ಕರ್ನಾಟಕ

karnataka

ETV Bharat / bharat

ಕಾನ್‌ಸ್ಟೆಬಲ್ ಮೇಲೆ ಗುಂಡಿಕ್ಕಿ ಹತ್ಯೆಗೈದ ಐಟಿಬಿಪಿ ಅಧಿಕಾರಿಯ ಪುತ್ರ! - ಕಾನಸ್ಟೇಬಲ್ ಮೇಲೆ ಗುಂಡಿಕ್ಕಿ ಹತ್ಯೆ

ರಾಜಧಾನಿ ದೆಹಲಿಯಲ್ಲಿ ಐಟಿಬಿಪಿ ಅಧಿಕಾರಿಯೊಬ್ಬರ ಪುತ್ರ, ಕಾನ್‌ಸ್ಟೆಬಲ್‌ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ITBP officer son shot constable in delhi
ಕಾನಸ್ಟೇಬಲ್ ಮೇಲೆ ಗುಂಡಿಕ್ಕಿ ಹತ್ಯೆಗೈದ ಐಟಿಬಿಪಿ ಅಧಿಕಾರಿಯ ಪುತ್ರ

By

Published : Jun 21, 2023, 10:49 PM IST

ನವದೆಹಲಿ:ದೆಹಲಿಯ ಚಾವ್ಲಾ ಪ್ರದೇಶದಲ್ಲಿರುವ ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ ಕ್ಯಾಂಪ್‌ನಲ್ಲಿ ಕಾನ್‌ಸ್ಟೆಬಲ್​ನನ್ನು ಐಟಿಬಿಪಿ ಅಧಿಕಾರಿಯೊಬ್ಬರ ಪುತ್ರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಘಟನೆಯನ್ನು ದೃಢಪಡಿಸಿರುವ ಡಿಸಿಪಿ ದ್ವಾರಕಾ ಎಂ. ಹರ್ಷವರ್ಧನ್ ಅವರು, ಬುಧವಾರ ಮಧ್ಯಾಹ್ನ 2.20ಕ್ಕೆ ಐಟಿಬಿಪಿ ಕ್ಯಾಂಪ್ ಚಾವ್ಲಾದಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಲಭಿಸಿತ್ತು. ಇದರ ನಂತರ, ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದಾಗ 36 ವರ್ಷದ ಕಾನ್‌ಸ್ಟೆಬಲ್ ಬುಲೆಟ್​ಗಳಿಂದ ಗಾಯಗೊಂಡು ಸಾವನ್ನಪ್ಪಿರುವುದು ಕಂಡುಬಂದಿದೆ ಎಂದರು.

ಐಟಿಬಿಪಿ ಅಧಿಕಾರಿಯ ಮನೆಯಲ್ಲಿ ಕಾನ್‌ಸ್ಟೆಬಲ್ ಶವ ಪತ್ತೆಯಾಗಿದೆ. ತನಿಖೆಯಲ್ಲಿ ಐಟಿಬಿಪಿ ಅಧಿಕಾರಿಯ ಪುತ್ರನೇ ಗುಂಡು ಹಾರಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐಟಿಬಿಪಿ ಅಧಿಕಾರಿ ದಿಗ್ವಿಜಯ್ ಅವರ 32 ವರ್ಷದ ಪುತ್ರನನ್ನು ಬಂಧಿಸಿದ್ದಾರೆ. ಅಲ್ಲದೆ, ವಿಧಿವಿಜ್ಞಾನ ಪ್ರಯೋಗಾಲಯದ ತಂಡವನ್ನು ತನಿಖೆಗಾಗಿ ಸ್ಥಳಕ್ಕೆ ಕರೆಸಲಾಗಿದೆ.

ಇದನ್ನೂ ಓದಿ:ಬಾಲಕಿಗೆ ಲೈಂಗಿಕ‌ ಕಿರುಕುಳ ಪ್ರಕರಣ: ಬಿಇಒಗೆ ದಂಡಸಮೇತ 5 ವರ್ಷ ಜೈಲು ಶಿಕ್ಷೆ

ಐದು ಖಾಲಿ ಕಾಟ್ರಿಡ್ಜ್‌ಗಳು ಪತ್ತೆ:ಘಟನೆಗೆ ಬಳಸಿದ್ದ ಆಯುಧವನ್ನೂ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಯಿಂದ ವಶಕ್ಕೆ ತೆಗೆದುಕೊಂಡಿರುವ ಆಯುಧಕ್ಕೆ ಪರವಾನಗಿ ಪಡೆದಿದ್ದು, ಆತನ ತಂದೆಯ ಹೆಸರಿನಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಆರೋಪಿ ಸದ್ಯ ನಿರುದ್ಯೋಗಿಯಾಗಿದ್ದಾನೆ ಎಂದೂ ಹೇಳಲಾಗಿದೆ. ಆದರೆ, ಯಾವ ಕಾರಣಕ್ಕೆ ಕಾನ್‌ಸ್ಟೆಬಲ್‌ನನ್ನು ಕೊಲೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಸ್ಥಳದಿಂದ ಐದು ಖಾಲಿ ಕಾಟ್ರಿಡ್ಜ್‌ಗಳನ್ನು ಸಹ ಪತ್ತೆ ಮಾಡಿದ್ದಾರೆ. ಘಟನೆಯ ಸಮಯದಲ್ಲಿ ಐದು ಗುಂಡುಗಳನ್ನು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ನಕಲಿ ಸೇನಾಧಿಕಾರಿ ಬಂಧನ:ಸೇನೆಯ ದಕ್ಷಿಣ ಕಮಾಂಡ್‌ನ ಮಿಲಿಟರಿ ಇಂಟೆಲಿಜೆನ್ಸ್ (ಎಂಐ)ನಿಂದ ಪಡೆದ ಮಾಹಿತಿಯ ಹಿನ್ನೆಲೆ, 2019ರಲ್ಲಿ ಕರ್ತವ್ಯದಿಂದ ಪಲಾಯನ ಮಾಡಿದ್ದು, ಇನ್ನೂ ಆರ್ಮಿ ಅಧಿಕಾರಿ ರೀತಿ ನಟಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪುಣೆ ಪೊಲೀಸರು ಅರೆಸ್ಟ್​ ಮಾಡಲಾಗಿದೆ. ಆರೋಪಿಯನ್ನು ಕರ್ನಾಟಕ ಮೂಲದ ಪ್ರಶಾಂತ್ ಭೌರಾವ್ ಪಾಟೀಲ್(32) ಎಂದು ಗುರುತಿಸಲಾಗಿತ್ತು. ಈತ ಪ್ರಸ್ತುತ ಪುಣೆ ನಗರದ ಚಿಖಾಲಿ ಪ್ರದೇಶದಲ್ಲಿ ನೆಲೆಸಿದ್ದನು. ಸೋಮವಾರ ಮುಂಜಾನೆ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ​ದಾಖಲಾಗಿತ್ತು. ಪ್ರಶಾಂತ್ ಭೌರಾವ್ ಪಾಟೀಲ್ ಪುಣೆಯ ಖಡ್ಕಿಯ ಅಂಗಡಿಯೊಂದರಿಂದ ಎರಡು ಭಾರತೀಯ ಸೇನೆಯ ಸುಬೇದಾರ್ ಡ್ರೆಸ್​ಗಳನ್ನು ಹಾಗೂ ಇತರ ಸಾಮಗ್ರಿಗಳನ್ನು ಖರೀದಿ ಮಾಡಿದ್ದ. ವಸ್ತ್ರಗಳ ಬಿಲ್(4,700 ರೂ.) ಪಾವತಿ ಮಾಡದೇ ವಂಚಿಸಿದ್ದನು. ಸೇನಾ ಮುಖ್ಯಸ್ಥರ ಕಚೇರಿಯ ಆವರಣದಲ್ಲಿ ಅಧಿಕಾರಿ ರೀತಿ ನಟಿಸಿ ತಾನು ವಾಸಿಸದೇ ಇರುವಂತಹ ಸದರ್ನ್​ ಕಮಾಂಡ್​ ಪುಣೆಯ ಕಚೇರಿ ವಿಳಾಸವನ್ನು ಕೂಡ ಬಳಕೆ ಮಾಡಿಕೊಂಡಿದ್ದ. ನಕಲಿ ಆಧಾರ್​ ಕಾರ್ಡ್​ ಬಳಸಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದ ಭಾವಚಿತ್ರವನ್ನು ಪ್ಯಾನ್ ಕಾರ್ಡ್​ ಮತ್ತು ಗುರುತಿನ ಚೀಟಿಗಳಲ್ಲಿ ಬಳಕೆ ಮಾಡಿ ವಂಚನೆ ಮಾಡಿದ್ದ ಹಿನ್ನೆಲೆ ಆರೋಪಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:ಗಾಯಕ ಹನಿ ಸಿಂಗ್​ಗೆ ಕೆನಡಾದಿಂದ ಜೀವ ಬೆದರಿಕೆ ಕರೆ: ಭದ್ರತೆ ಒದಗಿಸಲು ಪೊಲೀಸರಿಗೆ ಮನವಿ

ABOUT THE AUTHOR

...view details