ಹೈದರಾಬಾದ್: ಅಂತಾರಾಷ್ಟ್ರೀಯ ಮಹಿಳಾ ದಿನದಂದು ಯುನಿಸೆಫ್ 'ಬಾಲ್ಯ ವಿವಾಹ'ದ ಕುರಿತು ತನ್ನ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದ್ದು, ಕಳೆದ ದಶಕದಲ್ಲಿ ಸುಮಾರು 25 ದಶಲಕ್ಷ ಬಾಲ್ಯ ವಿವಾಹಗಳು ನಡೆದಿದೆ ಎಂಬ ಅಘಾತಕಾರಿ ಸುದ್ದಿ ಹೊರತಂದಿದೆ.
ವರದಿಯ ಪ್ರಮುಖ ಅಂಶಗಳು ಹೀಗಿವೆ:
- ಇತ್ತೀಚಿನ ವರ್ಷಗಳಲ್ಲಿ ಬಾಲ್ಯ ವಿವಾಹದ ಕುರಿತು ಹಲವಾರು ದೇಶಗಳಲ್ಲಿ ಗಮನಾರ್ಹವಾದ ಮುನ್ನೆಚ್ಚರಿಕೆಯನ್ನು ಕೈಗೊಂಡ ಹೊರತಾಗಿಯೂ, ಮುಂದಿನ ದಶಕದಲ್ಲಿ ಸುಮಾರು 100 ದಶಲಕ್ಷ ಹೆಣ್ಣು ಮಕ್ಕಳು ಬಾಲ್ಯ ವಿವಾಹದ ಅಪಾಯಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದೆ.
- ಕಳೆದ 10 ವರ್ಷಗಳಲ್ಲಿ ಜಾಗತಿಕವಾಗಿ ಬಾಲ್ಯ ವಿವಾಹದ ಪ್ರಮಾಣವು ಶೇ 15 ರಷ್ಟು ಕಡಿಮೆಯಾಗಿದೆ. ಆದರೆ, ಏಕಾಏಕಿ ಲಗ್ಗೆಯಿಟ್ಟಿರುವ ಕೋವಿಡ್ ಸಾಂಕ್ರಾಮಿಕದಿಂದಾಗಿ ಮುಂಬರಲಿರುವ ದಶಕದಲ್ಲಿ ವಿವಾಹವು ಏರುಗತಿಯಲ್ಲಿ ಸಾಗಲಿದೆ ಎಂದು ತಿಳಿಸಿದೆ.
- ಪ್ರಸ್ತುತ ಕೋವಿಡ್ ಪಿಡುಗಿನ ಕಾರಣದಿಂದಾಗಿ ಸುಮಾರು 10 ಮಿಲಿಯನ್ಗೂ ಹೆಚ್ಚಿನ ಬಾಲಕಿಯರು ಸಮಸ್ಯೆಗೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದೆ.
- ವಿಶ್ವಾದ್ಯಂತ ಅಂದಾಜು 650 ಮಿಲಿಯನ್ ಹುಡುಗಿಯರು ಮತ್ತು ಮಹಿಳೆಯರು ಬಾಲ್ಯದಲ್ಲಿಯೇ ವಿವಾಹವಾಗಿದ್ದಾರೆ. ಅದರಲ್ಲಿ, ಅರ್ಧದಷ್ಟು ಬಾಂಗ್ಲಾದೇಶ, ಬ್ರೆಜಿಲ್, ಇಥಿಯೋಪಿಯಾ, ಭಾರತ ಮತ್ತು ನೈಜೀರಿಯಾದಲ್ಲಿ ವಿವಾಹ ಜರುಗಿವೆ ಎಂದು ವರದಿ ನೀಡಿದೆ.
- ಕೋವಿಡ್-19 ರ ಪರಿಣಾಮಗಳನ್ನು ನಿವಾರಿಸಲು ಹಾಗೂ 2030 ರ ವೇಳೆಗೆ ಬಾಲ್ಯ ವಿವಾಹದಂತಹ ಪಿಡುಗನ್ನು ನಿವಾರಿಸಲು, ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ನಿಗದಿಪಡಿಸಿದ ಗುರಿ - ಪ್ರಗತಿಯನ್ನು ಗಮನಾರ್ಹವಾಗಿ ವೇಗಗೊಳಿಸಬೇಕು ಎಂದಿದೆ.
ಕೋವಿಡ್-19 ರ ಪಿಡುಗಿನಿಂದ ಸಂಭವಿಸಿರುವ ತೊಡಕುಗಳು..
ಉತ್ತಮ ಶಿಕ್ಷಣಕ್ಕೆ ಅಡ್ಡಿ
- ಶಾಲಾ ಮುಚ್ಚುವಿಕೆಯಿಂದಾಗಿ ಬಾಲ್ಯ ವಿವಾಹದ ಪ್ರಮಾಣವನ್ನು ವರ್ಷಕ್ಕೆ ಶೇ.25 ರಷ್ಟು ಹೆಚ್ಚಾಗಿದೆ.
- ಶಾಲೆಯನ್ನು ಮುಚ್ಚಿರುವುದರಿಂದಾಗಿ ಪ್ರತಿ ಮಗುವಿನ ಕಲಿಕಾ ಮಟ್ಟ ಶೇ.0.6 ರಷ್ಟು ಇಳಿಮುಖವಾಗಿದೆ.
- ಶಾಲೆ ಮುಚ್ಚಿದ ನಂತರ ಶೇ.2 ರಷ್ಟು ಹೆಣ್ಣು ಮಕ್ಕಳು ಮರಳಿ ಹಿಂತಿರುಗುವುದಿಲ್ಲ. ಪರಿಣಾಮ ಇವರು ತಮ್ಮ ಬಾಲ್ಯದುದ್ದಕ್ಕೂ ವಿವಾಹದ ಅಪಾಯವನ್ನು ಎದುರಿಸುತ್ತಾರೆ.
ಗರ್ಭಧಾರಣೆ:ಶಾಲೆಯನ್ನು ಮುಚ್ಚುತ್ತಿರುವುದು ಹಾಗೂ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವುದರ ಪರಿಣಾಮ ಬಾಲ್ಯ ವಿವಾಹ ಏರುಗತಿಯಲ್ಲಿ ಸಾಗುತ್ತಿದೆ. ಇದರಿಂದ ಗರ್ಭಧಾರಣೆಯಂತಹ ಸಮಸ್ಯೆ ಉದ್ಭವಿಸುತ್ತಿದೆ.
ಪೋಷಕರ ಸಾವು: ಹೆತ್ತವರ ಮರಣ ಪ್ರಮಾಣವು ಬಾಲ್ಯವಿವಾಹದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೆಲವೊಮ್ಮೆ ಮಾತ್ರ ಸಾವಿನ ಪ್ರಭಾವ ಬಿದ್ದಿರುವ ಉದಾಹರಣೆಗಳಿವೆ.
ಆರ್ಥಿಕತೆಯ ಆಘಾತಗಳು: ವಧುವಿನ ಬೆಲೆ ಸಾಮಾನ್ಯವಾಗಿರುವ ದೇಶಗಳಲ್ಲಿ ಹಾಗೂ ಆದಾಯ ಕಡಿಮೆಯಿರುವ ಕುಟುಂಬಗಳಲ್ಲಿ ವಿವಾಹದ ಸಂಭವನೀಯತೆ ಸುಮಾರು 3% ರಷ್ಟು ಹೆಚ್ಚಿದೆ. ಅದೇ ರೀತಿ, ವರದಕ್ಷಿಣೆ ಸಾಮಾನ್ಯವಾಗಿರುವ ದೇಶಗಳಲ್ಲಿ, ಇದರ ಪರಿಣಾಮವು 4% ರಷ್ಟು ಕಡಿಮೆಯಾಗುವುದರಿಂದ ಅಪಾಯದ ಮಟ್ಟ ಶೇ 1 ರಷ್ಟು ಇದೆ ಎಂಬುದು ತಿಳಿದುಬಂದಿದೆ.
ಕಾರ್ಯಕ್ರಮಗಳು ಮತ್ತು ಸೇವೆಗಳಿಗೆ ಉಂಟಾಗುವ ಅಡೆತಡೆಗಳು: ಬಾಲ್ಯವಿವಾಹವನ್ನು ತಡೆಗಟ್ಟುವ ಉದ್ದೇಶದಿಂದ ವಿವಾಹ ಕಾರ್ಯಕ್ರಮವನ್ನು ವಿಳಂಬ ಮಾಡಿದರೆ, ಅದರಿಂದ ಒಂದು ವರ್ಷದ ತನ್ನ ಆದಾಯವನ್ನೇ ನಿಗದಿತ ಕಾರ್ಯಕ್ರಮಗಳು ಕಳೆದುಕೊಳ್ಳುತ್ತವೆ ಎಂದು ಅಂದಾಜಿಸಲಾಗಿದೆ. ಪರಿಣಾಮಕಾರಿಯಾದ ಕಾರ್ಯಕ್ರಮವನ್ನು ಸಜ್ಜುಗೊಳಿಸಿದರೆ ಮಾತ್ರ ಅಪಾಯದ ಸನ್ನಿವೇಶವನ್ನು ಶೇ. 33 ರಷ್ಟು ಕಡಿಮೆ ಮಾಡಬಹುದು ಎನ್ನಲಾಗಿದೆ.
- ಕೋವಿಡ್-19 ಪಿಡುಗಿನ ಕಾರಣದಿಂದಾಗಿ ಹೆಚ್ಚಿನ ಬಾಲ್ಯ ವಿವಾಹಗಳು ಸದ್ಯದಲ್ಲಿಯೇ ವಯಸ್ಸಾದ ಹುಡುಗಿಯರಲ್ಲಿಯೂ ಸಂಭವಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
- ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮವು ಕನಿಷ್ಠ ಮುಂದಿನ ದಶಕದಲ್ಲಿಯಾದರೂ ಪ್ರಭಾವ ಬೀರುವ ಸಾಧ್ಯತೆಯಿದೆ. ಆದರೆ, ಈಗ ಚಿಕ್ಕ ವಯಸ್ಸಿನ ಹುಡುಗಿಯರಿಗೆ ಬಾಲ್ಯ ವಿವಾಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.
- ಸಾಮಾಜಿಕ ವಿವಾಹ ಕಾರ್ಯಕ್ರಮಗಳು ಮತ್ತು ಬಡತನ ನಿವಾರಣಾ ಕಾರ್ಯತಂತ್ರಗಳು ಬಾಲ್ಯವಿವಾಹವನ್ನು ತಡೆಗಟ್ಟಲು ಮತ್ತು ಹೆಣ್ಣುಮಕ್ಕಳನ್ನು ಹೆಚ್ಚು ದುರ್ಬಲಗೊಳಿಸುವ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಸುಧಾರಿಸುವ ಕೇಂದ್ರಗಳಾಗಿವೆ.
- ಷರತ್ತುಬದ್ಧ ನಗದು ವರ್ಗಾವಣೆಯು ಬಾಲಕಿಯರ ಧಾರಣ ಶಕ್ತಿ ಹಾಗೂ ಶಾಲೆಯಲ್ಲಿನ ಅವರ ಶೈಕ್ಷಣಿಕ ಪ್ರಗತಿಯನ್ನು ಸುಧಾರಿಸಲು ಮತ್ತು ಬಾಲ್ಯ ವಿವಾಹವನ್ನು ವಿಳಂಬಗೊಳಿಸಲು ಅತ್ಯಂತ ಯಶಸ್ವಿ ಹಸ್ತಕ್ಷೇಪವಾಗಿದೆ ಎಂದು ಪುರಾವೆಗಳು ಸೂಚಿಸುತ್ತವೆ.
- ವಿಳಂಬವಾದ ವಿವಾಹದೊಂದಿಗೆ ಷರತ್ತುಬದ್ಧ ನಗದು ವರ್ಗಾವಣೆಗಳು ಬಾಲ್ಯ ವಿವಾಹವನ್ನು ತಡೆಗಟ್ಟುವಲ್ಲಿ ಶೇಕಡಾ 50 ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿವೆ.
ಮಕ್ಕಳ ಶಿಕ್ಷಣ ಲಭ್ಯತೆಯ ಸುರಕ್ಷತಾ ಕ್ರಮಗಳು..
- ಸಾಂಕ್ರಾಮಿಕ ರೋಗದ ಆರ್ಥಿಕ ಪ್ರಭಾವದಿಂದಾಗಿ 11 ಮಿಲಿಯನ್ ಬಾಲಕಿಯರು ಮತ್ತು ಯುವತಿಯರು ಸೇರಿದಂತೆ ಸುಮಾರು 24 ಮಿಲಿಯನ್ ಮಕ್ಕಳು ಮತ್ತು ಹದಿಹರೆಯದವರು ಶಾಲೆಯಿಂದ ಹೊರಗುಳಿಯಬಹುದು ಎಂದು ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಅಂದಾಜಿಸಿದೆ.
- ಶಾಲೆಯನ್ನು ಮುಚ್ಚುವುದು ಅಥವಾ ಅರ್ಧಕ್ಕೆ ಕೈಬಿಡುವುದು ಹದಿಹರೆಯದ ಮಕ್ಕಳಲ್ಲಿ ವಿವಾಹದ ಪ್ರಮಾಣ ಹಾಗೂ ಗರ್ಭಧಾರಣೆಯ ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ, ಶಾಲೆಗಳು ಮುಚ್ಚಲ್ಪಟ್ಟಾಗ ಕಲಿಕೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಗುರುತಿಸುವುದು ಬಹಳ ಮುಖ್ಯ ಮತ್ತು ಶಾಲೆಗಳು ಮತ್ತೆ ತೆರೆದಾಗ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಬಡ ದೇಶಗಳಲ್ಲಿನ ಮಕ್ಕಳಿಗೆ ಮತ್ತು ವಂಚಿತ ಸಮುದಾಯಗಳ ಕಡೆ ಗಮನಹರಿಸುವಂತೆ ಇದು ಎಚ್ಚರಿಸಿದೆ.
ಬಾಲಕಿಯರ ಆರೋಗ್ಯ ಮತ್ತು ಸಾಮಾಜಿಕ ಸೇವೆಗಳಿಗೆ ಧನಸಹಾಯದ ಲಭ್ಯತೆಯ ಕುರಿತ ಭರವಸೆ ಕ್ರಮಗಳು..
- ಕೋವಿಡ್-19 ಸೋಂಕು ದೇಶದ ಆರೋಗ್ಯ ವ್ಯವಸ್ಥೆಗಳನ್ನು ಅಧಃಪತನದತ್ತ ಕೊಂಡೊಯ್ಯುವುದರಿಂದ ಮತ್ತು ದೇಶಗಳು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಳಸುವ ದಿನನಿತ್ಯದ ಆರೋಗ್ಯ ಸೇವೆಗಳನ್ನು ಅನಿವಾರ್ಯವಾಗಿ ಬೇರೆಡೆಗೆ ತಿರುಗಿಸುವುದರಿಂದ, ಹದಿಹರೆಯದ ಹುಡುಗಿಯರು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮಾಹಿತಿ ಮತ್ತು ಸೇವೆಗಳ ಕುರಿತು ಮಾಹಿತಿ ಪಡೆಯಲು ಮುಂದಾಗುವ ಸಾಧ್ಯತೆ ತೀರಾ ಕಡಿಮೆಯಿರುತ್ತದೆ. ಅಲ್ಲದೇ, ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಹದಿಹರೆಯದ ಹುಡುಗಿಯರು ಅನಪೇಕ್ಷಿತ ಗರ್ಭಧಾರಣೆಗೆ ಒಳಗಾಗುವುದರಿಂದ ಮದುವೆಯಾಗುವ ಒತ್ತಡಕ್ಕೆ ಸಿಲುಕಲಿದ್ದಾರೆ.
- ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ರಕ್ಷಣೆ ಮತ್ತು ಆರೈಕೆ ಕ್ರಮಗಳು ಚಲನೆ ಮೇಲಿನ ನಿರ್ಬಂಧವನ್ನು ಕಡಿಮೆ ಮಾಡಿದರೆ, ಅನಾರೋಗ್ಯದ ಸಂಬಂಧಿಕರ ಆರೈಕೆಗಾಗಿ ಹೆಚ್ಚಿನ ಜವಾಬ್ದಾರಿಗಳನ್ನು ಕೈಗೊಳ್ಳುವುದು ಸೋಂಕಿನ ಭಯವನ್ನು ಮತ್ತಷ್ಟು ಕಡಿಮೆ ಮಾಡಬಹುದು.