ಕರ್ನಾಟಕ

karnataka

ETV Bharat / bharat

ಸತ್ತ ಮೊಮ್ಮಗನ ಶವದೊಂದಿಗೆ ಐದು ದಿನ ಕಳೆದ ಅಜ್ಜಿ... ವೃದ್ಧೆಯ ಅವತಾರ ನೋಡಿ ಬೆಚ್ಚಿಬಿದ್ದ ಪೊಲೀಸ್ - ಮೊಮ್ಮಗನ ಶವದೊಂದಿಗೆ ವಾಸಿಸು

ವಯಸ್ಸಾದ ಮಹಿಳೆಯೊಬ್ಬರು ಕಳೆದ ಐದು ದಿನಗಳಿಂದ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ತನ್ನ ಮೊಮ್ಮಗನ ಶವದೊಂದಿಗೆ ವಾಸಿಸುತ್ತಿದ್ದರು. ಸೋಮವಾರ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

crime elderly-woman-living-with-grandsons-body-in-up-foul-smell-prompts-residents-to-call-police
ಸತ್ತ ಮೊಮ್ಮಗನ ಶವದೊಂದಿಗೆ ಐದು ದಿನ ಕಳೆದ ಅಜ್ಜಿ... ವೃದ್ಧೆಯ ಅವತಾರ ನೋಡಿ ಬೆಚ್ಚಿಬಿದ್ದ ಪೊಲೀಸ್

By

Published : Jun 27, 2023, 6:53 AM IST

ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಅತ್ಯಂತ ಭೀಭತ್ಸ ಎನ್ನಬಹುದಾದ ಪ್ರಕರಣವೊಂದರಲ್ಲಿ 65 ವರ್ಷದ ವೃದ್ಧೆಯೊಬ್ಬರು ಕಳೆದ ಐದು ದಿನಗಳಿಂದ ಮೊಮ್ಮಗನ ಶವದೊಂದಿಗೆ ವಾಸವಾಗಿದ್ದರು. ಉತ್ತರಪ್ರದೇಶ ಬಾರಾಬಂಕಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮೌಹರಿಯಾ ಪ್ರದೇಶದ ನ್ಯೂ ಕಾಲೋನಿಯಿಂದ ಈ ಘಟನೆ ವರದಿಯಾಗಿದೆ.

ವೃದ್ಧೆಯೊಬ್ಬರ 17 ವರ್ಷದ ಮೊಮ್ಮಗ ಪ್ರಿಯಾಂಶು ಮೃತಪಟ್ಟಿದ್ದ. ಮೊಮ್ಮಗನ ಸಾವಿನ ಬಳಿಕ ಅಜ್ಜಿ ಮನೆಯಿಂದ ಹೊರಗೆ ಬಂದಿರಲಿಲ್ಲ. ಇನ್ನು ಮೊಮ್ಮಗ ಯಾಕೆ ಸಾವನ್ನಪ್ಪಿದ ಎಂಬ ಬಗ್ಗೆಯೂ ಯಾರಿಗೂ ಗೊತ್ತಿಲ್ಲ. ಕಾರಣವೂ ಇದುವರೆಗೂ ತಿಳಿದು ಬಂದಿಲ್ಲ. ಅಂದ ಹಾಗೆ ಇದು ಏಕೆ ಸುದ್ದಿ ಆಗುತ್ತಿದೆ ಎಂದರೆ ಮೊಮ್ಮಗ ಸಾವನ್ನಪ್ಪಿ ಐದು ದಿವಸ ಆದರೂ ಅಜ್ಜಿ, ಮನೆಯಿಂದ ಹೊರಗೂ ಬಾರದೇ, ವಿಷಯವನ್ನು ಅಕ್ಕಪಕ್ಕದವರಿಗೂ ತಿಳಿಸದೇ ಸತ್ತ ಮೊಮ್ಮಗನೊಂದಿಗೆ ಮನೆಯಲ್ಲೇ ಇದ್ದರು.

ಆದರೆ, ಹೆಣ ಸತ್ತು ಐದು ದಿನಗಳ ಬಳಿಕ ಅಲ್ಲಿಂದ ವಾಸನೆ ಬರಲು ಶುರುವಾಗಿದೆ. ಯಾಕೋ ವಾಸನೆ ಬರುತ್ತಿದೆ ಎಂಬ ಕಾರಣಕ್ಕೆ ವೃದ್ಧೆಯ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಕ್ಕ- ಪಕ್ಕದ ಮನೆಯವರು ನೀಡಿದ ದೂರಿನ ಅನ್ವಯ, ಅಜ್ಜಿಯ ಮನೆಗೆ ಬಂದ ಪೊಲೀಸರಿಗೆ ಆಘಾತಕಾರಿ ವಿಷಯವೊಂದು ಬಯಲಾಗಿತ್ತು. ಬಾಲಕನ ಕೊಳೆತ ದೇಹ, ಉಬ್ಬಿಕೊಂಡು ವಾಸನೆಯುಕ್ತವಾಗಿ ಬಿದ್ದಿರುವುದು ಕಂಡು ಬಂದಿತ್ತು.

ಮತ್ತೊಂದು ಕಡೆ ವಯಸ್ಸಾದ ಅಜ್ಜಿಯೊಬ್ಬರು, ಆ ಮೃತ ದೇಹವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಇದನ್ನು ಕಂಡು ಬೆಚ್ಚಿ ಬಿದ್ದ ಪೊಲೀಸರು ಕೊಳೆತ ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸಾವಿನ ಹಿಂದಿನ ಕಾರಣ ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಜ್ಜಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಜ್ಜಿಯ ಹೇಳಿಕೆ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸತ್ಯಾಂಶ ಹೊರಗೆ ಬೀಳಬಹುದಾಗಿದೆ.

ಪೊಲೀಸರು ಘಟನೆ ಬಗ್ಗೆ ವಿವರಿಸಿದ್ದು ಹೀಗೆ:ಕೆಲವು ದಿನಗಳಿಂದ ಮನೆಯಿಂದ ಅತಿ ಕೆಟ್ಟ ವಾಸನೆ ಬರುತ್ತಿತ್ತು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ, ಸಿಟಿ ಸರ್ಕಲ್ ಆಫೀಸರ್ ಬಿನು ಸಿಂಗ್, ಕೊತ್ವಾಲಿ ಎಸ್‌ಎಚ್‌ಒ ಸಂಜಯ್ ಮೌರ್ಯ ಅವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸ್ ಅಧಿಕಾರಿಗಳು ವೃದ್ಧೆಯನ್ನು ಮನೆಯ ಬಾಗಿಲು ತೆರೆಯುವಂತೆ ಕೇಳಿದರು, ಆದರೆ ಅವರು ಬಾಗಿಲು ತೆರೆಯಲು ಸಾರಾಸಗಟಾಗಿ ನಿರಾಕರಿಸಿದರು.
ಆದರೆ ಪಟ್ಟು ಬಿಡದ ಪೊಲೀಸರು ವೃದ್ಧೆಯ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಬಾಲಕನೊಬ್ಬ ಸಾವನ್ನಪ್ಪಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದ್ದು, ಅಂದ ಹಾಗೆ ಮೃತಪಟ್ಟ ಬಾಲಕ ಅಜ್ಜಿಯ ಮೊಮ್ಮಗನಾಗಿದ್ದಾನೆ. ತಂದೆ- ತಾಯಿ ಇಬ್ಬರನ್ನು ಕಳೆದುಕೊಂಡಿದ್ದ ಬಾಲಕ ಅಜ್ಜಿಯ ಜೊತೆ ವಾಸವಾಗಿದ್ದ. ಇನ್ನು ವೃದ್ಧೆ ಮಾನಸಿಕವಾಗಿ ನೊಂದಿದ್ದಳು. ವಿಚಿತ್ರ ಎಂದರೆ ಬಾಲಕ ಸತ್ತು ದೇಹದಿಂದ ದುರ್ಗಂದ ಬೀರುತ್ತಿದ್ದರೂ ಆ ಮಹಿಳೆ ಆ ದೇಹವನ್ನು ಸ್ವಚ್ಛಗೊಳಿಸುತ್ತಾ ಬಟ್ಟೆಯನ್ನು ಬದಲಾಯಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ಹರಿಹರದಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು : ಪೋಷಕರಿಂದ ದೂರು ದಾಖಲು

For All Latest Updates

ABOUT THE AUTHOR

...view details