ಕರ್ನಾಟಕ

karnataka

ETV Bharat / bharat

ದೇಶದಲ್ಲಿ 41,831 ಜನರಿಗೆ ಕೊರೊನಾ ದೃಢ; ಚೇತರಿಕೆ ಪ್ರಮಾಣ ಶೇ 97.36 - ಆರೋಗ್ಯ ಇಲಾಖೆ ಸುದ್ದಿ

ಕೋವಿಡ್​ ಪ್ರಕರಣಗಳ ಸಂಖ್ಯೆ ಸಂಪೂರ್ಣವಾಗಿ ಇಳಿಮುಖವಾಗುವ ಲಕ್ಷಣಗಳು ಕಾಣುತ್ತಿಲ್ಲ. ದಿನೇ ದಿನೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯುವ ಹಾಗಿಲ್ಲ.

COVID
ಕೋವಿಡ್​ ಪ್ರಕರಣ

By

Published : Aug 1, 2021, 9:57 AM IST

ನವದೆಹಲಿ:ದೇಶಾದ್ಯಂತ ಹೊಸದಾಗಿ 41,831 ಜನರಿಗೆ ಕೋವಿಡ್​ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 31,655,824‬ಕ್ಕೆ ಏರಿದೆ.

ಕಳೆದ 24 ಗಂಟೆಗಳಲ್ಲಿ 39,258 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ 30,820,521‬ ಜನರು ಗುಣಮುಖರಾಗಿದ್ದಾರೆ. ಇನ್ನು ಗುಣಮುಖರ ಪ್ರಮಾಣ ಶೇ. 97.36ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 541 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 424,351ಕ್ಕೆ ಏರಿದೆ. ದೇಶದಲ್ಲಿ ಈವರೆಗೆ 47,02,98,596 ಜನರಿಗೆ ಕೋವಿಡ್​ ಡೋಸ್​ ನೀಡಲಾಗಿದೆ.

ಇದನ್ನೂ ಓದಿ: Happy Friendship Day: ರಕ್ತ ಸಂಬಂಧ ಮೀರಿದ ಪವಿತ್ರ ಬಂಧವೇ ಸ್ನೇಹ

ಜುಲೈ 31 ರಂದು17,89,472ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆವರೆಗೆ 46,82,16,510 ಜನರಿಗೆ ತಪಾಸಣೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.

ABOUT THE AUTHOR

...view details