ಮೇಡ್ಚಲ್(ತೆಲಂಗಾಣ) : ಹಸುವೊಂದು ನೋಡ ನೋಡುತ್ತಿದ್ದಂತೆ ವೃದ್ಧೆಯ ಮೇಲೆ ದಾಳಿ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.
WATCH : ಎಲ್ಲಿತ್ತೋ ಸಿಟ್ಟು ಆ ಹಸುವಿಗೆ.. ವೃದ್ಧೆಯನ್ನು ಮೇಲಕ್ಕೆತ್ತಿ ಕೆಳಗೆಸೆದ ಆಕಳು.. - ವೃದ್ಧೆಯನ್ನು ಮೇಲಕ್ಕೆತ್ತಿ ಕೆಳಗೆಸೆದ ಹಸು ಸುದ್ದಿ
ತೆಲಂಗಾಣದ ಮೇಡ್ಚಲ್ ಜಿಲ್ಲೆಯ ಜವಾಹರ್ ನಗರದ ಶಾಂತಿನಗರ ಕಾಲೋನಿಯಲ್ಲಿ ಹಸು ವೃದ್ಧೆಯ ಮೇಲೆ ದಾಳಿ ಮಾಡಿದೆ. ಪೊಚಮ್ಮ ಎಂಬ ವೃದ್ಧೆ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಸು ಒಮ್ಮೆಲೇ ದಾಳಿ ಮಾಡಿದೆ..
![WATCH : ಎಲ್ಲಿತ್ತೋ ಸಿಟ್ಟು ಆ ಹಸುವಿಗೆ.. ವೃದ್ಧೆಯನ್ನು ಮೇಲಕ್ಕೆತ್ತಿ ಕೆಳಗೆಸೆದ ಆಕಳು.. Cow Attack on Old Woman in Telangana](https://etvbharatimages.akamaized.net/etvbharat/prod-images/768-512-13436844-thumbnail-3x2-fsd.jpg)
ವೃದ್ಧೆಯನ್ನು ಮೇಲಕ್ಕೆತ್ತಿ ಕೆಳಗೆಸೆದ ಹಸು
ತೆಲಂಗಾಣದ ಮೇಡ್ಚಲ್ ಜಿಲ್ಲೆಯ ಜವಾಹರ್ ನಗರದ ಶಾಂತಿನಗರ ಕಾಲೋನಿಯಲ್ಲಿ ಹಸು ವೃದ್ಧೆಯ ಮೇಲೆ ದಾಳಿ ಮಾಡಿದೆ. ಪೊಚಮ್ಮ ಎಂಬ ವೃದ್ಧೆ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಸು ಒಮ್ಮೆಲೇ ದಾಳಿ ಮಾಡಿದೆ.
ಕೊಂಬುಗಳಿಂದ ಹೊಟ್ಟೆಗೆ ಇರಿದಿದ್ದು, ಮೇಲಕ್ಕೆತ್ತಿ ಕೆಳಗೆ ಎಸೆದಿದೆ. ಈ ವೇಳೆ, ವೃದ್ಧೆಗೆ ತೀವ್ರ ಗಾಯಗಳಾಗಿವೆ. ಕುಟುಂಬ ಸದಸ್ಯರು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೃದ್ಧೆಯನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated : Oct 23, 2021, 5:27 PM IST
TAGGED:
Cow Attack on Old Woman