ಕರ್ನಾಟಕ

karnataka

ETV Bharat / bharat

ಹಸುವಿನ ಕರು ಮೇಲೆ ಅತ್ಯಾಚಾರವೆಸಗಿದ ಕಾಮುಕ... ಪೊಲೀಸರಿಂದ ಬಂಧನ - ಕರುವಿನ ಮೇಲೆ ಅತ್ಯಾಚಾರ

ಕಾಮುಕ ಯುವಕನೋರ್ವ ಹಸುವಿನ ಕರು ಮೇಲೆ ಅಮಾನೀಯ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದ್ದು, ಆತನ ಬಂಧನ ಮಾಡಲಾಗಿದೆ.

COWS RAPED BY A MAN IN BHIWANI
COWS RAPED BY A MAN IN BHIWANI

By

Published : Jul 10, 2021, 6:41 PM IST

ಭಿವಾನಿ(ಹರಿಯಾಣ):ಜಿಲ್ಲೆಯಲ್ಲಿಅಮಾನವೀಯ ದುಷ್ಕೃತ್ಯವೊಂದು ನಡೆದಿರುವುದು ಬೆಳಕಿಗೆ ಬಂದಿದ್ದು, ಯುವಕನೋರ್ವ ಆರು ತಿಂಗಳ ಕರುವಿನ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಅದರ ಮಾಲೀಕ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ.

ಭಿವಾನಿ ಜಿಲ್ಲೆಯ ಹಲುವಾಸ್​ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ಆಕಳ ಕರುವಿನ ಮೇಲೆ ಕಾಮುಕ ಅತ್ಯಾಚಾರವೆಸಗಿದ್ದಾನೆ. ಇದರ ಬಗ್ಗೆ ಮಾಲೀಕನಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ವೇಳೆ ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾನೆ. ಕತೆಗೆ ಈ ಹಿಂದೆ ಕೂಡ ಹಂದಿ ಜೊತೆ ಈ ರೀತಿಯಾಗಿ ನಡೆದುಕೊಂಡಿದ್ದಾಗಿ ಹೇಳಿದ್ದಾನೆ. ಈತ ಮೂಲತಃ ಬಿಹಾರ ರಾಜ್ಯದ ಯುವಕನಾಗಿದ್ದು, ಹಳ್ಳಿಯ ಹೋಟೆಲ್​​ವೊಂದರಲ್ಲಿ ಕೆಲಸ ಮಾಡ್ತಿದ್ದನು. ಇದರ ಪಕ್ಕದಲ್ಲಿನ ಮನೆಯಲ್ಲಿ ಹಸು ಹಾಗೂ ಅದರ ಕರುವಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಎಸ್ಪಿ ವೀರೇಂದ್ರ ಸಿಂಗ್​, ಹಸುವಿನ ಮಾಲೀಕ ನೀಡಿರುವ ದೂರಿನ ಮೇರೆಗೆ ಬಿಹಾರ ಮೂಲದ ವ್ಯಕ್ತಿಯ ಬಂಧನ ಮಾಡಲಾಗಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಭಿವಾನಿ ಜಿಲ್ಲೆಯಲ್ಲಿ ಇಂತಹ ದುಷ್ಕೃತ್ಯ ನಡೆದಿರುವುದು ಇದೇ ಮೊದಲ ಸಲ ಎಂದು ತಿಳಿಸಿದ್ದಾರೆ.

ABOUT THE AUTHOR

...view details