ಕರ್ನಾಟಕ

karnataka

ETV Bharat / bharat

ದೇಶದ ನಗರ ಪ್ರದೇಶಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಳಿಕೆ: NCRB - Crime against women down

ಕಳೆದ ವರ್ಷ(2020) ಬೆಂಗಳೂರಿನಲ್ಲಿ ಮಹಿಳೆಯರ ವಿರುದ್ಧ 2,730 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದರೆ, 2019ರಲ್ಲಿ 3,486 ಕೇಸುಗಳು ದಾಖಲಾಗಿದ್ದವು. ಆದರೆ ಕೋಲ್ಕತಾ ಮತ್ತು ಲಖನೌದಲ್ಲಿ ಮಾತ್ರ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಕ್ರಮವಾಗಿ ಶೇ 35 ಮತ್ತು ಶೇ 8 ರಷ್ಟು ಹೆಚ್ಚಳ ಕಂಡುಬಂದಿದೆ.

ನಗರ ಪ್ರದೇಶಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಳಿಕೆ
ನಗರ ಪ್ರದೇಶಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಳಿಕೆ

By

Published : Sep 15, 2021, 3:17 PM IST

ನವದೆಹಲಿ: ನಗರ ಪ್ರದೇಶಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ 21.1 ರಷ್ಟು ಕಡಿಮೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (NCRB) ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.

2019ರಲ್ಲಿ ಮಹಿಳೆಯ ವಿರುದ್ಧ 44,783 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಹೀಗೆ ದಾಖಲಾದ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಿನವು ಅಂದರೆ ಶೇ 30.2 ರಷ್ಟು 'ಗಂಡ ಅಥವಾ ಆತನ ಸಂಬಂಧಿಕರಿಂದ ನಡೆದ ಕ್ರೌರ್ಯ' ಸಂಬಂಧಿ ಪ್ರಕರಣಗಳೇ ಆಗಿವೆ.

ಮಹಾನಗರಗಳಲ್ಲಿ ದೌರ್ಜನ್ಯ ಪ್ರಕರಣಗಳು ಇಳಿಕೆ:

ದೆಹಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಕಳೆದ ವರ್ಷ ಶೇ 24.18 ರಷ್ಟು ಕಡಿಮೆಯಾಗಿದೆ. 2020ರಲ್ಲಿ (9,782) ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 2019 (12,902) ಕ್ಕೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಿದೆ.

ಮುಂಬೈನಲ್ಲಿ ಮಹಿಳೆಯರ ಮೇಲಿನ ಅಪರಾಧದಲ್ಲಿ ಇಳಿಕೆ ಕಂಡುಬಂದಿದೆ. 2019ರಲ್ಲಿ 6,519 ಪ್ರಕರಣಗಳಿದ್ದು ಕಳೆದ ವರ್ಷ 4,583 ಪ್ರಕರಣಗಳು ದಾಖಲಾಗಿವೆ. ಜೈಪುರದಲ್ಲಿ ಇದೇ ಅವಧಿಯಲ್ಲಿ 2,369 ಪ್ರಕರಣಗಳು ದಾಖಲಾಗಿದ್ದು, 2019 ರಲ್ಲಿ 3,417 ಪ್ರಕರಣಗಳು ವರದಿಯಾಗಿದ್ದವು.

ಕಳೆದ ವರ್ಷ(2020) ಬೆಂಗಳೂರಿನಲ್ಲಿ ಮಹಿಳೆಯರ ವಿರುದ್ಧ 2,730 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದರೆ, 2019ರಲ್ಲಿ 3,486 ಕೇಸುಗಳು ದಾಖಲಾಗಿದ್ದವು. ಹೈದರಾಬಾದ್ 2019ರಲ್ಲಿ 2,755 ಕ್ಕಿಂತ ಹೆಚ್ಚು ಪ್ರಕರಣಗಳು ಜರುಗಿದ್ದು, 2020ರಲ್ಲಿ 2,390 ಪ್ರಕರಣಗಳು ದಾಖಲಾಗಿವೆ.

ಕೋಲ್ಕತಾ ಮತ್ತು ಲಖನೌದಲ್ಲಿ ಮಾತ್ರ ಏರಿಕೆ:

ಬಹುತೇಕ ಎಲ್ಲಾ ನಗರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿವೆ. ಆದರೆ ಕೋಲ್ಕತಾ ಮತ್ತು ಲಖನೌದಲ್ಲಿ ಮಾತ್ರ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಕ್ರಮವಾಗಿ ಶೇ 35 ಮತ್ತು ಶೇ 8 ರಷ್ಟು ಹೆಚ್ಚಳ ಕಂಡುಬಂದಿದೆ.

ಕೋಲ್ಕತಾದಲ್ಲಿ 2020ರಲ್ಲಿ 2,001 ಪ್ರಕರಣಗಳು ವರದಿಯಾಗಿವೆ. ಆದರೆ 2019ರಲ್ಲಿ 1,474 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಲಖನೌದಲ್ಲಿ 2019 ರಲ್ಲಿ 2,425 ಪ್ರಕರಣಗಳು ದಾಖಲಾಗಿದ್ದು, 2,636 ಪ್ರಕರಣಗಳು 2020ರಲ್ಲಿ ದಾಖಲಾಗಿವೆ.

ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ದೆಹಲಿ ನಂ.1:

2020ರಲ್ಲಿ ವರದಕ್ಷಿಣೆ ಕಿರುಕುಳ ಅಡಿಯಲ್ಲಿ ಸೆಕ್ಷನ್ 304 ಬಿ (ಐಪಿಸಿ) ಅಡಿಯಲ್ಲಿ, ಒಟ್ಟು 358 ಪ್ರಕರಣಗಳು ವರದಿಯಾಗಿದ್ದರೆ, ದೆಹಲಿಯಲ್ಲಿ ಅತಿಹೆಚ್ಚು 109 ಪ್ರಕರಣಗಳು ದಾಖಲಾಗಿವೆ. ಲಖನೌದಲ್ಲಿ 48 ಪ್ರಕರಣಗಳು, ಕಾನ್ಪುರ ಮತ್ತು ಜೈಪುರದಲ್ಲಿ ಕ್ರಮವಾಗಿ 30 ಮತ್ತು 26 ಪ್ರಕರಣಗಳು ದಾಖಲಾಗಿವೆ.

ಪತಿ ಅಥವಾ ಆತನ ಸಂಬಂಧಿಕರಿಂದ ಕಿರುಕುಳ, ಸೆಕ್ಷನ್ 498A (IPC) ಅಡಿಯಲ್ಲಿ 10,733 ಕ್ರೌರ್ಯ ಪ್ರಕರಣಗಳು 2020 ರಲ್ಲಿ ನಗರಗಳಲ್ಲಿ ವರದಿಯಾಗಿವೆ. ದೆಹಲಿಯಲ್ಲಿ 2,570 ಪ್ರಕರಣಗಳು ದಾಖಲಾಗಿವೆ, ಹೈದರಾಬಾದ್ 1,226 ಮತ್ತು ಜೈಪುರದಲ್ಲಿ 1,043 ಪ್ರಕರಣಗಳು ದಾಖಲಾಗಿವೆ.

2020 ರಲ್ಲಿ, ನಗರಗಳಲ್ಲಿ ಸೆಕ್ಷನ್ 336 (ಐಪಿಸಿ) ಅಡಿಯಲ್ಲಿ 5,599 ಮಹಿಳೆಯರು ಅಪಹರಣಕ್ಕೆ ಸಂಬಂಧಿಸಿದಂತೆ ದಾಖಲಾಗಿವೆ. ದೆಹಲಿಯಲ್ಲಿ 2,637 ಪ್ರಕರಣಗಳು, ಬೆಂಗಳೂರಿನಲ್ಲಿ 484 ಪ್ರಕರಣಗಳು ಮತ್ತು ಇಂದೋರ್‌ನಲ್ಲಿ 335 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ:ರೆಡ್‌ಲೈಟ್‌ ಬೀಳ್ತಿದ್ದಂತೆ ರಸ್ತೆಮಧ್ಯೆ ಯುವತಿಯ ಡ್ಯಾನ್ಸ್: ಸವಾರರಿಗೆ ಮನರಂಜನೆ, ಪೊಲೀಸರಿಂದ ಎಚ್ಚರಿಕೆ

ABOUT THE AUTHOR

...view details