ಕರ್ನಾಟಕ

karnataka

ETV Bharat / bharat

ಕೋಕ್, ಪೆಪ್ಸಿಕೋ, ಪತಂಜಲಿ, ಬಿಸ್ಲೆರಿಗೆ ದಂಡ ವಿಧಿಸಿದ ಸಿಪಿಸಿಬಿ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಪರಿಸರ ಪರಿಹಾರದ ಶುಲ್ಕವಾಗಿ ಸಿಪಿಸಿಬಿಗೆ ದಂಡವನ್ನು ಪಾವತಿಸಲು ಈ ಕಂಪನಿಗಳಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ..

CPCB imposes fine on Coke, Pepsi, Bisleri and Patanjali
ಕೋಕ್, ಪೆಪ್ಸಿಕೋ, ಪತಂಜಲಿ, ಬಿಸ್ಲೆರಿಗೆ ದಂಡ

By

Published : Feb 10, 2021, 7:48 PM IST

ನವದೆಹಲಿ :ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸದಿರುವ ಹಿನ್ನೆಲೆ ಕೋಕ್, ಪೆಪ್ಸಿಕೋ, ಪತಂಜಲಿ ಮತ್ತು ಬಾಟಲಿ ನೀರು ತಯಾರಕ ಕಂಪನಿ ಬಿಸ್ಲೆರಿ ಸೇರಿದಂತೆ ವಿವಿಧ ಪಾನೀಯ ತಯಾರಕರಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದಂಡ ವಿಧಿಸಿದೆ.

2018ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ, ಈ ಘಟಕಗಳು ವಿಸ್ತರಿತ ಉತ್ಪಾದಕ ಹೊಣೆಗಾರಿಕೆಯನ್ನು (ಇಪಿಆರ್) ನಿಭಾಯಿಸಿಲ್ಲ ಎಂದು ಅಧ್ಯಕ್ಷ ಸಿಪಿಸಿಬಿ ಅಧ್ಯಕ್ಷ ಶಿವ್‌ದಾಸ್ ಮೀನಾ ಹೇಳಿದ್ದಾರೆ.

ಈ ನಿಯಮವನ್ನು ಉಲ್ಲಂಘಿಸಿರುವ ಹಿಂದೂಸ್ತಾನ್ ಕೋಕಾಕೋಲಾ ಪಾನೀಯಗಳಿಗೆ 50.66 ರೂ. ಕೋಟಿ, ಬಿಸ್ಲೆರಿ 10.75 ಕೋಟಿ ರೂ., ಪೆಪ್ಸಿಕೋ ಇಂಡಿಯಾ ಹೋಲ್ಡಿಂಗ್ಸ್ 8.7 ಕೋಟಿ ರೂ. ಮತ್ತು ಪತಂಜಲಿಗೆ 1 ಕೋಟಿ ರೂ. ದಂಡ ವಿಧಿಸಲಾಗಿದೆ.

ಓದಿ:ಟಿಎಂಸಿ ಸಂಸದೆ ಭಾಷಣ ಹೊಗಳಿದ ಖ್ಯಾತ ಅರ್ಥಶಾಸ್ತ್ರಜ್ಞ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಪರಿಸರ ಪರಿಹಾರದ ಶುಲ್ಕವಾಗಿ ಸಿಪಿಸಿಬಿಗೆ ದಂಡವನ್ನು ಪಾವತಿಸಲು ಈ ಕಂಪನಿಗಳಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಹಿಂದೂಸ್ತಾನ್ ಕೋಕಾಕೋಲಾ ಪಾನೀಯಗಳಿಗೆ ನೀಡಿರುವ ನೋಟಿಸ್‌ನಲ್ಲಿ ಘಟಕವು ಸಲ್ಲಿಸಿದ ಕ್ರಿಯಾ ಯೋಜನೆಯ ಪ್ರಕಾರ, ಒಟ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯು ವರ್ಷಕ್ಕೆ 1.05 ಲಕ್ಷ ಟನ್ ಎಂದು ಹೇಳಲಾಗಿದೆ.

ಆದರೆ, ಆಗಸ್ಟ್ 2019ರ ತ್ರೈಮಾಸಿಕ ಪ್ರಗತಿ ವರದಿಯ ಪ್ರಕಾರ ಸೆಪ್ಟೆಂಬರ್ 2020ರವರೆಗೆ ಕೇವಲ 23,422 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ.

ABOUT THE AUTHOR

...view details