ನವದೆಹಲಿ: ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾಮೀನು ಪಡೆದ ನಟ ದೀಪ್ ಸಿಧುನನ್ನು ದೆಹಲಿ ಅಪರಾಧ ಶಾಖೆ ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಜಾಮೀನು ಪಡೆದು ಹೊರಬಂದ ದೀಪ್ ಸಿಧು: ಮತ್ತೆ ಬಂಧನ! - ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಪ್ರಕರಣ
ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ನಟ, ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರಿಗೆ ದೆಹಲಿ ನ್ಯಾಯಾಲಯ ಶನಿವಾರ ಜಾಮೀನು ಕರುಣಿಸಿತ್ತು, ಆದರೆ ಈಗ ಮತ್ತೆ ಪೊಲೀಸರು ಬಂಧಿಸಿದ್ದಾರೆ.
ದೀಪ್ ಸಿಧು
ಪ್ರಕರಣ ಸಂಬಂಧ ಫೆಬ್ರವರಿ 9 ರಂದು ನಟನನ್ನು ಬಂಧಿಸಲಾಯಿತು. ಅಂದಿನಿಂದ ಆರೋಪಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ. ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನಿಲೋಫರ್ ಅಬೀದಾ ಪರ್ವೀನ್ ಸಂದೀಪ್ ಸಿಂಗ್ ಸಿಧು ಅಲಿಯಾಸ್ ದೀಪ್ ಸಿಧು ಅವರ ಜಾಮೀನು ಅರ್ಜಿಗೆ ಅನುಮತಿ ನೀಡಿತ್ತು. ಅಂತೆಯೇ ಇಂದು ಜಾಮೀನು ಪಡೆದು ಹೊರ ಬಂದ ಸಿಧುವನ್ನು ಮತ್ತೆ ಬಂಧಿಸಲಾಗಿದೆ.