ಕರ್ನಾಟಕ

karnataka

ETV Bharat / bharat

ಹಿರಿ ಜೀವಗಳ ನೆರವಿಗೆ ಬಂದ ದೆಹಲಿ ಪೊಲೀಸ್​​ : ‘ಕೋವಿವ್ಯಾನ್’​​ ಸಹಾಯವಾಣಿ ಒಪನ್‌

ಹಿರಿಯ ನಾಗರಿಕರಿಗೆ ಹತ್ತಿರದ ಲಸಿಕಾ ಕೇಂದ್ರಕ್ಕೆ ತಲುಪಿಸುವುದಲ್ಲದೆ ಅಲ್ಲಿ ಕೋವಿನ್ ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್​ ಮೂಲಕ ನೋಂದಣಿ ಮಾಡಿಕೊಳ್ಳಲು ಸಹ ನೆರವಾಗುತ್ತಿದ್ದಾರೆ..

covivan-delhi-polices-unique-move-to-help-senior-citizens
‘ಕೋವಿವ್ಯಾನ್’​​ ಸಹಾಯವಾಣಿ ತೆರೆದ ಇಲಾಖೆ

By

Published : May 9, 2021, 5:28 PM IST

ನವದೆಹಲಿ: ಕೋವಿಡ್ ಬಿಕ್ಕಟ್ಟಿನಲ್ಲಿ ದೆಹಲಿ ಪೊಲೀಸರು ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ಕೋವಿವ್ಯಾನ್ ಹೆಸರಿನ ಸಹಾಯವಾಣಿ ಆರಂಭಿಸಿ ಹಿರಿಯ ನಾಗರಿಕರ ನೆರವಿಗೆ ಮುಂದಾಗಿದ್ದಾರೆ.

ಇಲ್ಲಿನ ಗ್ರೇಟರ್ ಕೈಲಾಶ್​-1 ಪೊಲೀಸ್ ಠಾಣೆಯು ಇಂತಹದೊಂದು ವಿಭಿನ್ನ ಕಾರ್ಯಕ್ಕೆ ಮುಂದಾಗಿದೆ. ಲಾಕ್​ಡೌನ್ ವಿಧಿಸಿರುವುದರಿಂದ ಹಿರಿಯ ನಾಗರಿಕರಿಗೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ಈ ಕೋವಿವ್ಯಾನ್ ಸೇವೆ ಆರಂಭಿಸಲಾಗಿದೆ.

ಹಿರಿಯ ನಾಗರಿಕರಿಗೆ ಅಗತ್ಯವಾದ ವಸ್ತುಗಳು, ವೈದ್ಯಕೀಯ ಸೌಲಭ್ಯ ಸೇರಿದಂತೆ ಹಲವು ಅಗತ್ಯ ವಸ್ತು ಪೂರೈಕೆಗಾಗಿ ಈ ಸಹಾಯವಾಣಿ ತೆರೆಯಲಾಗಿದೆ.

ಈ ಸಹಾಯವಾಣಿಯ ಮೂಲಕ ಕರೆ ಮಾಡಿದ ತಕ್ಷಣ ಸಂಬಂಧಪಟ್ಟ ಅಧಿಕಾರಿ ವ್ಯಾನ್​​ನಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಯೊಂದಿಗೆ ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿ ಅಗತ್ಯ ವಸ್ತು ತಲುಪಿಸಲು ಸಹಾಯ ಮಾಡಲಿದ್ದಾರೆ.

ಇದಿಷ್ಟೇ ಅಲ್ಲ, ಹಿರಿಯ ನಾಗರಿಕರಿಗೆ ಹತ್ತಿರದ ಲಸಿಕಾ ಕೇಂದ್ರಕ್ಕೆ ತಲುಪಿಸುವುದಲ್ಲದೆ ಅಲ್ಲಿ ಕೋವಿನ್ ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್​ ಮೂಲಕ ನೋಂದಣಿ ಮಾಡಿಕೊಳ್ಳಲು ಸಹ ನೆರವಾಗುತ್ತಿದ್ದಾರೆ.

ABOUT THE AUTHOR

...view details