ಕರ್ನಾಟಕ

karnataka

ETV Bharat / bharat

13 ಹಸು, ಚಿನ್ನ, ಕಾರು ಸೇರಿ ₹1.64 ಕೋಟಿ ಆಸ್ತಿಯ ಒಡೆಯ ಬಿಹಾರ ಸಿಎಂ - Bihar Chief Minister

2023ರ ಕೊನೆಯ ದಿನದಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಸಚಿವರು ತಮ್ಮ ಆಸ್ತಿ ವಿವರ ಬಹಿರಂಗಗೊಳಿಸಿದ್ದಾರೆ.

Nitish Kumar assets
ಬಿಹಾರ ಸಿಎಂ ನಿತೀಶ್ ಕುಮಾರ್

By PTI

Published : Jan 1, 2024, 2:15 PM IST

ಪಾಟ್ನಾ(ಬಿಹಾರ): ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 1.64 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಭಾನುವಾರ ಸಂಜೆ ಸಂಪುಟ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳನ್ನು ಪೋಸ್ಟ್​ ಮಾಡಲಾಗಿದೆ.

ನಿತೀಶ್ ಕುಮಾರ್ 22,552 ರೂ. ನಗದು ಮತ್ತು ವಿವಿಧ ಬ್ಯಾಂಕ್ ಖಾತೆಗಳಲ್ಲಿ 49,202 ರೂ. ಹೊಂದಿದ್ದಾರೆ. 11.32 ಲಕ್ಷ ಮೌಲ್ಯದ ಫೋರ್ಡ್ ಇಕೋಸ್ಪೋರ್ಟ್ ಕಾರು, 1.28 ಲಕ್ಷ ಮೌಲ್ಯದ ಎರಡು ಚಿನ್ನದ ಉಂಗುರಗಳು ಮತ್ತು ಬೆಳ್ಳಿಯ ಉಂಗುರ ಹಾಗೂ 1.45 ಲಕ್ಷ ಮೌಲ್ಯದ 13 ಹಸುಗಳು ಮತ್ತು 10 ಕರುಗಳು, ಟ್ರೆಡ್‌ಮಿಲ್, ವ್ಯಾಯಾಮ ಮಾಡುವ ಸೈಕಲ್ ಮತ್ತು ಮೈಕ್ರೋವೇವ್ ಓವನ್ ಸೇರಿದಂತೆ ಇತರೆ ಚರಾಸ್ತಿಗಳನ್ನು ಹೊಂದಿದ್ದಾರೆ.

ಸಿಎಂ ಬಳಿ 13 ಹಸು, 10 ಕರು: 2022ರಲ್ಲಿ ಮುಖ್ಯಮಂತ್ರಿ ಬಳಿ 13 ಹಸು, 9 ಕರುಗಳಿದ್ದವು. ಆದರೆ 2023ರಲ್ಲಿ ಹಸುಗಳ ಸಂಖ್ಯೆ ಒಂದರಿಂದ 12ಕ್ಕೆ ಇಳಿದಿದೆ. ಕರುಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಈ ವರ್ಷ ಮುಖ್ಯಮಂತ್ರಿ 13 ಹಸುಗಳು ಮತ್ತು 10 ಕರುಗಳನ್ನು ಹೊಂದಿದ್ದಾರೆ.

ದ್ವಾರಕಾದಲ್ಲಿ ಸಿಎಂ ಫ್ಲಾಟ್: ದೆಹಲಿಯ ಸಂಸದ್ ಬಿಹಾರ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯ ವಸತಿ ಕಟ್ಟಡ ದ್ವಾರಕಾದಲ್ಲಿದೆ. ಫ್ಲಾಟ್ ಸಂಖ್ಯೆ A 305, ಇದರ ವಿಸ್ತೀರ್ಣ 1000 ಚದರ ಅಡಿ. 2004 ರಲ್ಲಿ ನಿತೀಶ್ ಕುಮಾರ್ ಅವರು 13,78,330 ರೂ.ಗೆ ಇದನ್ನು ಖರೀದಿಸಿದ್ದರು. ಪ್ರಸ್ತುತ ಇದರ ಮಾರುಕಟ್ಟೆ ಮೌಲ್ಯ 1 ಕೋಟಿ 48 ಲಕ್ಷ ರೂ. ಇದೆ. ಸ್ಥಿರಾಸ್ತಿ ಕುರಿತು ಮಾತನಾಡುವುದಾದರೆ ನಿತೀಶ್ ಕುಮಾರ್ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ, ಕೃಷಿಗೆ ಯೋಗ್ಯವಲ್ಲದ ಭೂಮಿ ಕೂಡ ಇಲ್ಲ. ವಾಣಿಜ್ಯ ಕಟ್ಟಡವೂ ಇಲ್ಲ.

ನಿತೀಶ್ ಕುಮಾರ್ ಅವರ ಸರ್ಕಾರವು ಪ್ರತಿ ಕ್ಯಾಲೆಂಡರ್ ವರ್ಷದ ಕೊನೆಯ ದಿನದಂದು ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿದೆ. ಕಳೆದ ವರ್ಷ ನಿತೀಶ್ ಕುಮಾರ್ ಒಟ್ಟು ಆಸ್ತಿ 75.53 ಲಕ್ಷ ಎಂದು ಘೋಷಿಸಿದ್ದರು.

ಇದನ್ನೂ ಓದಿ:ಸರ್ಕಾರಿ ಆಸ್ತಿ ರಕ್ಷಣೆಗೆ ಅಡ್ವೊಕೇಟ್​ಗಳ ಪ್ರತ್ಯೇಕ ವಿಭಾಗ ರಚನೆ : ಡಿಸಿಎಂ ಡಿ ಕೆ ಶಿವಕುಮಾರ್

ಇನ್ನು ಆರ್‌ಜೆಡಿ ಕೋಟಾದ ಸಚಿವ ರಮಾನಂದ್ ಯಾದವ್ ಬಳಿ ರೈಫಲ್ ಮತ್ತು ರಿವಾಲ್ವರ್ ಇದೆ. 4 ಲಕ್ಷ ನಗದು ಹಾಗೂ 70 ಲಕ್ಷಕ್ಕೂ ಹೆಚ್ಚು ಠೇವಣಿ ಇದೆ. ಪ್ರಿಯಾ ಮಾರುತಿ 800, ಟೊಯೊಟಾ ಎಟಿಯೋಸ್ ಮತ್ತು ಸ್ಕಾರ್ಪಿಯೊ ಸ್ಕೂಟರ್ ಅನ್ನು ಸಹ ಹೊಂದಿದ್ದಾರೆ. 9.51 ಎಕರೆ ಕೃಷಿ ಭೂಮಿಯೂ ಇದೆ. ಹಾಗೆಯೇ, ಕೃಷಿ ಸಚಿವ ಕುಮಾರ್ ಸರ್ವಜೀತ್ ಬಳಿಯೂ ಶಸ್ತ್ರಾಸ್ತ್ರಗಳಿವೆ. ಆದರೆ, ಆಸ್ತಿ ವಿವರದಲ್ಲಿ ಯಾವ ಆಯುಧವನ್ನು ನಮೂದಿಸಿಲ್ಲ. 95,000 ನಗದು ಮತ್ತು 23 ಲಕ್ಷಕ್ಕೂ ಹೆಚ್ಚು ಠೇವಣಿ ಇದೆ. ಅವರು ಹೋಂಡಾ ಮತ್ತು ಎಕ್ಸ್‌ಯುವಿ ಹೊಂದಿದ್ದರೆ, ಅವರ ಪತ್ನಿ ಟ್ರ್ಯಾಕ್ಟರ್ ಹೊಂದಿದ್ದಾರೆ.

ABOUT THE AUTHOR

...view details