ಅಹಮದ್ನಗರ(ಮಹಾರಾಷ್ಟ್ರ): ಬಣ್ಣಗಳನ್ನು ಉಪಯೋಗಿಸಿ ಕಲಾತ್ಮಕ ಚಿತ್ರವನ್ನು ಬಿಡಿಸುವುದೇ ಚಿತ್ರಕಲೆ. ಒಂದು ಚಿತ್ರ ಸುಂದರವಾಗಿ ಮೂಡಿಬರಬೇಕೆಂದರೆ ಅದೆಷ್ಟೋ ತಾಸು ಅದಕ್ಕೆಂದೇ ಮೀಸಲಿಡಬೇಕಾಗುತ್ತದೆ. ಆದರೆ ಇಲ್ಲೊಬ್ಬರು ಸಾಯಿಬಾಬಾನ ಚಿಕ್ಕ ಭಾವಚಿತ್ರವನ್ನು ರಂಗೋಲಿಯಲ್ಲಿಯೇ ಬಿಡಿಸಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ..? ಇಲ್ಲಿದೆ ನೋಡಿ.
ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ಕೋಪರ್ಗಾಂವ್ನ ಮಸೂದಾ ದಾರುವಾಲಾ ಎಂಬವರು ಅತೀ ಕಡಿಮೆ ಸಮಯದಲ್ಲಿ ಸಾಯಿಬಾಬಾ ಭಾವಚಿತ್ರವನ್ನು ರಂಗೋಲಿಯಲ್ಲಿಯೇ ಬಿಡಿಸಿದ್ದಾರೆ. ಅತೀ ಚಿಕ್ಕದರಲ್ಲಿ ಮೂಡಿಬಂದ ಈ ಚಿತ್ರ ವಿಶ್ವದಾಖಲೆ ನಿರ್ಮಿಸಿದೆ. ಅಲ್ಲದೇ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ.