ಕರ್ನಾಟಕ

karnataka

ETV Bharat / bharat

ಬೇರೆ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಕೋಪ; ಪ್ರಿಯಕರನ ಖಾಸಗಿ ಅಂಗ ಕತ್ತರಿಸಿದ ಪ್ರಿಯತಮೆ! - ಪಾಟ್ನಾದ ಪಿಎಂಸಿಎಚ್‌

ಪ್ರಿಯತಮೆ ತನ್ನ ಪ್ರಿಯಕರನ ಖಾಸಗಿ ಭಾಗವನ್ನು ಹರಿತ ಆಯುಧದಿಂದ ಕತ್ತರಿಸಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

Girlfriend cut boyfriend private part
ಪ್ರಿಯಕರನ ಖಾಸಗಿ ಅಂಗ ಕತ್ತರಿಸಿ ಹಾಕಿದ ಪ್ರಿಯತಮೆ

By

Published : Jun 8, 2023, 10:32 PM IST

ಪಾಟ್ನಾ(ಬಿಹಾರ):ಪ್ರಿಯಕರನಿಗೆ ಬೇರೆ ಮದುವೆ ನಿಶ್ಚಯವಾಗಿದ್ದಕ್ಕೆ ಕೋಪಗೊಂಡ ಪ್ರಿಯತಮೆ ಆತನ ಖಾಸಗಿ ಅಂಗವನ್ನೇ ಹರಿತವಾದ ಆಯುಧದಿಂದ ಕತ್ತರಿಸಿ ಹಾಕಿದ ಘಟನೆ ರಾಜಧಾನಿ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ. ಯುವಕನ ಖಾಸಗಿ ಅಂಗದ ಶೇ 60 ರಷ್ಟು ಭಾಗ ತುಂಡಾಗಿದ್ದು, ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪಾಟ್ನಾದ ಪಿಎಂಸಿಎಚ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಂಧಿ ಮೈದಾನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮದುವೆ ವಿಚಾರಕ್ಕೆ ಜಗಳ:ಪೊಲೀಸರು ನೀಡಿದ ಮಾಹಿತಿಯಂತೆ,ಇಬ್ಬರ ನಡುವೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ. ಛತ್ತೀಸ್‌ಗಢದಲ್ಲಿ ಪ್ರಿಯಕರ ಸಿಆರ್‌ಪಿಎಫ್​ದಲ್ಲಿ ಕೆಲಸ ಮಾಡುತ್ತಿದ್ದ. ಹುಡುಗಿ ಪಾಟ್ನಾದಲ್ಲಿ ಓದುತ್ತಿದ್ದಳು. ಪ್ರಿಯಕರನಿಗೆ ನೀನು ಬಾರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಕರೆಸಿಕೊಂಡಿದ್ದಳು. ಪ್ರಿಯಕರ ರಜೆ ಪಡೆದು ಛತ್ತೀಸ್​ಗಢದಿಂದ ಪಾಟ್ನಾಗೆ ಬಂದಿದ್ದಾನೆ. ಈ ಹಿಂದೆ ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದ ಎಕ್ಸಿಬಿಷನ್ ರೋಡ್ ಹೋಟೆಲ್‌ನಲ್ಲಿ ಬಂದು ಸೇರಿದ್ದರು. ಇದಕ್ಕೂ ಮುನ್ನ, ಜೂನ್ 23 ರಂದು ಪ್ರಿಯಕರನಿಗೆ ಬೇರೆಡೆ ಮದುವೆ ನಿಶ್ಚಯ ಆಗಿರುವುದು ಯುವತಿಗೆ ಗೊತ್ತಾಗಿದೆ. ಮದುವೆಗೆ ಹುಡುಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು.

ನನ್ನ ಬಿಟ್ಟು ಬೇರೆ ಯುವತಿ ಜೊತೆ ಮದುವೆ ನಿಶ್ಚಯ ಮಾಡಿಕೊಂಡರೆ ಸಹಿಸಲಾಗದು ಎಂದು ಪ್ರಿಯಕರನ ಮೇಲೆ ಒತ್ತಡ ಹಾಕಿದ್ದಳು. ಪ್ರಿಯಕರ ಎಲ್ಲ ವಿಷಯಗಳನ್ನೂ ಹೊಟೇಲ್‌ನಲ್ಲಿ ವಿವರಿಸುತ್ತಿದ್ದ. ಆದರೆ ಮದುವೆ ವಿಚಾರಕ್ಕೆ ಇಬ್ಬರಲ್ಲಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಪ್ರಿಯಕರ ಮಾತು ಕೇಳದೇ ಇದ್ದುದಕ್ಕೆ ಗೆಳತಿ ಕೋಪದ ಕೈಗೆ ಬುದ್ದಿ ಕೊಟ್ಟಿದ್ದಾಳೆ. ಬ್ಯಾಗ್‌ನಿಂದ ಹರಿತವಾದ ಆಯುಧ ತೆಗೆದು ಆತನ ಖಾಸಗಿ ಅಂಗವನ್ನೇ ಕತ್ತರಿಸಿ ಹಾಕಿದ್ದಾಳೆ. ಪ್ರಿಯಕರ ಜೋರಾಗಿ ಚೀರಾಡಿದ್ದಾನೆ. ಆತನ ಚೀರಾಟದ ಧ್ವನಿ ಕೇಳಿದ ಅಕ್ಕಪಕ್ಕದ ಜನರು ಆಗಮಿಸಿದ್ದಾರೆ. ತಕ್ಷಣ ಅಲ್ಲಿದ್ದವರು ಯುವಕನನ್ನು ಪಾಟ್ನಾದ ಪಿಎಂಸಿಎಚ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೆಳತಿಯನ್ನು ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಯುವತಿ, ತನ್ನ ಪ್ರಿಯಕರನಿಗೆ ಬೇರೆಡೆ ಮದುವೆ ಆಗುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಈ ಕೃತ್ಯ ಎಸಗಿದೆ ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದಾಳೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಗಾಯಗೊಂಡ ಪ್ರೇಮಿ ಬಿಹಾರದ ಶಿವಾರ್ ನಿವಾಸಿ. ಹುಡುಗಿ ಆತನೊಂದಿಗೆ 3 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಳಂತೆ. ಹುಡುಗನ ಕುಟುಂಬದ ಸಂಬಂಧಿಯೂ ಆಗಿದ್ದಳು. ಪಾಟ್ನಾದಲ್ಲಿ ಓದುತ್ತಿದ್ದಾಗ ಹೋಟೆಲ್‌ನಲ್ಲೇ ಮದುವೆಯಾಗಿದ್ದಳು. ಅಂದು ಹೋಟೆಲ್ ಸಿಬ್ಬಂದಿಗೂ ಸಿಹಿ ಹಂಚಿದ್ದರು. ಆದರೆ ಜೂನ್ 23 ರಂದು ಪ್ರಿಯಕರನ ಬೇರೆ ಹುಡುಗಿ ಜೊತೆಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದು ಯುವಕನ ಮರ್ಮಾಕ್ಕೆ ಕತ್ತರಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ: Mysore crime: ಕೆಲಸ ಇಲ್ಲದವನೆಂದು ಬೈದು ಬುದ್ಧಿವಾದ ಹೇಳಿದ್ದ ಅಜ್ಜಿಯನ್ನು ಕೊಂದು ಸುಟ್ಟುಹಾಕಿದ್ದ ಮೊಮ್ಮಗ: ಆರೋಪಿ ಬಂಧನ

ABOUT THE AUTHOR

...view details