ಕರ್ನಾಟಕ

karnataka

ETV Bharat / bharat

Delhi crime: ದೆಹಲಿಯಲ್ಲಿ ಮತ್ತೊಂದು ದುಷ್ಕೃತ್ಯ; ಮಹಿಳೆಯ ಮೃತದೇಹ ತುಂಡು ತುಂಡುಗಳಾಗಿ ಪತ್ತೆ! - ದೆಹಲಿಯಲ್ಲಿ ಮತ್ತೊಂದು ಮಹಿಳೆ ತುಂಡರಿಸಿ ಹತ್ಯೆ

ಶ್ರದ್ಧಾ ವಾಕರ್​ ಪ್ರಕರಣದಂತೆ ಇನ್ನೊಂದು ಘಟನೆ ದೆಹಲಿಯಲ್ಲಿ ನಡೆದಿದೆ. ಮಹಿಳೆಯ ದೇಹವನ್ನು ತುಂಡು ತುಂಡುಗಳನ್ನಾಗಿ ಕತ್ತರಿಸಿ ಬಿಸಾಡಲಾಗಿದೆ.

ದೆಹಲಿಯಲ್ಲಿ ಮತ್ತೊಂದು ಮಹಿಳೆ ತುಂಡರಿಸಿ ಹತ್ಯೆ
ದೆಹಲಿಯಲ್ಲಿ ಮತ್ತೊಂದು ಮಹಿಳೆ ತುಂಡರಿಸಿ ಹತ್ಯೆ

By

Published : Jul 12, 2023, 1:03 PM IST

Updated : Jul 12, 2023, 1:55 PM IST

ನವದೆಹಲಿ:ವರ್ಷದ ಆರಂಭದಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಭೀಕರ ಕೊಲೆ​ ಪ್ರಕರಣದಂತೆಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಗೀತಾ ಕಾಲೋನಿಯ ಫ್ಲೈಓವರ್ ಬಳಿ ಮಹಿಳೆಯೊಬ್ಬರ ಛಿದ್ರವಾಗಿರುವ ದೇಹದ ಭಾಗಗಳನ್ನು ದೆಹಲಿ ಪೊಲೀಸರು ಬುಧವಾರ ಪತ್ತೆ ಹಚ್ಚಿದ್ದಾರೆ. ದೇಹವನ್ನು ಕತ್ತರಿಸಿ ಬಿಡಿ ಭಾಗಗಳನ್ನಾಗಿ ಇಲ್ಲಿ ಬಿಸಾಡಲಾಗಿದೆ.

ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತುಂಡು ತುಂಡಾಗಿ ಬಿದ್ದಿದ್ದ ಮಹಿಳೆಯ ದೇಹವನ್ನು ಪತ್ತೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಲಂಕಷ ತನಿಖೆ ಆರಂಭಿಸಿದ್ದಾರೆ.

2 ಚೀಲದಲ್ಲಿ ಮೃತದೇಹಗಳ ತುಂಡು:ಬುಧವಾರ ಬೆಳಗ್ಗೆ ವ್ಯಕ್ತಿಯೊಬ್ಬರು ಕೊಳೆತ ದುರ್ವಾಸನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಶೋಧ ನಡೆಸಿದಾಗ 2 ಪಾಲಿಥಿನ್​ ಚೀಲಗಳು ಕಂಡುಬಂದಿದೆ. ಒಂದರಲ್ಲಿ ಕಡಿದ ತಲೆ ಇದ್ದರೆ, ಇನ್ನೊಂದರಲ್ಲಿ ದೇಹದ ಇತರ ಅಂಗಗಳನ್ನು ತುಂಬಲಾಗಿತ್ತು. ಘಟನೆ ಹಲವು ದಿನಗಳ ಹಿಂದೆ ನಡೆದ ಕಾರಣ, ದೇಹ ಗುರುತಿಸಲಾಗದಷ್ಟು ಕೊಳೆತು ಹೋಗಿದೆ.

ನಗರ ಜಂಟಿ ಪೊಲೀಸ್ ಕಮಿಷನರ್ ಪರಮಾದಿತ್ಯ ಮಾತನಾಡಿ, ಘಟನಾ ಸ್ಥಳದಲ್ಲಿ ನಮಗೆ ಎರಡು ಕಪ್ಪು ಪಾಲಿಥಿನ್ ಚೀಲಗಳು ಸಿಕ್ಕಿವೆ. ದೇಹದಿಂದ ತಲೆಯನ್ನು ಬೇರ್ಪಡಿಸಿ, ಇತರ ಭಾಗಗಳನ್ನು ತುಂಡರಿಸಲಾಗಿದೆ. ಉದ್ದ ಕೂದಲು ಸಿಕ್ಕ ಕಾರಣ ಮೃತದೇಹ ಮಹಿಳೆಯದ್ದಾಗಿರಬೇಕು ಎಂದು ಅಂದಾಜಿಸಲಾಗಿದೆ. ದೇಹ ಕೊಳೆತಿರುವ ಕಾರಣ ಗುರುತು ಪತ್ತೆ ತುಸು ಕಷ್ಟವಾಗಿದೆ ಎಂದು ತಿಳಿಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತಿದ್ದು, ಗುರುತು ಪತ್ತೆ ಮಾಡಲಾಗುವುದು. ಸಿಕ್ಕ ಚೀಲಗಳಲ್ಲಿ ದೇಹದ ಎಷ್ಟು ಭಾಗಗಳಿವೆ. ಯಾವುದಾದರೂ ಭಾಗಗಳು ಕಾಣೆಯಾಗಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸಂತ್ರಸ್ತೆಯನ್ನು ಪೊಲೀಸರು ಇನ್ನೂ ಗುರುತಿಸಿಲ್ಲ. ತನಿಖೆ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ಕೆಲವು ತಿಂಗಳ ಹಿಂದಿನಿಂದ ಈ ರೀತಿಯ ಭೀಕರ ಹತ್ಯಾ ಸರಣಿ ಪ್ರಕರಣ ದಾಖಲಾಗುತ್ತಿವೆ. ಈ ವರ್ಷದ ಮಾರ್ಚ್‌ನಲ್ಲಿ ನಗರದ ಐಎಸ್‌ಬಿಟಿ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಮಾನವ ದೇಹದ ನಾಲ್ಕು ಭಾಗಗಳು ಮತ್ತು ಕೂದಲು ಸಿಕ್ಕಿತ್ತು. ಕತ್ತರಿಸಿದ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಲಾಗಿತ್ತು. ದೇಹ ಗುರುತಿಸಲಾಗದಷ್ಟು ಕೊಳೆತು ಹೋಗಿತ್ತು.

ಶ್ರದ್ಧಾ ವಾಕರ್​ ಕೇಸ್​:ದೆಹಲಿಯಲ್ಲಿ ವರ್ಷದ ಆರಂಭದಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ ನಡೆದಿತ್ತು. ಸಹಜೀವನ ನಡೆಸುತ್ತಿದ್ದ ಅಫ್ತಾಬ್​ ಪೂನಾವಾಲಾ ಎಂಬಾತ ಶ್ರದ್ಧಾ ಎಂಬ ಯುವತಿಯನ್ನು ಕತ್ತು ಹಿಸುಕಿ ಕೊಂದ ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಮೂಳೆಯನ್ನು ಗ್ರೈಂಡರ್​ ಮೂಲಕ ಪುಡಿ ಮಾಡಿದ್ದ. ಬಳಿಕ ತುಂಡುಗಳನ್ನು ಒಂದೊಂದಾಗಿ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಬರುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.

ಹಂತಕ ಅಫ್ತಾಬ್​ ಪೂನಾವಾಲಾ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಂತೆ, ಶ್ರದ್ಧಾಳನ್ನು ಕೊಂದು, ದೇಹವನ್ನು ದಿನವೂ ವಿಲೇವಾರಿ ಮಾಡುತ್ತಿದ್ದ ಎಂದು ಬಾಯ್ಬಿಟ್ಟಿದ್ದ. ಕಳೆದ ವರ್ಷ ಮೇ 18 ರಂದು ಶ್ರದ್ಧಾಳನ್ನು ಕೊಂದ ನಂತರ ಪೂನಾವಾಲಾ ರಾತ್ರಿ ವೇಳೆ ಹಾರ್ಡ್​ವೇರ್​ ಅಂಗಡಿಗೆ ತೆರಳಿ ಹರಿತವಾದ ಆಯುಧವನ್ನು ಖರೀದಿಸಿ, ಶ್ರದ್ಧಾಳ ದೇಹವನ್ನು ಸ್ನಾನಗೃಹಕ್ಕೆ ಎಳೆದೊಯ್ದಿದ್ದ. ಅಲ್ಲಿ ಹರಿತವಾದ ಆಯುಧದಿಂದ ಎರಡೂ ಕೈಗಳನ್ನು 3 ತುಂಡುಗಳು, ಕಾಲುಗಳನ್ನು ತಲಾ 3 ತುಂಡು, ತಲೆಯನ್ನು ಒಂದು ಭಾಗ, ತೊಡೆಯನ್ನು 2 ಭಾಗ ಸೇರಿದಂತೆ ಇಡೀ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಭೀಕರತೆ ಮೆರೆದಿದ್ದ.

ಇದನ್ನೂ ಓದಿ:ಶ್ರದ್ಧಾ ವಾಕರ್​ ಹತ್ಯೆ ಕೇಸ್​: ದೇಹ 35 ತುಂಡು ಮಾಡಿ, ಮೂಳೆ ಗ್ರೈಂಡರ್​ನಲ್ಲಿ ಪುಡಿ ಮಾಡಿದ್ದನಂತೆ ಅಫ್ತಾಬ್​

Last Updated : Jul 12, 2023, 1:55 PM IST

ABOUT THE AUTHOR

...view details