ನವದೆಹಲಿ: ದೇಶದಲ್ಲಿ ನಿನ್ನೆ ಒಂದೇ ದಿನ 45,083 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, 460 ಸೋಂಕಿತರು ಬಲಿಯಾಗಿದ್ದಾರೆ. 35,480 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 3,68,558 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
India Covid: ಒಂದೇ ದಿನ 45,083 ಮಂದಿಗೆ ಸೋಂಕು; 460 ಮಂದಿ ಬಲಿ - ಕೊರೊನಾ
ದೇಶದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,26,95,030ಕ್ಕೆ ಹಾಗೂ ಮೃತರ ಸಂಖ್ಯೆ 4,37,830ಕ್ಕೆ ಏರಿಕೆಯಾಗಿದೆ. ಚೇತರಿಕೆಯ ದರ ಶೇ.97.53 ರಷ್ಟಾಗಿದೆ.
ಒಂದೇ ದಿನ 45,083 ಮಂದಿಗೆ ಸೋಂಕು..460 ಮಂದಿ ಬಲಿ
ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 3,26,95,030 ಹಾಗೂ ಮೃತರ ಸಂಖ್ಯೆ 4,37,830 ಬಂದು ತಲುಪಿದೆ. ಚೇತರಿಕೆಯ ದರ ಶೇ.97.53 ರಷ್ಟಿದ್ದು, ಈವರೆಗೆ 51,86,42,929 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ನಿನ್ನೆ ಒಂದೇ ದಿನ 17,55,357 ಕೊರೊನಾ ಟೆಸ್ಟ್‌ಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಕೇಸ್‌ಗಳು ನೆರೆಯ ರಾಜ್ಯದಲ್ಲಿ ದಾಖಲಾಗಿವೆ. ಕಳೆದ ಮೂರು ದಿನಗಳಿಂದ ಕೇರಳದಲ್ಲಿ ಸತತವಾಗಿ 30 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.