ಹೈದರಾಬಾದ್:ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಕೆವಿನ್ ಪೀಟರ್ಸನ್ ಪ್ರಧಾನಿ ನರೇಂದ್ರ ಮೋದಿ ಅವರ ಘೇಂಡಾಮೃಗ ಸಂರಕ್ಷಣಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಅವರನ್ನು ಹೀರೋ ಎಂದು ಕರೆದಿದ್ದಾರೆ.
ಇದನ್ನೂ ಓದಿ:ವಿಶ್ವ ಖಡ್ಗಮೃಗ ದಿನ : 2,479 ಖಡ್ಗಮೃಗಗಳ ಕೊಂಬು ನಾಶಪಡಿಸಿದ ಅಸ್ಸೋಂ ಸರ್ಕಾರ
'ಘೇಂಡಾಮೃಗಗಳ ರಕ್ಷಣೆಗೆ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಬೆಂಬಲವಾಗಿ ನಿಂತಿದ್ದಾರೆ. ಭಾರತದಲ್ಲಿ ಖಡ್ಗಮೃಗಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರಲು ಅವರು ಕೈಗೊಂಡಿರುವ ನಿರ್ಧಾರ ಕಾರಣವಾಗಿದೆ. ಎಂತಹ ನಾಯಕ ಅವರು' ಎಂದು ಬಣ್ಣಿಸಿದ್ದಾರೆ.
ವಿಶ್ವ ಖಡ್ಗಮೃಗಗಳ ದಿನಾಚರಣೆ ಅಂಗವಾಗಿ ಅಸ್ಸೋಂ ಸರ್ಕಾರ ದಾಖಲೆಯ 2,479 ಖಡ್ಗಮೃಗಗಳ ಕೊಂಬುಗಳನ್ನು ಸುಟ್ಟು ಹಾಕಿತ್ತು. ಈ ಮೂಲಕ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆಯ ಖಾತರಿ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸಿಎಂ ಹೇಮಂತ್ ಬಿಸ್ವಾ ಶರ್ಮಾ ಮಾಡಿದ್ದ ಟ್ವೀಟ್ ಅನ್ನು ಪ್ರಧಾನಿ ಮೋದಿ ರಿಟ್ವೀಟ್ ಮಾಡುವ ಮೂಲಕ ಅಲ್ಲಿನ ಸರ್ಕಾರದ ನಿರ್ಧಾರವನ್ನು ಕೊಂಡಾಡಿದ್ದಾರೆ.