ಕರ್ನಾಟಕ

karnataka

ETV Bharat / bharat

ಪ್ರಿನ್ಸ್ ಖಾನ್ ವಿರುದ್ಧ ರೆಡ್, ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ ಇಂಟರ್ ಪೋಲ್ - ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪ್ರಿನ್ಸ್ ಖಾನ್

ಧನ್‌ಬಾದ್‌ನ ಪ್ರಿನ್ಸ್ ಖಾನ್ ವಿರುದ್ಧ ಇಂಟರ್‌ಪೋಲ್ ರೆಡ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಇದರ ಮಾಹಿತಿಯನ್ನು ಇಂಟರ್‌ಪೋಲ್ ಯುಎಇ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಗೆ ನೀಡಿದೆ.

gangster Prince Khan  Prince Khan of Dhanbad  blue corner notice against gangster Prince Khan  Interpol red corner notice Prince Khan of Dhanbad  Interpol Notice against Prince Khan  ಪ್ರಿನ್ಸ್ ಖಾನ್ ವಿರುದ್ಧ ರೆಡ್  ಕಾರ್ನರ್ ನೋಟಿಸ್ ಜಾರಿ ಮಾಡಿದ ಇಂಟರ್ ಪೋಲ್  ನ್‌ಬಾದ್‌ನ ಪ್ರಿನ್ಸ್ ಖಾನ್ ವಿರುದ್ಧ ಇಂಟರ್‌ಪೋಲ್  ರೆಡ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಜಾರಿ  ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪ್ರಿನ್ಸ್ ಖಾನ್  ಸಿಬಿಐಗೆ ಪತ್ರ ಬರೆದ ಜಾರ್ಖಂಡ್ ಪೊಲೀಸರು
ಕಾರ್ನರ್ ನೋಟಿಸ್ ಜಾರಿ ಮಾಡಿದ ಇಂಟರ್ ಪೋಲ್

By

Published : Jul 21, 2023, 9:14 PM IST

ರಾಂಚಿ, ಜಾರ್ಖಂಡ್​: ಜಾರ್ಖಂಡ್ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪ್ರಿನ್ಸ್ ಖಾನ್ ವಿರುದ್ಧ ಇಂಟರ್ ಪೋಲ್ ರೆಡ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಧನ್‌ಬಾದ್‌ನ ವಸ್ಸೆಪುರದ ಗ್ಯಾಂಗ್‌ಗಳೊಂದಿಗೆ ಸಂಬಂಧ ಹೊಂದಿರುವ ಪ್ರಿನ್ಸ್ ಖಾನ್, ದುಬೈನಿಂದಲೇ ತನ್ನ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದಾನೆ. ನೋಟಿಸ್ ನೀಡಿದ ನಂತರ ಇಂಟರ್‌ಪೋಲ್‌ನಿಂದ ಯುಎಇ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಗೂ ಅದರ ಮಾಹಿತಿಯನ್ನು ನೀಡಲಾಗಿದೆ.

ಮೋಸ್ಟ್ ವಾಂಟೆಡ್ ಪ್ರಿನ್ಸ್ ಖಾನ್:ಧನಬಾದ್​ನ ಮೋಸ್ಟ್ ವಾಂಟೆಡ್ ಪ್ರಿನ್ಸ್ ಖಾನ್ ವಿರುದ್ಧ ಇಂಟರ್ ಪೋಲ್ ರೆಡ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಎರಡೂ ಸೂಚನೆಗಳನ್ನು ನೀಡಿದ ನಂತರ, ಇಂಟರ್‌ಪೋಲ್ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಗೆ ತನ್ನ ಮಾಹಿತಿಯನ್ನು ನೀಡಿದೆ. ಸಿಬಿಐ ಕೋರಿಕೆಯ ಮೇರೆಗೆ, ಧನ್‌ಬಾದ್ ಜಿಲ್ಲೆಯಲ್ಲಿ ದಾಖಲಾದ ಪ್ರಕರಣದಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ರೆ, ಎಟಿಎಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.

ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಪ್ರಿನ್ಸ್ ಖಾನ್ ವಿರುದ್ಧ ಹತ್ತಾರು ಪ್ರಕರಣಗಳು ದಾಖಲಾಗಿವೆ. 2021 ರಿಂದ ಪ್ರಿನ್ಸ್ ಖಾನ್ ಪೊಲೀಸರನ್ನು ತಪ್ಪಿಸುವ ಮೂಲಕ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಜಾರ್ಖಂಡ್ ಎಟಿಎಸ್ ತನಿಖೆಯಲ್ಲಿ ಪ್ರಿನ್ಸ್ ಖಾನ್ ತಲೆಮರೆಸಿಕೊಂಡಿರುವ ಸಮಯದಲ್ಲಿ ಶಾರ್ಜಾ ಮತ್ತು ದುಬೈನಂತಹ ನಗರಗಳಲ್ಲಿ ಕಾಣಿಸಿಕೊಂಡಿದ್ದಾನೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಹಸ್ತಾಂತರಕ್ಕೆ ಪ್ರಯತ್ನಿಸಲಾಗುವುದು: ಪ್ರಿನ್ಸ್ ಖಾನ್ ಜಾರ್ಖಂಡ್‌ನ ಮೊದಲ ಕ್ರಿಮಿನಲ್ ಆಗಿದ್ದು, ಅವರ ಹಸ್ತಾಂತರಕ್ಕೆ ಪ್ರಯತ್ನಿಸಲಾಗುವುದು. ಮಾಹಿತಿ ಪ್ರಕಾರ ಕಳೆದ ಬಾರಿ ಪ್ರಿನ್ಸ್ ಖಾನ್ ಲೊಕೇಶನ್ ದುಬೈಗೆ ಬಂದಿತ್ತು. ಪಾಸ್‌ಪೋರ್ಟ್ ರದ್ದಾದ ನಂತರ ಅವರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಜಾರ್ಖಂಡ್ ಪೊಲೀಸರ ಉಪಕ್ರಮದ ಮೇರೆಗೆ ಹೈದರ್ ಖಾನ್ ಹೆಸರಿನಲ್ಲಿ ಮಾಡಲಾದ ಪ್ರಿನ್ಸ್ ಖಾನ್ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲಾಗಿದೆ.

ರಾಜ್ಯ ಪೊಲೀಸ್ ಉನ್ನತ ಅಧಿಕಾರಿಗಳ ಪ್ರಕಾರ, ರೆಡ್ ಮತ್ತು ಬ್ಲೂ ಕಾರ್ನರ್ ನೋಟಿಸ್ ನೀಡಿದ ನಂತರ, ಪ್ರಿನ್ಸ್ ಖಾನ್ ಅವರನ್ನು ಹಸ್ತಾಂತರಿಸಲು ಪ್ರಯತ್ನಿಸಲಾಗುವುದು. ಹಸ್ತಾಂತರಕ್ಕಾಗಿ ಸಿಬಿಐ ಇಂಟರ್‌ಪೋಲ್ ಮತ್ತು ಯುಎಇ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಿದೆ.

ಸಿಬಿಐಗೆ ಪತ್ರ ಬರೆದ ಜಾರ್ಖಂಡ್ ಪೊಲೀಸರು:ಧನ್​ಬಾದ್​ನ ಮೋಸ್ಟ್ ವಾಂಟೆಡ್ ಗ್ಯಾಂಗ್​ಸ್ಟರ್ ಪ್ರಿನ್ಸ್ ಖಾನ್ ವಿದೇಶಕ್ಕೆ ಪರಾರಿಯಾಗಿರುವ ಸುದ್ದಿ ತಿಳಿದ ಜಾರ್ಖಂಡ್ ಪೊಲೀಸರು ಸಿಬಿಐಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿ ಸಿಬಿಐ ಜಾರ್ಖಂಡ್ ಪೊಲೀಸರಿಗೆ ಪತ್ರ ವ್ಯವಹಾರ ನಡೆಸಿತ್ತು. ಈ ಪ್ರಕರಣದಲ್ಲಿ ರೆಡ್ ಅಥವಾ ಬ್ಲೂ ಕಾರ್ನರ್ ನೋಟಿಸ್ ನೀಡಲು ರಾಜ್ಯ ಪೊಲೀಸರು ಸಿಬಿಐಗೆ ಪ್ರಸ್ತಾವನೆಯನ್ನು ಕಳುಹಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಪ್ರಸ್ತಾವನೆ ಬಂದ ಬಳಿಕ ಇಂಟರ್‌ಪೋಲ್‌ನಿಂದ ಪ್ರಿನ್ಸ್ ಖಾನ್ ವಿರುದ್ಧ ರೆಡ್ ಅಥವಾ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗುವುದು ಎಂದು ಪತ್ರದ ಮೂಲಕ ಸೂಚಿಸಲಾಗಿತ್ತು. ಹೀಗಾಗಿ ಇದಕ್ಕೆ ಬೇಕಾದ ಎಲ್ಲ ಪ್ರಕ್ರಿಯೆಯನ್ನು ಜಾರ್ಖಂಡ್ ಪೊಲೀಸರು ಪೂರ್ಣಗೊಳಿಸಿದ್ದರು.

ಓದಿ:ಸೀಮಾ ಹೈದರ್​ ಪಾಕಿಸ್ತಾನಕ್ಕೆ ಕಳುಹಿಸುವ ಸಂಭವ ಕಡಿಮೆ: ಪ್ರಕರಣದ ವಿಚಾರಣೆಗೆ ಅಡ್ಡಿಯಾಗುವ ಸಾಧ್ಯತೆ..

ABOUT THE AUTHOR

...view details