ಕರ್ನಾಟಕ

karnataka

ETV Bharat / bharat

ಮುಂಬೈನಿಂದ ಗೋವಾಕ್ಕೆ ಬಂದ ಹಡಗಿನಲ್ಲಿ 66 ಮಂದಿಗೆ ಕೋವಿಡ್ ಸೋಂಕು

ಎರಡು ಸಾವಿರಕ್ಕೂ ಅಧಿಕ ಪ್ರಯಾಣಿಕರಿದ್ದ ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ 66 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ಹಡಗಿನಲ್ಲೇ ಐಸೋಲೇಷನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Crew member of Mumbai - Goa cruise ship
Crew member of Mumbai - Goa cruise ship

By

Published : Jan 3, 2022, 8:09 PM IST

ಮುಂಬೈ(ಮಹಾರಾಷ್ಟ್ರ):ಮುಂಬೈನಿಂದ ಗೋವಾಗೆ ಬಂದ ಹಡಗಿನಲ್ಲಿದ್ದ 2 ಸಾವಿರಕ್ಕೂ ಅಧಿಕ ಜನರ ಪೈಕಿ 66 ಜನರಲ್ಲಿ ಕೊರೊನಾ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್​ ರಾಣೆ ತಿಳಿಸಿದ್ದಾರೆ.

ಹಡಗಿನಲ್ಲಿದ್ದ 1471 ಪ್ರಯಾಣಿಕರು ಹಾಗೂ 595 ಸಿಬ್ಬಂದಿಗೆ ಆರ್​​ಟಿ-ಪಿಸಿಆರ್​ ಟೆಸ್ಟ್​ ಮಾಡಲಾಗಿದ್ದು, ಇದೀಗ ಇಷ್ಟೊಂದು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಲ್ಲರನ್ನೂ ಹಡಗಿನಲ್ಲೇ ಐಸೋಲೇಷನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಪರೀಕ್ಷೆಗೊಳಪಟ್ಟಿರುವ 2000 ಮಾದರಿಗಳಲ್ಲಿ 66 ಪ್ರಯಾಣಿಕರಿಗೆ ಕೋವಿಡ್​ ದೃಢಪಟ್ಟಿದ್ದು, ಇದೀಗ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ವಿದ್ಯಾರ್ಥಿನಿಯರಿಗೆ ₹20 ಸಾವಿರ, ಗೃಹಿಣಿಯರಿಗೆ ಮಾಸಿಕ ₹2 ಸಾವಿರ, ವರ್ಷಕ್ಕೆ 8 LPG ಸಿಲಿಂಡರ್​​ ಫ್ರೀ: ಸಿಧು ಭರ್ಜರಿ ಘೋಷಣೆ

ಹಡಗಿನಲ್ಲಿದ್ದ ಓರ್ವ ವ್ಯಕ್ತಿಗೆ ಕೋವಿಡ್​ ಸೋಂಕು ದೃಢಗೊಂಡಿತ್ತು. ಹೀಗಾಗಿ ಅದರಲ್ಲಿದ್ದ ಎಲ್ಲ ಪ್ರಯಾಣಿಕರಿಗೂ ಆರ್​ಟಿ-ಪಿಸಿಆರ್​ ಟೆಸ್ಟ್​ ಮಾಡಲಾಗಿದೆ. ಪ್ರತಿ ಪ್ರಯಾಣಿಕರಿಗೂ ಕೊರೊನಾ ಟೆಸ್ಟ್​​ ಮಾಡಲಾಗಿದ್ದು, ವರದಿ ಬಂದ ಬಳಿಕವೇ ಅಲ್ಲಿಂದ ತೆರಳಲು ಅವಕಾಶ ಮಾಡಿಕೊಡಲಾಗುವುದು. ನಾವು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಯೊಂದರ ಜತೆ ಟೈ-ಅಪ್ ಮಾಡಿಕೊಂಡಿದ್ದೇವೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details