ಪುಣೆ (ಮಹಾರಾಷ್ಟ್ರ): ಹಸುವೊಂದು ಎರಡು ತಲೆಯುಳ್ಳ ಕರುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಇಲ್ಲಿನ ಪಿಂಪ್ರಿ ಚಿಂಚವಾಡ್ನಲ್ಲಿ ನಡೆದಿದೆ. ಎರಡು ತಲೆ ಹೊಂದಿರುವ ಕರು ಅರೋಗ್ಯವಾಗಿದ್ದು, ಸುದ್ದಿ ತಿಳಿದು ಅಪರೂಪದ ಕರು ನೋಡಲು ಜನ ಆಗಮಿಸುತ್ತಿದ್ದಾರೆ.
ಅಪರೂಪದ ಘಟನೆ: ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು
ಕರುವಿನ ತಲೆ ಹಿಂಭಾಗದಲ್ಲಿ ಮತ್ತೊಂದು ತಲೆ ಇದ್ದು, ಆ ತಲೆಯಲ್ಲೂ ಎಲ್ಲಾ ಇಂದ್ರಿಯಗಳು ಆರೋಗ್ಯವಾಗಿದೆ. ಖಿಲ್ಲಾರಿ ತಳಿಯ ಹಸು ಈ ರೀತಿಯ ಕರುವಿಗೆ ಜನ್ಮ ನೀಡಿದೆ.
ಅಪರೂಪದ ಘಟನೆ: ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು
ಕರುವಿನ ತಲೆ ಹಿಂಭಾಗದಲ್ಲಿ ಮತ್ತೊಂದು ತಲೆ ಇದ್ದು, ಆ ತಲೆಯಲ್ಲೂ ಎಲ್ಲಾ ಇಂದ್ರಿಯಗಳು ಸರಿಯಾಗಿಯೇ ಇವೆ. ಖಿಲ್ಲಾರಿ ತಳಿಯ ಹಸು ಈ ರೀತಿಯ ಕರುವಿಗೆ ಜನ್ಮ ನೀಡಿದೆ. ಆದರೆ ಎರಡು ತಲೆ ಇರುವುದರಿಂದ ಕರುವಿಗೆ ತಲೆ ಭಾಗದಲ್ಲಿ ಭಾರ ಹೆಚ್ಚಿದ್ದು ಎದ್ದು ನಿಲ್ಲಲು ಕಷ್ಟಪಡುತ್ತಿದೆ. ಈ ಕರು ಎರಡೂ ತಲೆ, 4 ಕಿವಿ, 4 ಕಣ್ಣು 2 ಬಾಯಿ ಹೊಂದಿದೆ.
ಇದನ್ನೂ ಓದಿ:ಉರಿ ವಲಯದಲ್ಲಿ ಮುಂದುವರಿದ ಸೇನಾ ಕಾರ್ಯಾಚರಣೆ: ಇಂಟರ್ನೆಟ್ ಸೇವೆ ಪುನಾರಂಭ