ಕರ್ನಾಟಕ

karnataka

ETV Bharat / bharat

ಪ್ರಿಯಕರನಿಗಾಗಿ ಪೊಲೀಸ್​ ಕಾನ್​ಸ್ಟೇಬಲ್​ ಪತಿಯನ್ನೇ ಹತ್ಯೆಗೈದ ಪತ್ನಿ! - ಉಸಿರುಗಟ್ಟಿಸಿ ಕೊಲೆ

ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನಿಗಾಗಿ ಪೊಲೀಸ್​ ಕಾನ್​ಸ್ಟೇಬಲ್​ ಪತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.

Andhra woman murders cop husband for lover
ಪ್ರಿಯಕರನಿಗಾಗಿ ಪೊಲೀಸ್​ ಕಾನ್​ಸ್ಟೇಬಲ್​ ಪತಿಯ ಹತ್ಯೆ ಮಾಡಿದ ಮಹಿಳೆ!

By

Published : Aug 4, 2023, 10:37 PM IST

ವಿಶಾಖಪಟ್ಟಣಂ (ಆಂಧ್ರ ಪ್ರದೇಶ):ಪೊಲೀಸ್​ ಕಾನ್​ಸ್ಟೇಬಲ್ ಆಗಿದ್ದ ಪತಿಯನ್ನು ಪತ್ನಿಯೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಪ್ರಕರಣ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಬೆಳಕಿಗೆ ಬಂದಿದೆ. ರಾತ್ರಿ ಪತಿಗೆ ಮದ್ಯ ಕುಡಿಸಿದ ಹೆಂಡತಿ ಪ್ರಿಯಕರನ ಜೊತೆ ಸೇರಿ ಕೊಲೆಗೈದು, ಸಹಜ ಸಾವೆಂಬಂತೆ ಬಿಂಬಿಸುವ ನಾಟಕ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ್ ಕೊಲೆಯಾದ ಕಾನ್‌ಸ್ಟೇಬಲ್. ಪತ್ನಿ ಶಿವಜ್ಯೋತಿ ಆರೋಪಿ. ಈಕೆಯ ಪ್ರಿಯಕರ ರಾಮರಾವ್ ಹಾಗೂ ಮತ್ತೋರ್ವ ಮಹಿಳೆ ನೀಲಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯದ್ದು ಸಹಜ ಸಾವು ಎಂದು ನಂಬಿಸಿ ಸರ್ಕಾರದಿಂದ ಸಿಗುವ ಇತರ ಸವಲತ್ತುಗಳನ್ನು ಪಡೆಯುವ ದುರುದ್ದೇಶವನ್ನೂ ಶಿವಜ್ಯೋತಿ ಹೊಂದಿದ್ದಳು ಎಂದು ಪೊಲೀಸ್​ ಆಯುಕ್ತ ತ್ರಿವಿಕ್ರಮವರ್ಮ ಹೇಳಿದರು.

ಘಟನೆಯ ವಿವರ: ಮೂರು ದಿನಗಳ ಹಿಂದೆ, ಆಗಸ್ಟ್​ 1ರಂದು ರಾತ್ರಿ ವಿಶಾಖಪಟ್ಟಣಂ ಒನ್‌ಟೌನ್ ಕಾನ್‌ಸ್ಟೇಬಲ್ ರಮೇಶ್ ಎಂಬವರು ಅಸಹಜವಾಗಿ ಸಾವನ್ನಪ್ಪಿದ್ದರು. ಈ ಕುರಿತು ಖುದ್ದು ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಮೇರೆಗೆ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ರಮೇಶ್ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿರಲಿಲ್ಲ. ಆದ್ದರಿಂದ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಿದ್ದರು.

ಉಸಿರುಗಟ್ಟಿ ಸಾವು - ವರದಿಯಲ್ಲಿ ಬಹಿರಂಗ:ರಮೇಶ್ ದೇಹದ ಯಾವುದೇ ಗಾಯಗಳಿಲ್ಲದ ಕಾರಣ ಅನುಮಾನಗೊಂಡು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ವರದಿಯಲ್ಲಿ ರಮೇಶ್​ ಉಸಿರುಗಟ್ಟಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಹೀಗಾಗಿ ಪ್ರಕರಣ ಕುರಿತು ಹೆಚ್ಚಿನ ತನಿಖೆ ಕೈಗೊಳ್ಳಲಾಗಿತ್ತು. ಈ ವೇಳೆ ಪ್ರಿಯಕರನಿಗಾಗಿ ಪತ್ನಿಯೇ ಪತಿಯನ್ನು ಕೊಂದಿರುವುದು ಬಯಲಾಗಿದೆ ಎಂದು ಪೊಲೀಸ್​ ಆಯುಕ್ತರು ಮಾಹಿತಿ ನೀಡಿದರು.

ಒಂದು ವರ್ಷದಿಂದ ಸಂಬಂಧ: ಕಾನ್‌ಸ್ಟೇಬಲ್ ರಮೇಶ್ ಅವರ ಮುಂದಿನ ಮನೆಯಲ್ಲೇ ರಾಮರಾವ್ ವಾಸವಾಗಿದ್ದಾನೆ. ಈತನ ಜೊತೆ ಶಿವಜ್ಯೋತಿಗೆ ಒಂದೂವರೆ ವರ್ಷದಿಂದ ಪ್ರೇಮಾಂಕುರವಾಗಿತ್ತು. ಶಿವಜ್ಯೋತಿ ಮತ್ತು ರಾಮರಾವ್ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ಬಾರಿ ಜಗಳ ಸಹ ನಡೆದಿತ್ತು. ತನ್ನ ಮಕ್ಕಳನ್ನು ಬಿಟ್ಟು ಗೆಳೆಯನ ಜೊತೆ ಹೋಗುವಂತೆ ರಮೇಶ್ ಪತ್ನಿಗೆ ಹೇಳಿದ್ದ. ಆದರೆ, ಮಕ್ಕಳನ್ನು ಬಿಡುವುದಿಲ್ಲ ಎಂಬುದಾಗಿ ಶಿವಜ್ಯೋತಿ ಹೇಳುತ್ತಿದ್ದಳು ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಸಿಪಿ ತ್ರಿವಿಕ್ರಮವರ್ಮ ಪ್ರಕರಣವನ್ನು ವಿವರಿಸಿದ್ದಾರೆ.

ಅಲ್ಲದೇ, ರಮೇಶ್​ನನ್ನು​ ಕೊಲೆ ಮಾಡಲೆಂದು ನೀಲಾ ಎಂಬ ಮಹಿಳೆಗೆ ಒಂದು ಲಕ್ಷ ರೂ. ಹಣವನ್ನು ಶಿವಜ್ಯೋತಿ ನೀಡಿದ್ದಳು. ಇದರ ನಡುವೆ ಮಂಗಳವಾರ ರಾತ್ರಿ ಪತಿ ರಮೇಶ್​ಗೆ ಮದ್ಯ ಕುಡಿಸಿದ್ದಾಳೆ. ಈ ವೇಳೆ ಪ್ರಿಯಕರ ರಾಮರಾವ್​ ಕಾವಲಾಗಿ ಮನೆ ಹೊರಗೆ ನಿಂತಿದ್ದ. ನಂತರ ಈತನ ಸಹಾಯದಿಂದ ದಿಂಬುವಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:PubG ಗೇಮ್​ ಸಹವಾಸ: ಮದ್ಯ ಮಿಶ್ರಿತ ಕೂಲ್ ಡ್ರಿಂಕ್ಸ್​ ಕೊಟ್ಟು ವಿವಾಹಿತ ಮಹಿಳೆ ಮೇಲೆ ರೇಪ್.. ನಗ್ನ ವಿಡಿಯೋ ಇಟ್ಟುಕೊಂಡು ಬೆದರಿಕೆ

ABOUT THE AUTHOR

...view details