ಭೋಪಾಲ್: ಮಹರ್ಷಿ ಮಹೇಶ್ ಯೋಗಿ ಅವರ ಜನ್ಮದಿನದಂದು ಇಲ್ಲಿನ ಅಂಕುರ್ ಮೈದಾನದಲ್ಲಿ ಪಂಡಿತರಿಗಾಗಿ ವಿಶಿಷ್ಟ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಪಂಡಿತರು ತಮ್ಮ ಸಾಂಪ್ರದಾಯಿಕ ಧೋತಿ ಕುರ್ತಾಗಳನ್ನು ಧರಿಸಿಯೇ ಮೈದಾನಕ್ಕಿಳಿದಿರುವುದು ವಿಶೇಷವಾಗಿತ್ತು. ಅಷ್ಟೇ ಅಲ್ಲದೇ ಸಂಸ್ಕೃತದಲ್ಲಿ ಕಾಮೆಂಟ್ರಿ ನೀಡಿರುವುದು ಮತ್ತೂ ಅಚ್ಚರಿಗೆ ಕಾರಣವಾಗಿತ್ತು.
ಧೋತಿ - ಕುರ್ತಾ ಧರಿಸಿಯೇ ಕ್ರಿಕೆಟ್ ಆಡಿದ ಪಂಡಿತರು ಇದು ಎರಡನೇ ವರ್ಷದ ಪಂದ್ಯಾವಳಿಯಾಗಿದ್ದು, ಎಲ್ಲ ಸ್ಪರ್ಧಿಗಳು ಸಾಂಪ್ರದಾಯಿಕ ಧೋತಿ ಕುರ್ತಾಗಳನ್ನು ಧರಿಸಿದ್ದರು. ಪಂದ್ಯದ ಕಾಮೆಂಟ್ರಿ ಕೂಡ ಸಂಸ್ಕೃತದಲ್ಲಿದೆ ಎಂದು ಸಂಸ್ಕೃತಿ ಬಚಾವೋ ಮಂಚ್‌ನ ರಾಜ್ಯಾಧ್ಯಕ್ಷ ಚಂದ್ರಶೇಖರ್ ತಿವಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಓದಿ:ಜನವರಿ 23ರಿಂದ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಉತ್ತುಂಗಕ್ಕೆ: ಐಐಟಿ ಕಾನ್ಪುರ ತಜ್ಞ
ಸಂಸ್ಕೃತ ಭಾಷೆಗೆ ಉತ್ತೇಜನ ನೀಡುವುದು ಹಾಗೂ ವೈದಿಕ ಮನೆತನದಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದು ನಾಲ್ಕು ದಿನಗಳ ಪಂದ್ಯಾವಳಿಯ ಉದ್ದೇಶವಾಗಿದೆ. ವಿಜೇತ ತಂಡಗಳಿಗೆ ವೇದ ಪುಸ್ತಕಗಳು ಮತ್ತು ಶತಮಾನೋತ್ಸವದ ಪಂಚಾಂಗದ ಜೊತೆಗೆ ಆಟಗಾರರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಚಂದ್ರ ಶೇಖರ್ ಇದೇ ವೇಳೆ ತಿಳಿಸಿದ್ದಾರೆ.
ಧೋತಿ-ಕುರ್ತಾ ಧರಿಸಿಯೇ ಕ್ರಿಕೆಟ್ ಆಡಿದ ಪಂಡಿತರು ಪ್ರತಿ ವೈದಿಕ ಕ್ರಿಕೆಟ್ ಪಂದ್ಯಾವಳಿಯನ್ನು ಭೋಪಾಲ್‌ನಲ್ಲಿ ಆಯೋಜಿಸಲಾಗಿದೆ. ಜನರು ಇದನ್ನು ಲುಂಗಿ ಮತ್ತು ಧೋತಿ ಕ್ರಿಕೆಟ್ ಎಂದೂ ಕರೆಯುತ್ತಾರೆ. ಆಟಗಾರರ ಉಡುಪು ಸಾಂಪ್ರದಾಯಿಕವಾಗಿಯೇ ಇದೆ. ಆಟಗಾರರು ಲುಂಗಿ ಮತ್ತು ಧೋತಿ ಧರಿಸಿ ಮೈದಾನದಲ್ಲಿ ಆಡುತ್ತಾರೆ.