ಮೆಹ್ಸಾನಾ (ಗುಜರಾತ್): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ವೇಳೆ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮೇಲೆ ಬಿಡಾಡಿ ದನವೊಂದು ದಾಳಿ ನಡೆಸಿದ ಘಟನೆ ಗುಜರಾತ್ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ. ದನ ಗುದ್ದಿದ ರಭಸಕ್ಕೆ ನಿತಿನ್ ಪಟೇಲ್ ಕೆಳಗಡೆ ಬಿದ್ದು ಕಾಲಿಗೆ ಪಟ್ಟಾಗಿದೆ.
ಇಲ್ಲಿನ ಕಾಡಿಯಲ್ಲಿ ಇಂದು ಮಾಜಿ ಡಿಸಿಎಂ ನಿತಿನ್ ಪಟೇಲ್ ಸೇರಿ ಅನೇಕರು ರಾಷ್ಟ್ರಧ್ವಜ ಹಿಡಿದು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕರಣಪುರ ತರಕಾರಿ ಮಾರುಕಟ್ಟೆ ಬಳಿ ಯಾತ್ರೆ ನಡೆಸುತ್ತಿದ್ದರು. ಈ ವೇಳೆ ಜನರ ಮಧ್ಯೆ ನುಗ್ಗಿ ಬಂದ ದನ ನೇರವಾಗಿ ನಿತಿನ್ ಪಟೇಲ್ ಅವರಿಗೆ ಗುದ್ದಿದೆ. ಇದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಇದರ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ.
ಇದನ್ನೂ ಓದಿ:ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಗೆ ಗುದ್ದಿದ ಬಿಡಾಡಿ ದನಗಳು - ಪುರಸಭೆ ವಿರುದ್ಧ ಕೇಸ್ ದಾಖಲಿಸಿದ ಯುವತಿ