ಕಿಶನ್‌ಗಂಜ್, ಬಿಹಾರ:ಜಿಲ್ಲೆಗೆ ಹೊಂದಿಕೊಂಡಿರುವ ಭಾರತ - ನೇಪಾಳ ಗಡಿಯಲ್ಲಿ ನುಸುಳಲು ಯತ್ನಿಸುತ್ತಿದ್ದ ಚೀನಾ ಪ್ರಜೆಯನ್ನು ಎಸ್‌ಎಸ್‌ಬಿ ಬಂಧಿಸಿದೆ. ಆತನನ್ನು ತನಿಖೆಗೆ ಒಳಪಡಿಸಿದಾಗ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ದಾಖಲಾಗಿದ್ದ ಆತನ ವಿಳಾಸ ನಕಲಿ ಎಂದು ತಿಳಿದು ಬಂದಿದೆ. ಆತನಿಂದ ಚೀನಾ ವೀಸಾ, 1.43 ಲಕ್ಷ ಭಾರತೀಯ ರೂಪಾಯಿ ಮತ್ತು 62 ಸಾವಿರ ನೇಪಾಳಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಶನ್‌ಗಂಜ್‌ನಲ್ಲಿ ಚೀನಾದ ಗೂಢಚಾರಿ ಬಂಧನ:ಮಾಹಿತಿ ಪ್ರಕಾರ, ಗುರುವಾರ ಸಂಜೆ ಕಿಶನ್‌ಗಂಜ್‌ನ ಠಾಕೂರ್‌ಗಂಜ್ ನೀರಿನ ಟ್ಯಾಂಕ್ ಬಳಿ ನೇಪಾಳ ಗಡಿಯಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಚೀನಾದ ಪ್ರಜೆಯನ್ನು ಎಸ್‌ಎಸ್‌ಬಿ ಬಂಧಿಸಿದೆ. ಚೀನಾ ಪ್ರಜೆಯಿಂದ ಭಾರತೀಯ ಪಾಸ್‌ಪೋರ್ಟ್ ಮತ್ತು ಚೈನೀಸ್ ವೀಸಾವನ್ನೂ ವಶಪಡಿಸಿಕೊಳ್ಳಲಾಗಿದೆ. ಅವರು ಹೊಂದಿರುವ ಭಾರತೀಯ ಪಾಸ್‌ಪೋರ್ಟ್‌ನಲ್ಲಿನ ವಿಳಾಸ ತಪ್ಪಾಗಿದೆ. ಅನುಮಾನಾಸ್ಪದ ಹಿನ್ನೆಲೆ ಎಸ್‌ಎಸ್‌ಬಿ ಸಿಬ್ಬಂದಿ ಆತನನ್ನು ಬಂಧಿಸಿದೆ.
ಅಧಿಕಾರಿಗಳಿಗೆ 40 ಸಾವಿರ ಲಂಚ ನೀಡಲು ಯತ್ನ: ಬಂಧನದ ವೇಳೆ ಎಸ್ಎಸ್ ಬಿ ಅಧಿಕಾರಿಗಳಿಗೆ 40 ಸಾವಿರ ಲಂಚ ನೀಡಲು ಆರೋಪಿ ಮುಂದಾಗಿದ್ದ ಎನ್ನಲಾಗಿದೆ. ಆತನ ವಿಚಾರಣೆ ವೇಳೆ ಆತ ಚೀನಾದ ಪ್ರಜೆ ಎಂಬುದು ದೃಢಪಟ್ಟಿದೆ ಎಂದು ಎಸ್‌ಎಸ್‌ಬಿ ಅಧಿಕಾರಿ ಎಲ್‌ಟಿ ತಮಾಂಗ್ ಹೇಳಿದ್ದಾರೆ. ಈತ ಚೀನಾದ ಗೂಢಚಾರಿ ಎಂದು ಶಂಕಿಸಲಾಗಿದೆ. ಸದ್ಯ ಆತನನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ಪಶ್ಚಿಮ ಬಂಗಾಳದ ಖೋಡಿಬರಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಮಾಂಗ್ ವಿವರಿಸಿದರು.