ಕರ್ನಾಟಕ

karnataka

ETV Bharat / bharat

ಸಚಿವ ಸ್ಥಾನಕ್ಕೆ ಸುವೇಂದು ಅಧಿಕಾರಿ ರಾಜೀನಾಮೆ; ವಿಧಾನಸಭೆ ಚುನಾವಣೆಗೂ ಮುನ್ನ ಆಪ್ತನಿಂದ ದೀದಿಗೆ ಶಾಕ್ - Mamata Banerje latest news

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಸುವೇಂದು ಅಧಿಕಾರಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಇಷ್ಟು ದಿನಗಳ ಊಹಾಪೋಹಗಳಿಗೆ ಇಂದು ತೆರೆ ಎಳೆದಿದ್ದಾರೆ..

Crack deepens in Mamata's TMC, Suvendu Adhikari resigns from Ministry
ಸುವೆಂಡು ಅಧಿಕಾರಿ

By

Published : Nov 27, 2020, 4:15 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಇಷ್ಟು ದಿನಗಳ ಕಾಲ ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಜನಪ್ರಿಯ ತೃಣಮೂಲ ಕಾಂಗ್ರೆಸ್ ಮುಖಂಡ ಮತ್ತು ಸಾರಿಗೆ ಸಚಿವ ಸುವೇಂದು ಅಧಿಕಾರಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಈ ಮೂಲಕ ಬಿಗ್​ ಶಾಕ್​ ನೀಡಿದ್ದಾರೆ.

ಇದನ್ನೂ ಓದಿ:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ಗೆ ಬೆಂಬಲ ಸೂಚಿಸಿದ ಬಿಮಲ್ ಗುರುಂಗ್

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರೂ ಆಗಿದ್ದ ಸುವೇಂದು ಆಗಾಗ್ಗೆ ಪಕ್ಷ ಹಾಗೂ ಪಕ್ಷ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಕಿಡಿ ಕಾರುತ್ತಲೇ ಇದ್ದರು. ಇತ್ತೀಚೆಗೆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಹಾಗಾಗಿ ಇವರ ಮನವೊಲಿಕೆಗೂ ಪ್ರಯತ್ನ ನಡೆಸಲಾಗಿತ್ತು. ಆದರೆ, ಅದು ಫಲಿಸಿರಲಿಲ್ಲ.

ರಾಜೀನಾಮೆ ಪ್ರತಿ

ಅಲ್ಲದೇ ಪ್ರತ್ಯೇಕ ಸಭೆ - ಸಮಾರಂಭ ಮಾಡುವುದರ ಮೂಲಕ ಸುವೇಂದು ಅಧಿಕಾರಿ ತಮ್ಮ ಮುನಿಸನ್ನು ಮುಂದುವರೆಸಿದ್ದರು. ಇದರಿಂದ ಟಿಎಂಸಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನಲಾಗುತ್ತಿತ್ತು. ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ:ಬಿಜೆಪಿ ನನ್ನನ್ನು ಬಂಧಿಸಿದ್ರೂ ಕೂಡ ಜೈಲಿನಲ್ಲಿದ್ದೇ ಚುನಾವಣೆ ಗೆಲ್ಲುತ್ತೇನೆ : ಮಮತಾ ಬ್ಯಾನರ್ಜಿ

ಟಿಎಂಸಿ ಸಂಸದ ಸಿಸಿರ್ ಅಧಿಕಾರಿಯ ಮಗನಾಗಿದ್ದ ಸುವೇಂದು 2006ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹೋರಾಟದ ಫಲವಾಗಿ ಮೊದಲ ಬಾರಿಗೆ ಜಯಗಳಿಸಿದ್ದರು. ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಇವರೂ ಕಾರಣೀಕರ್ತರಾಗಿದ್ದರು.

ABOUT THE AUTHOR

...view details