ಕಾಸ್ಗಂಜ್ (ಉತ್ತರ ಪ್ರದೇಶ) :ಇತ್ತೀಚಿನ ದಿನಗಳಲ್ಲಿ ಮನುಕುಲವೇ ತಲೆ ತಗ್ಗಿಸುವಂತಹ ಘಟನೆಗಳು ಆಗಾಗ್ಗೆ ವರದಿಯಾಗುತ್ತಿವೆ. ಒಂದರ ಮೇಲೊಂದು ಎಂಬಂತೆ ವಿಭಿನ್ನ, ಅತ್ಯಂತ ಹೇಯ ಎನ್ನುವಂಥ ದುಷ್ಕೃತ್ಯಗಳು ನಡೆಯುತ್ತಿವೆ. ಇಂಥದ್ದೇ ಪ್ರಕರಣ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಇಲ್ಲಿ 8 ವರ್ಷದ ಬಾಲಕಿ ಮೇಲೆ ಬಾಲಕ ಅತ್ಯಾಚಾರವೆಸಗಿದ್ದಾನೆ. ಈ ಪ್ರಕರಣ ಕಾಸ್ಗಂಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಅಚ್ಚರಿಯ ವಿಷಯವೆಂದರೆ, ಅಪ್ರಾಪ್ತೆ ಮೇಲೆ 15 ವರ್ಷದ ಆರೋಪಿ ಬಾಲಕ ಎಂಬಾತ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಅತ್ಯಾಚಾರ ಎಸಗಿದ ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಕಾಸ್ಗಂಜ್ ಜಿಲ್ಲೆಯ ಸದರ್ ಕೊಟ್ವಾಲಿ ಪ್ರದೇಶದಲ್ಲಿ ಬಾಲಕ ತನ್ನ ಕುಟುಂಬಸ್ಥರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಈ ಮನೆಯ ಪಕ್ಕದಲ್ಲೇ ಸಂತ್ರಸ್ತೆ ಕೂಡ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಇಂದು (ಮಂಗಳವಾರ) ಬೆಳಿಗ್ಗೆ ಆರೋಪಿ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದಿದ್ದಾನೆ. ಮನೆಯಲ್ಲಿ ಕಿಶೋರ್ ಕುಟುಂಬಸ್ಥರು ಇರಲಿಲ್ಲ. ಇದರ ಲಾಭ ಪಡೆದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಇದನ್ನೂ ಓದಿ :ಯುವತಿಯನ್ನು ಕಾರಿನಲ್ಲಿ ಸುತ್ತಾಡಿಸಿ ಕೊಂದು ಮ್ಯಾನ್‌ಹೋಲ್‌ಗೆಸೆದ ಅರ್ಚಕ: ಹೈದರಾಬಾದ್‌ನಲ್ಲೊಂದು ಭೀಕರ ಹತ್ಯೆ!
ಇದೇ ಸಮಯ ಬಾಲಕಿಯ ಕಿರುಚಾಟ ಕೇಳಿ ಕುಟುಂಬಸ್ಥರು ಮನೆಗೆ ಬಂದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಚಿಕಿತ್ಸೆಗಾಗಿ ಕಾಸ್ಗಂಜ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಯನ್ನು ವೈದ್ಯರ ಸಲಹೆಯಂತೆ ಅಲಿಘರ್ ವೈದ್ಯಕೀಯ ಕಾಲೇಜಿನ ರವಾನಿಸಲಾಗಿದೆ ಎಂದು ಕಾಸ್ಗಂಜ್ ಎಎಸ್ಪಿ ಜಿತೇಂದ್ರ ದುಬೆ ಮಾಹಿತಿ ನೀಡಿದ್ದಾರೆ.
ಅತ್ಯಾಚಾರ, ಸಂತ್ರಸ್ತೆ ಸಾವು : ಚಿಕ್ಕಮ್ಮನ ಮನೆಗೆ ಬಂದಿದ್ದ ಅಪ್ರಾಪ್ತೆಯ ಮೇಲೆ ಆಕೆಯ ಮಗನೇ ಅತ್ಯಾಚಾರ ಎಸಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮಗ್ರಾಹತ್ ಎಂಬಲ್ಲಿ ನಡೆದಿತ್ತು. ಮನೆಗೆ ಬಂದ ಬಾಲಕಿಯು ಪೋಷಕರಲ್ಲಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಸಾಯುವ ಮುನ್ನ ತಿಳಿಸಿದ್ದಳು. ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಪೋಷಕರು ಡೈಮಂಡ್ ಹಾರ್ಬರ್ ಆಸ್ಪತ್ರೆಗೆ ದಾಖಲಿಸಿದ್ದರು. ಜೂನ್ 10 ರಂದು ಶನಿವಾರ ಬೆಳಗ್ಗೆ ಬಾಲಕಿಯು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.
ಇದನ್ನೂ ಓದಿ :Rape on minor girl: ಆಂಟಿ ಮನೆಗೆ ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ.. ಚಿಕಿತ್ಸೆ ಫಲಿಸದೇ ಸಂತ್ರಸ್ತೆ ಸಾವು