ಕರ್ನಾಟಕ

karnataka

ETV Bharat / bharat

ದೆಹಲಿ ಮಾದರಿಯಲ್ಲಿ ತಮಿಳುನಾಡಿನಲ್ಲಿ ಶಾಲೆಗಳ ನಿರ್ಮಾಣ: ಸಿ ಎಂ ಸ್ಟಾಲಿನ್ - ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಭೇಟಿಗೆ ಆಹ್ವಾನಿಸಿದ ಸ್ಟಾಲಿನ್​

ನಮ್ಮ ಸರ್ಕಾರವು ದೆಹಲಿಯ ಮಾದರಿ ಶಾಲೆಗಳನ್ನು ದಕ್ಷಿಣ ರಾಜ್ಯದಲ್ಲಿ ಪುನರಾವರ್ತಿಸುತ್ತಿದೆ ಎಂದು ಸ್ಟಾಲಿನ್ ಹೇಳಿದರು. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ದೆಹಲಿಯಲ್ಲಿ ಮಾದರಿ ಶಾಲೆಗಳು ಹೇಗೆ ನಡೆಯುತ್ತಿವೆಯೋ ಅದೇ ರೀತಿ ತಮಿಳುನಾಡಿನಲ್ಲೂ ನಾವು ಮಾಡುತ್ತಿದ್ದೇವೆ ಎಂದು ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಸ್ಟಾಲಿನ್​ ಹೇಳಿದ್ದಾರೆ.

CM Stalin
ಸಿ ಎಂ ಸ್ಟಾಲಿನ್

By

Published : Apr 1, 2022, 9:19 PM IST

Updated : Apr 1, 2022, 9:34 PM IST

ನವದೆಹಲಿ:ನಮ್ಮ ಸರಕಾರವು ದೆಹಲಿಯ ಮಾದರಿಯಲ್ಲಿ ದಕ್ಷಿಣ ರಾಜ್ಯದಲ್ಲಿ ಮಾದರಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ದಿಲ್ಲಿ ಪ್ರವಾಸದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡುವಂತೆ ಆಹ್ವಾನ ನೀಡಿದರು. ಸ್ಟಾಲಿನ್ ಮತ್ತು ಅವರ ದೆಹಲಿ ಸಹವರ್ತಿ ದೆಹಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಅಲ್ಲಿ ಎಎಪಿ ಸರ್ಕಾರದ ಅಡಿಯಲ್ಲಿ ನಗರದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗಳ ಬಗ್ಗೆ ಅಧಿಕಾರಿಗಳು ತಮಿಳುನಾಡು ಮುಖ್ಯಮಂತ್ರಿಗೆ ವಿವರಿಸಿದರು.

ದೆಹಲಿ ಪ್ರವಾಸದಲ್ಲಿ ಸಿ ಎಂ ಸ್ಟಾಲಿನ್

ಕಳೆದ ಆರರಿಂದ ಏಳು ವರ್ಷಗಳಿಂದ ದೆಹಲಿ ಸರ್ಕಾರ ತನ್ನ ಬಜೆಟ್‌ನ ಸುಮಾರು ಶೇ.25ರಷ್ಟನ್ನು ಶಿಕ್ಷಣಕ್ಕಾಗಿ ನಿರಂತರವಾಗಿ ಖರ್ಚು ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ಎಂ.ಕೆ. ಸ್ಟಾಲಿನ್‌ಗೆ ತಿಳಿಸಿದರು. 2014-15ರಲ್ಲಿ ಸರಕಾರಿ ಶಾಲೆಗಳಲ್ಲಿ 12ನೇ ತರಗತಿಯಲ್ಲಿ ಶೇ.88ರಷ್ಟು ಉತ್ತೀರ್ಣರಾಗಿದ್ದು, ಖಾಸಗಿ ಶಾಲೆಗಳಿಗಿಂತ ಕಡಿಮೆಯಿತ್ತು. ಆದರೆ, ಇದು 2019-20ರಲ್ಲಿ ಶೇ.98ಕ್ಕೆ ಏರಿಕೆಯಾಗಿದ್ದು, ಖಾಸಗಿ ಶಾಲೆಗಳಲ್ಲಿ ಶೇ.92 ಇತ್ತು ಎಂದರು.

ದೆಹಲಿ ಪ್ರವಾಸದಲ್ಲಿ ಸಿ ಎಂ ಸ್ಟಾಲಿನ್

ನಮ್ಮ ಸರ್ಕಾರವು ದೆಹಲಿಯ ಮಾದರಿ ಶಾಲೆಗಳನ್ನು ದಕ್ಷಿಣ ರಾಜ್ಯದಲ್ಲಿ ಪುನರಾವರ್ತಿಸುತ್ತದೆ ಎಂದು ಸ್ಟಾಲಿನ್ ಹೇಳಿದರು. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ದೆಹಲಿಯಲ್ಲಿ ಮಾದರಿ ಶಾಲೆಗಳು ಹೇಗೆ ನಡೆಯುತ್ತಿವೆಯೋ, ಅದೇ ರೀತಿ ತಮಿಳುನಾಡಿನಲ್ಲೂ ನಾವು ಮಾಡುತ್ತಿದ್ದೇವೆ. ನಾವು ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಭೇಟಿಗೆ ಆಹ್ವಾನಿಸುತ್ತೇವೆ. ತಮಿಳುನಾಡಿನ ಜನರ ಪರವಾಗಿ ನಾನು ಅವರನ್ನು ಆಹ್ವಾನಿಸುತ್ತೇನೆ ಎಂದು ಸ್ಟಾಲಿನ್​​ ಹೇಳಿದರು.

ಇದನ್ನೂ ಓದಿ:ಈ ಗ್ರಾಮದಲ್ಲಿದ್ದಾರೆ ಅಮೆರಿಕ, ಆಫ್ರಿಕಾ, ಜಪಾನ್ ಸಹೋದರರು..ಇವರಿಗೆ ಉಕ್ರೇನ್-ರಷ್ಯಾ ಯುದ್ಧದ್ದೇ ಚಿಂತೆ

ಸರ್ಕಾರಿ ಶಾಲೆಗಳ ಪ್ರಾಂಶುಪಾಲರನ್ನು ವಿದೇಶದಲ್ಲಿ ತರಬೇತಿಗೆ ಕಳುಹಿಸಲಾಗುತ್ತದೆ ಮತ್ತು ಶಿಕ್ಷಕರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಕೇಜ್ರಿವಾಲ್ ಸ್ಟಾಲಿನ್‌ಗೆ ತಿಳಿಸಿದರು. ದೆಹಲಿ ಸರ್ಕಾರವು ಮಕ್ಕಳನ್ನು ಮೌಖಿಕ ಕಲಿಕೆಯಿಂದ ವಿಮುಖಗೊಳಿಸುತ್ತಿದೆ ಎಂದು ಸ್ಟಾಲಿನ್‌ಗೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಇಂಗ್ಲಿಷ್ ವಿಷಯದಲ್ಲಿ ಸುಧಾರಣೆಯ ಕುರಿತು ಸ್ಟಾಲಿನ್ ಕೇಳಿದಾಗ, ಕೇಜ್ರಿವಾಲ್ ಅವರಿಗೆ ಭಾಷೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ಬ್ರಿಟಿಷ್ ಕೌನ್ಸಿಲ್ ಮತ್ತು ಯುಎಸ್ ರಾಯಭಾರ ಕಚೇರಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

Last Updated : Apr 1, 2022, 9:34 PM IST

For All Latest Updates

ABOUT THE AUTHOR

...view details