ಕರ್ನಾಟಕ

karnataka

ETV Bharat / bharat

ಯಲ್ಲಮ್ಮ ದೇವಿ ಉತ್ಸವದಲ್ಲಿ ನೂಕು ನುಗ್ಗಲು.. ಐವರಿಗೆ ಚಾಕು ಇರಿತ, 200 ಮೊಬೈಲ್​ ಕಳವು! - ಐದು ಜನರ ಮೇಲೆ ಚಾಕು ದಾಳಿ

ಬಲ್ಕಂಪೇಟೆ ಯಲ್ಲಮ್ಮ ತಾಯಿಯ ಕಲ್ಯಾಣ ಮಹೋತ್ಸವದಲ್ಲಿ ಅಧಿಕಾರಿಗಳ ವೈಫಲ್ಯ ಮತ್ತೊಮ್ಮೆ ಬಯಲಾಗಿದೆ. ಲಕ್ಷಗಟ್ಟಲೆ ಭಕ್ತರು ಸೇರುತ್ತಾರೆ ಎಂದು ಗೊತ್ತಿದ್ದರೂ ಸಹ ಪೊಲೀಸ್​ ಇಲಾಖೆ ಮುಂಜಾಗ್ರತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Balkampet Yellamma Temple in Telangana  Attacks on Five People in Balkampet  Balkampet Yellamma Devi fair  ಯಲ್ಲಮ್ಮ ದೇವಿ ಉತ್ಸವ  ಐವರ ಮೇಲೆ ಚಾಕು ದಾಳಿ  200 ಮೊಬೈಲ್​ ಕಳುವು  ಬಲ್ಕಂಪೇಟೆ ಯಲ್ಲಮ್ಮ ತಾಯಿಯ ಕಲ್ಯಾಣ ಮಹೋತ್ಸವ  ಕಲ್ಯಾಣ ಮಹೋತ್ಸವದಲ್ಲಿ ಅಧಿಕಾರಿಗಳ ವೈಫಲ್ಯ  ಲಕ್ಷಾಂತರ ಭಕ್ತರು ಯಲ್ಲಮ್ಮ ದೇವಿಯ ಸನ್ನಿಧಾನ  ಎಲ್ಲರಿಗೂ ಒಂದೇ ಸಾಲಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ  ದೇಗುಲ ಸಮಿತಿ ಹಾಗೂ ದೇವತಾ ಇಲಾಖೆ  ಇಲಾಖೆ ಅಧಿಕಾರಿಗಳ ನಡುವೆ ಒಳ ಜಗಳ  ಐದು ಜನರ ಮೇಲೆ ಚಾಕು ದಾಳಿ
ಪೊಲೀಸ್ ವೈಫಲ್ಯ, ಐವರ ಮೇಲೆ ಚಾಕು ದಾಳಿ

By

Published : Jun 22, 2023, 1:06 PM IST

ಹೈದರಾಬಾದ್​ (ತೆಲಂಗಾಣ):ಮುತ್ತಿನ ನಗರಿಯ ಹೊರವಲಯದಲ್ಲಿರುವ ಬಲ್ಕಂಪೇಟೆಯಲ್ಲಿ ಯಲ್ಲಮ್ಮ ದೇವಿಯ ಕಲ್ಯಾಣ ಮಹೋತ್ಸವ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ದೇವಿಯ ಸನ್ನಿಧಾನಕ್ಕೆ ಆಗಮಿಸಿದ್ದಾರೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಎಲ್ಲರಿಗೂ ಒಂದೇ ಸಾಲಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಸಮಸ್ಯೆ ಶುರುವಾಗಿದೆ. ಈ ಕ್ರಮದಲ್ಲಿ ಭಕ್ತರು ಬಿಸಿಲಿನ ತಾಪ ತಾಳಲಾರದೆ ಪರದಾಡಿದ್ದಾರೆ. ಮತ್ತೊಂದೆಡೆ ವಿಐಪಿ ಪಾಸ್‌ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಇದೆಲ್ಲಕ್ಕೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೇ ಕಾರಣ ಎಂಬುದು ಉನ್ನತ ಅಧಿಕಾರಿಗಳ ಅಭಿಪ್ರಾಯವಾಗಿದೆ. ವಿಐಪಿ ಪಾಸ್​ಗಳನ್ನು ಮನಸೋಇಚ್ಛೆ ನೀಡಿದ್ದರಿಂದ ಮತ್ತು ಅನಿರೀಕ್ಷಿತವಾಗಿ ಲಕ್ಷಾಂತರ ಜನ ಸೇರಿದ್ದರಿಂದ ಪೊಲೀಸರಿಗೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಿರುವುದು ಕಂಡು ಬಂದಿದೆ.

ದೇಗುಲ ಸಮಿತಿ ಹಾಗೂ ದೇವತಾ ಇಲಾಖೆ ಅಧಿಕಾರಿಗಳ ನಡುವೆ ಒಳ ಜಗಳ ನಡೆದಿದೆ ಎಂಬ ಆರೋಪವಿದೆ. ಬೋನಾಳ ಕಾಂಪ್ಲೆಕ್ಸ್​ನಲ್ಲಿ ಭಿಕ್ಷೆ ನೀಡದಂತೆ ಹೇಳಿದ್ದ ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿದ್ದಾರೆ. ಮಂಗಳವಾರ ರಾತ್ರಿ ಸಾವಿರಾರು ಭಕ್ತರು ದೇವಸ್ಥಾನದ ಬಳಿಯ ಬೋನಾಳ ಸಂಕೀರ್ಣದಲ್ಲಿ ಬೀಡು ಬಿಟ್ಟಿದ್ದರು. ಬೆಳಗ್ಗೆಯಿಂದ ಅಲ್ಲಿದ್ದ ಮಾದಕ ವ್ಯಸನಿಗಳು ಮತ್ತು ಹಳೆ ಕ್ರಿಮಿನಲ್‌ಗಳು ಮಧ್ಯರಾತ್ರಿಯ ನಂತರ ಧಾವಿಸಿದ್ದು, ನಶೆಯಲ್ಲಿದ್ದ ಅವರು ಭಕ್ತರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಪೊಲೀಸ್ ವೈಫಲ್ಯ

ಪೊಲೀಸ್ ಪಡೆ ಹೆಸರಿಗಷ್ಟೇ ಇದ್ದುದರಿಂದ ಭಕ್ತರು ಮತ್ತಷ್ಟು ಭಯದ ಸ್ಥಿತಿಯಲ್ಲಿ ಕಾಲ ಕಳೆದರು. ಮಂಗಳವಾರ ಮಧ್ಯಾಹ್ನ ಎಲ್ಲರೆಡ್ಡಿಗುಡ್ಡದ ಕಾರ್ತಿಕ್ರಾಜ್ ತಮ್ಮ ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ತೆರಳಿದ್ದರು. ಸಂಜೆ ವೇಳೆ ಅಪರಿಚಿತರು ಕಾರ್ತಿಕ್ ಮತ್ತು ಶುಭಂ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕಾರ್ತಿಕ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಕ್ರಿಸ್ಟಲ್ ಹೋಟೆಲ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಸಹೋದರರಾದ ವಿಶಾಲ್ ಮತ್ತು ವಿಷ್ಣು ಎಂಬುವರ ಮೇಲೆ ಯಶವಂತ್ ಮತ್ತು ಸೂರ್ಯ ಎಂಬುವರು ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯರಾತ್ರಿಯ ನಂತರ ಸಾಯಿಕುಮಾರ್ ಮತ್ತು ಆತನ ಸ್ನೇಹಿತರು ಬೋನಾಳ ಕಾಂಪ್ಲೆಕ್ಸ್​ನಲ್ಲಿದ್ದಾಗ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಸಂತ್ರಸ್ತೆಯ ಹೊಟ್ಟೆಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಸೋಮಾಜಿಗುಡಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು ಐದು ಜನರ ಮೇಲೆ ಚಾಕು ದಾಳಿ ನಡೆದಿದ್ದು, ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಅಮೀರ್‌ಪೇಟೆಯ ಹಳೆ ಕ್ರಿಮಿನಲ್ ಸಂಜುಸಿಂಗ್ ಈ ದಾಳಿ ನಡೆಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಂಜುಸಿಂಗ್​ ಎಸ್​ಆರ್​ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅವರನ್ನು ಟಾಸ್ಕ್ ಫೋರ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಎಸ್​ಆರ್​ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಾಜಿ ಅಪರಾಧಿಗಳ ಚಲನವಲನಗಳ ಮೇಲೆ ಪೊಲೀಸರು ನಿಗಾ ವಹಿಸದಿರುವುದು ದಾಳಿಗೆ ಕಾರಣ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ವೈಫಲ್ಯ ಕಂಡು ಬಂದಲ್ಲಿ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ. ಮತ್ತೊಂದೆಡೆ, ಆವರಣದಲ್ಲಿ ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿ ನೂರಾರು ಜನರ ಮೊಬೈಲ್‌ಗಳು ಕಳೆದುಹೋಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಕಳ್ಳರು ಭಕ್ತರ ಫೋನ್‌ಗಳಿಗೆ ಕನ್ನ ಹಾಕಿದ್ದಾರೆ. ಕಾಲ್ತುಳಿತದ ಸಮಯದಲ್ಲಿ ಫೋನ್ ಕೆಳಗೆ ಬಿದ್ದಿದೆ ಎಂದು ಇತರರು ಪೊಲೀಸರಿಗೆ ದೂರು ನೀಡಿದರು. 200ಕ್ಕೂ ಹೆಚ್ಚು ಫೋನ್​ಗಳು ಕಳ್ಳತನವಾಗಿವೆ ಎಂದು ವರದಿಯಾಗಿದೆ.

ಓದಿ:ವಿಚ್ಛೇದನ ಪ್ರಕರಣ ವಿಳಂಬ.. ಜಡ್ಜ್​ ಕಾರನ್ನೇ ಜಖಂಗೊಳಿಸಿದ ಮಂಗಳೂರಿನಲ್ಲಿ ನೆಲಸಿರುವ ಮಾಜಿ ಸೈನಿಕ!

ABOUT THE AUTHOR

...view details