ಪಿಲಿಭಿತ್ (ಉತ್ತರ ಪ್ರದೇಶ):ಐವತ್ತು ವರ್ಷದ ಮಹಿಳೆಯೊಬ್ಬರು ಯುವಕನೊಬ್ಬನನ್ನು ಪ್ರೀತಿಸಿದ್ದಾರೆ. ಆದರೆ, ಆಕೆಯ ಪ್ರೇಮಕ್ಕೆ ಪತಿ ಅಡ್ಡಿಯಾಗಲು ಆರಂಭಿಸಿದ್ದರಿಂದ ಪತ್ನಿಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ಗಜರೌಲಾ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಗರ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಮಂಚದ ಮೇಲೆ ಮಲಗಿದ್ದ ಪತಿಯನ್ನು ಹಗ್ಗದಿಂದ ಕಟ್ಟಿಹಾಕಿ, ಬಳಿಕ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಮೃತ ದೇಹವನ್ನು ವಿಲೇವಾರಿ ಮಾಡಲು, ಅದನ್ನು ಐದು ತುಂಡುಗಳಾಗಿ ಕತ್ತರಿಸಿ, ಗೋಣಿಚೀಲದಲ್ಲಿ ತುಂಬಿ ಕಾಲುವೆಗೆ ಎಸೆದಿದ್ದಾರೆ ಎಂಬುದಾಗಿ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಪತಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆ : ಇಲ್ಲಿನ ಶಿವನಗರ ಗ್ರಾಮದಲ್ಲಿ ರಾಂಪಾಲ್(55) ಹಾಗೂ ದುಲಾರೊ (50) ದಂಪತಿ ವಾಸವಾಗಿದ್ದರು. ಇವರಿಗೆ ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. ಮೂವರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಇಬ್ಬರು ಗಂಡು ಮಕ್ಕಳಿಗೂ ಮದುವೆಯಾಗಿದೆ. ರಾಂಪಾಲ್ ಅವರಿಗೆ ಎರಡು ಮನೆಗಳಿವೆ. ಒಂದು ಮನೆಯಲ್ಲಿ ಇಬ್ಬರು ಪುತ್ರರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರೆ, ಇನ್ನೊಂದು ಮನೆಯಲ್ಲಿ ರಾಂಪಾಲ್ ತನ್ನ ಹೆಂಡತಿ ಮತ್ತು ಪ್ರೀತಿಪಾತ್ರರ ಜೊತೆ ವಾಸಿಸುತ್ತಿದ್ದರು.
ಆದರೆ, ಬರೇಲಿಯ ಯುವಕನೊಂದಿಗೆ ದುಲಾರೊ ಅವರು ಪ್ರೀತಿಸಲು ಪ್ರಾರಂಭಿಸಿದ್ದರು. ಈ ವಿಷಯ ಅವರ ಪತಿ ರಾಂಪಾಲ್‌ಗೆ ತಿಳಿದಿದೆ. ಹೀಗಾಗಿ ಇದನ್ನು ಖಡಾಖಂಡಿತವಾಗಿ ವಿರೋಧಿಸಿದ್ದಾರೆ. ಹೀಗಾಗಿ ದುಲಾರೋ ತನ್ನ ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದರು.
ಪತಿಯನ್ನು ಕೊಡಲಿಯಿಂದ ಕೊಂದ ಪತ್ನಿ : ಸೋಮವಾರ ರಾತ್ರಿ ರಾಂಪಾಲ್ ಮಂಚದ ಮೇಲೆ ಮಲಗಿದ್ದ. ಈ ವೇಳೆ, ದುಲಾರೋ ಅವರು ಪತಿಯನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಿದ್ರಾವಸ್ಥೆಯಲ್ಲಿದ್ದ ರಾಂಪಾಲ್‌ಗೆ ಈ ವಿಷಯ ತಿಳಿದು ಬಂದಿಲ್ಲ. ಇದಾದ ಬಳಿಕ ದುಲಾರೋ ರಾಂಪಾಲ್ ಅವರನ್ನು ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಇದರ ನಂತರ, ಮೃತ ದೇಹವನ್ನು ವಿಲೇವಾರಿ ಮಾಡಲು, ಅದನ್ನು ಐದು ತುಂಡುಗಳಾಗಿ ಕತ್ತರಿಸಿದ್ದಾರೆ. ನಂತರ ಈ ತುಂಡುಗಳನ್ನು ಗೋಣಿ ಚೀಲದಲ್ಲಿ ತುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಹರಿಯುವ ನಿಗೋಹಿ ಶಾಖಾ ಕಾಲುವೆಗೆ ಎಸೆದಿದ್ದಾರೆ.