ಕರ್ನಾಟಕ

karnataka

ETV Bharat / bharat

ಗೆಳತಿಯ ಫೋನ್​ ಕರೆಗೆ ಓಗೊಟ್ಟು ಮರ್ಮಾಂಗ ಕಳೆದುಕೊಂಡ ಪ್ರೇಮಿ! - ಯುವಕನ ಖಾಸಗಿ ಅಂಗ ಕತ್ತರಿಸಿದ ಯುವತಿಯ ಕುಟುಂಬಸ್ಥರು

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಯುವತಿಯ ಕುಟುಂಬಸ್ಥರು ಯುವಕನನ್ನು ತಮ್ಮ ಮನೆಗೆ ಕರೆಸಿಕೊಂಡು ಮರ್ಮಾಂಗ ಕತ್ತರಿಸಿದ್ದಾರೆ.

crime-girlfriend-family-cut-off-boyfriend-private-parts-in-muzaffarpur-bihar
ಗೆಳತಿಯ ಫೋನ್​ ಕರೆಗೆ ಓಗೊಟ್ಟ ಮರ್ಮಾಂಗ ಕಳೆದುಕೊಂಡ ಪ್ರೇಮಿ!

By ETV Bharat Karnataka Team

Published : Oct 13, 2023, 8:15 PM IST

ಮುಜಾಫರ್​​ಪುರ (ಬಿಹಾರ):ಪ್ರೀತಿ, ಪ್ರೇಮ ಎಂದರೆ ಎರಡು ಮನಸ್ಸುಗಳ ಪರಸ್ಪರ ಒಪ್ಪಿಗೆಯ ಬಂಧ. ಇದು ಯುವತಿ ಮೇಲೆ ಯುವಕನಿಗೆ, ಯುವಕನ ಮೇಲೆ ಯುವತಿಯ ಮೇಲೆ ಉಂಟಾಗುವ ನಂಬಿಕೆಯ ಭಾವ. ಆದರೆ, ಇಂತಹದ್ದೇ ನಂಬಿಕೆಯಿಂದ ತನ್ನ ಗೆಳತಿಯ ಫೋನ್​ ಕರೆಗೆ ಓಗೊಟ್ಟು ಓಡೋಡಿ ಬಂದ ಪ್ರೇಮಿಯೋರ್ವ ತನ್ನ ಮರ್ಮಾಂಗ ಕಳೆದುಕೊಂಡಿದ್ದಾನೆ!.

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಈ ಪ್ರಕರಣ ವರದಿಯಾಗಿದೆ. ಗೆಳತಿಯ ಕುಟುಂಬಸ್ಥರೇ ಯುವಕನ ಖಾಸಗಿ ಅಂಗಗಳನ್ನು ಕತ್ತರಿಸಿದ್ದಾರೆ. ಯುವಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾನೆ. ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪೊಲೀಸರೂ ಬೆಚ್ಚಿಬಿದ್ದಿದ್ದಾರೆ. ಯುವಕನ ಬಳಿಯಿದ್ದ ಚಿನ್ನದ ಸರ, ಉಂಗುರ, ಮೊಬೈಲ್ ​ಅನ್ನೂ ಯುವತಿಯ ಕುಟುಂಬಸ್ಥರು​ ದೋಚಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಪೂರ್ಣ ವಿವರ: ಮುಜಾಫರ್​​ಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯುವಕನೋರ್ವ ಸಾರಯ್ಯ ಗಂಜ್‌ ಪ್ರದೇಶದ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಕರೆ ಮಾಡಿದ್ದರಿಂದ ಆಕೆಯ ಮನೆಗೆ ಹೋಗಿದ್ದು, ಮರ್ಮಾಂಗವನ್ನು ಕತ್ತರಿಸಿದ್ದಾರೆ ಎಂದು ಯುವಕನ ತಂದೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಸಾರಾಂಶ ಹೀಗಿದೆ...:''ನನ್ನ ಮಗ ಹಾಗೂ ಯುವತಿ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೇಮಕ್ಕೆ ಯುವತಿಯ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಮಗನಿಗೆ ಹಲವು ಬಾರಿ ಬೆದರಿಕೆಗಳು ಬಂದಿದ್ದವು. ಇದರ ಭಾಗವಾಗಿಯೇ ಯುವತಿಯ ಕುಟುಂಬಸ್ಥರು ಮೋಸದಿಂದ ಮಗನನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದರು'' ಎಂದು ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮುಂದುವರೆದು, ''ನಮ್ಮ ಮಗ ಪ್ರತಿದಿನ ಸಂಜೆ 4 ಗಂಟೆಗೆ ಜಿಮ್‌ಗೆ ಹೋಗುತ್ತಿದ್ದ. ಈ ಘಟನೆ ನಡೆದ ದಿನವೂ ಆಗಷ್ಟೇ ಜಿಮ್‌ಗೆ ಹೊರಟಿದ್ದ. ಅಷ್ಟರಲ್ಲಿ ಗೆಳತಿ ಆತನಿಗೆ ಕರೆ ಮಾಡಿದ್ದಳು. ನನ್ನ ಅಪ್ಪನಿಗೆ ಹೃದಯಾಘಾತವಾಗಿದೆ. ಬೇಗ ಮನೆಗೆ ಬಾ, ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಯುವತಿ ಹೇಳಿದ್ದಳು. ಇದರಿಂದ ಆಕ ತನ್ನ ಗೆಳತಿಯ ಮನೆಗೆ ಹೋಗಿದ್ದ. ಆದರೆ, ಈ ಸಂದರ್ಭದಲ್ಲಿ ಯುವತಿಯ ತಂದೆ, ತಾಯಿ ಮತ್ತು ಸಹೋದರ ಸೇರಿಕೊಂಡು ನನ್ನ ಮಗನಿಗೆ ಮೊದಲಿಗೆ ಥಳಿಸಿದ್ದಾರೆ. ಇದಾದ ಬಳಿಕ ಕೊರಳಲ್ಲಿದ್ದ ಚಿನ್ನದ ಸರ, ಉಂಗುರ, ಮೊಬೈಲ್ ದೋಚಿದ್ದಾರೆ. ಇಷ್ಟಕ್ಕೆ ಬಿಡದೆ ಆತನ ಖಾಸಗಿ ಅಂಗವನ್ನೇ ಕತ್ತರಿಸಿ ಹಾಕಿದ್ದಾರೆ. ಹೇಗೋ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿ ಮನೆ ತಲುಪಿ, ನಡೆದ ಘಟನೆಯ ಬಗ್ಗೆ ವಿವರಿಸಿದ್ದಾನೆ'' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

''ಮನೆಗೆ ಬರುವಷ್ಟರಲ್ಲಾಗಲೇ ನಮ್ಮ ಮಗ ಸಂಪೂರ್ಣವಾಗಿ ರಕ್ತದಲ್ಲಿ ತೊಯ್ದು ಹೋಗಿದ್ದ. ಪ್ರೀತಿಗೆ ವಿರೋಧ ಹೊಂದಿದ್ದ ಯುವತಿಯ ಕುಟುಂಬಸ್ಥರೇ ಆಕೆಯಿಂದ ಕರೆ ಮಾಡಿಸಿ, ಈ ಕೃತ್ಯ ಎಸಗಿದ್ದಾರೆ'' ಎಂದು ಆರೋಪಿಸಿದ್ದಾರೆ. ಸದ್ಯ ಯುವಕನ ಸ್ಥಿತಿ ಗಂಭೀರವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಪ್ರೀತಿಸುವಂತೆ ಪೀಡಿಸಿ ವಿದ್ಯಾರ್ಥಿಗೆ ಅಶ್ಲೀಲ ಸಂದೇಶ ರವಾನಿಸಿದ ಶಿಕ್ಷಕಿ! ದೈಹಿಕ ಸಂಬಂಧಕ್ಕೆ ಒತ್ತಡ ಆರೋಪ

ABOUT THE AUTHOR

...view details