ಓರ್ವ ಅಂಗರಕ್ಷಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇತರ ಅಂಗರಕ್ಷಕರರಾದ ಓಂಕಾರ್ ನಾಥ್ ಸಿಂಗ್, ರಾಹುಲ್ ಕುಮಾರ್ ಮತ್ತು ಹಿರಿಯ ವಕೀಲ ಸೈಯದ್ ಕಾಸಿಂ ಹುಸೇನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಆಸ್ತಿ ವಿವಾದ ಕಾರಣದಿಂದಾಗಿ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ:ಬಿಹಾರದಲ್ಲಿ ಗುಂಡಿನ ದಾಳಿ: ಖ್ಯಾತ ಉದ್ಯಮಿ, ಅಂಗರಕ್ಷಕ ಸಾವು.. ಮೂವರಿಗೆ ಗಾಯ