ರಾಜ್‌ಗಢ್ (ಮಧ್ಯಪ್ರದೇಶ): ರಾಜ್‌ಗಢ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯೊಳಗೆ ಹಸುವೊಂದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಐಸಿಯು ವಾರ್ಡ್‌ವರೆಗೂ ಹಸು ಹೋಗಿರುವುದು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ.
ಆಸ್ಪತ್ರೆ ಐಸಿಯು ವಾರ್ಡ್‌ನಲ್ಲಿ ಹಸು ಓಡಾಟ: ವಿಡಿಯೋ ವೈರಲ್ - ಐಸಿಯು ವಾರ್ಡ್‌ನಲ್ಲಿ ಹಸು ಓಡಾಟ
ಮಧ್ಯಪ್ರದೇಶ ರಾಜ್‌ಗಢ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯೊಳಗೆ ಹಸುವೊಂದು ಓಡಾಡುತ್ತಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಸ್ಪತ್ರೆ ಐಸಿಯುನಲ್ಲಿ ಹಸು ಓಡಾಟ
ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆ ಆಡಳಿತವು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದೆ. 'ನಾನು ಪರಿಸ್ಥಿತಿಯನ್ನು ಗಮನಿಸಿದ್ದೇನೆ. ವಾರ್ಡ್ ಬಾಯ್ ಮತ್ತು ಸೆಕ್ಯುರಿಟಿ ಗಾರ್ಡ್ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ನಮ್ಮ ಹಳೆಯ ಕೋವಿಡ್ ಐಸಿಯು ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ' ಎಂದು ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ರಾಜೇಂದ್ರ ಕಟಾರಿಯಾ ತಿಳಿಸಿದ್ದಾರೆ.
ಇದನ್ನೂ ಓದಿ:ಸತ್ಯೇಂದ್ರ ಜೈನ್ ವಿಡಿಯೋ ವೈರಲ್; ಎಎಪಿ ವಿರುದ್ಧ ಮುಗಿಬಿದ್ದ ಬಿಜೆಪಿ