ಕರ್ನಾಟಕ

karnataka

ETV Bharat / bharat

ಬೈ ನೌ ಪೇ ಲೇಟರ್ ಅಥವಾ ಕ್ರೆಡಿಟ್ ಕಾರ್ಡ್​ - ಯಾವುದು ಬೆಸ್ಟ್​? - etv bharat kannada

ಕೈಯಲ್ಲಿ ನಗದು ಇಲ್ಲದೆ ತಕ್ಷಣ ಏನನ್ನಾದರೂ ಖರೀದಿಸಿ ನಂತರ ಕಂತುಗಳಲ್ಲಿ ಮರುಪಾವತಿ ಮಾಡುವುದನ್ನು ಸಂಕ್ಷಿಪ್ತವಾಗಿ ಬಿಎನ್​ಪಿಎಲ್​ ಎನ್ನಲಾಗುತ್ತದೆ. ಇಂಥ ಸಾಲದ ಮೊತ್ತವನ್ನು ಆ್ಯಪ್​​​​ನಲ್ಲಿ ಮೊದಲೇ ನಿಗದಿಪಡಿಸಲಾಗಿರುತ್ತದೆ.

ಬೈ ನೌ ಪೇ ಲೇಟರ್ ಅಥವಾ ಕ್ರೆಡಿಟ್ ಕಾರ್ಡ್​.. ಯಾವುದು ಬೆಸ್ಟ್​?
Credit Card vs Buy Now Pay Later, which is the better option?

By

Published : Sep 26, 2022, 1:38 PM IST

ಹೈದರಾಬಾದ್: ಹಬ್ಬದ ಸಮಯ ಆರಂಭವಾಗಿದ್ದು, ವಿವಿಧ ಆಕರ್ಷಕ ಆಫರ್​ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಕಂಪನಿಗಳು ಸಜ್ಜಾಗಿವೆ. ದೊಡ್ಡ ಇ-ಕಾಮರ್ಸ್​ ಕಂಪನಿಗಳು ಈಗಾಗಲೇ ಸಾಕಷ್ಟು ರಿಯಾಯಿತಿಗಳನ್ನು ಘೋಷಿಸಿದ್ದು, ಗ್ರಾಹಕರು ಇವುಗಳನ್ನು ಪರಿಶೀಲಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಖರೀದಿಗಳು ದಾಖಲೆಯ ಏರಿಕೆ ಕಾಣುವ ಸಾಧ್ಯತೆಗಳಿವೆ. ಈ ಮಧ್ಯೆ ಕ್ರೆಡಿಟ್ ಕಾರ್ಡ್​ ಮತ್ತು ಬೈ ನೌ ಪೇ ಲೇಟರ್ ಹೀಗೆ ಎರಡು ಖರೀದಿ ಪಾವತಿ ಆಯ್ಕೆಗಳು ಗ್ರಾಹಕರ ಮುಂದಿವೆ. ಆದರೆ ಈ ಎರಡರ ಮಧ್ಯೆ ಯಾವುದು ಹೆಚ್ಚು ಲಾಭಕರ ಎಂಬುದನ್ನು ನೀವು ತಿಳಿಯುವುದು ಸೂಕ್ತ.

ಹೊಸದಾಗಿ ಸಾಲ ಪಡೆಯಲು ಬಯಸುವವರಿಗೆ ಬೇಗನೆ ಕ್ರೆಡಿಟ್ ಕಾರ್ಡ್‌ ಸಿಗುತ್ತಿಲ್ಲ. ಹೀಗಾಗಿ ಫಿನ್‌ಟೆಕ್ ಕಂಪನಿಗಳು ಅಂಥ ಸಾಲಗಾರರನ್ನು ಗುರಿಯಾಗಿಸಿಕೊಂಡು ಅವರಿಗೆ ಬೈ ನೌ ಪೇ ಲೇಟರ್ (BNPL) ಆಯ್ಕೆಗಳನ್ನು ನೀಡಲು ಮುಂದಾಗುತ್ತಿವೆ. ಕೈಯಲ್ಲಿ ನಗದು ಇಲ್ಲದೆ ತಕ್ಷಣ ಏನನ್ನಾದರೂ ಖರೀದಿಸಿ ನಂತರ ಕಂತುಗಳಲ್ಲಿ ಮರುಪಾವತಿ ಮಾಡುವುದನ್ನು ಸಂಕ್ಷಿಪ್ತವಾಗಿ ಬಿಎನ್​ಪಿಎಲ್​ ಎನ್ನಲಾಗುತ್ತದೆ. ಇಂಥ ಸಾಲದ ಮೊತ್ತವನ್ನು ಆ್ಯಪ್​​​​ನಲ್ಲಿ ಮೊದಲೇ ನಿಗದಿಪಡಿಸಲಾಗಿರುತ್ತದೆ. ಈ ನಿರ್ದಿಷ್ಟ ಸಾಲದ ಮಿತಿಯೊಳಗೆ ನೀವು ಏನನ್ನಾದರೂ ಖರೀದಿಸಬಹುದು. ಹೀಗೆ ಖರೀದಿಸಲಾದ ಬಿಲ್ ಅನ್ನು 15-45 ದಿನಗಳಲ್ಲಿ ಪಾವತಿಸಬೇಕು. ಪಾವತಿಯಲ್ಲಿ ಒಂದೇ ಒಂದು ದಿನ ವಿಳಂಬವಾದರೂ ದಂಡ ವಿಧಿಸಲಾಗುತ್ತದೆ. ಅಂತಿಮವಾಗಿ, ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಏಜೆಂಟ್ ಕಿರುಕುಳ ಆರೋಪ: ಪೊಲೀಸರ ಮೊರೆ ಹೋದ ನಟ

ಸಾಮಾನ್ಯವಾಗಿ ಬ್ಯಾಂಕ್‌ಗಳು ಉತ್ತಮ ಕ್ರೆಡಿಟ್ ಸ್ಕೋರ್‌ ಹೊಂದಿರುವ ಉದ್ಯೋಗಿಗಳಿಗೆ ಕ್ರೆಡಿಟ್ ಕಾರ್ಡ್‌ ನೀಡುತ್ತವೆ. ಸಾಲಗಾರನು ಮೊತ್ತ ಮರುಪಾವತಿಸಲು 45-50 ದಿನಗಳ ಸಮಯ ಪಡೆಯುತ್ತಾನೆ. ಪಾವತಿಯಲ್ಲಿ ವಿಳಂಬವಾದರೆ ಗರಿಷ್ಠ ಶೇ 45 ರಷ್ಟು ವಾರ್ಷಿಕ ಬಡ್ಡಿಯನ್ನು ವಿಧಿಸಲಾಗುತ್ತದೆ. ಕ್ರೆಡಿಟ್​ ಕಾರ್ಡ್​ಗಳ ವಿಳಂಬ ಪಾವತಿಗಳ ಮೇಲೆ ಕ್ರೆಡಿಟ್ ಸ್ಕೋರ್ ಕಡಿತಗೊಳ್ಳುತ್ತದೆ ಮತ್ತು ಅದನ್ನು ಪುನಃ ಸರಿಮಾಡಲು ತುಂಬಾ ಕಷ್ಟವಾಗುತ್ತದೆ.

ಕ್ರೆಡಿಟ್ ಕಾರ್ಡ್‌ಗಳು ಕನಿಷ್ಠ ಪಾವತಿ ಆಯ್ಕೆಯನ್ನು ಹೊಂದಿವೆ. ನಿಗದಿತ ಸಮಯಕ್ಕೆ ಹಣವನ್ನು ಪಾವತಿಸದಿದ್ದರೆ ಬ್ಯಾಂಕ್‌ಗಳು ವಿಳಂಬ ಶುಲ್ಕವನ್ನು ವಿಧಿಸುತ್ತವೆ. ದೊಡ್ಡ ಬಿಲ್‌ಗಳನ್ನು ಇಎಂಐಗಳಾಗಿ ಪರಿವರ್ತಿಸುವ ಅವಕಾಶವೂ ಇದೆ. ಆದರೆ, ಬಿಎನ್​​ಪಿಲ್​​ ನಲ್ಲಿ ಅಂಥ ಆಯ್ಕೆ ಸಿಗುವುದಿಲ್ಲ. ಈ ಎರಡರಲ್ಲಿ ಆಯ್ಕೆ ಮಾಡುವ ಮೊದಲು ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿಕೊಳ್ಳಿ. ದುಬಾರಿ ವಸ್ತುಗಳನ್ನು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಖರೀದಿಸಬಹುದು ಮತ್ತು ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಬಿಎನ್​​ಪಿಲ್​​ನಲ್ಲಿ ಅಂಥ ಅವಕಾಶ ಇಲ್ಲ. ಒಟ್ಟಾರೆಯಾಗಿ ತಕ್ಷಣಕ್ಕೆ ಏನನ್ನಾದರೂ ಖರೀದಿಸಿ ಅಲ್ಪಾವಧಿಯಲ್ಲಿ ಆ ಹಣವನ್ನು ಮರುಪಾವತಿ ಮಾಡಲು ಬಯಸುವಿರಾದರೆ ನಿಮಗೆ ಬೈ ನೌ ಪೇ ಲೇಟರ್​ ಸೂಕ್ತವಾಗಿದೆ.

ಇದನ್ನೂ ಓದಿ: ಒಳ್ಳೆಯ ಕ್ರೆಡಿಟ್​ ಸ್ಕೋರ್ ಇಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ABOUT THE AUTHOR

...view details