ಕರ್ನಾಟಕ

karnataka

ETV Bharat / bharat

ಕೋವಿಡ್​ ಲಸಿಕೆಗಳು ಬಂಜೆತನಕ್ಕೆ ಕಾರಣವಾ?: ಆರೋಗ್ಯ ಇಲಾಖೆ ಸ್ಪಷ್ಟನೆ ಹೀಗಿದೆ

ಕೋವಿಡ್​ ವ್ಯಾಕ್ಸಿನೇಷನ್ ನಂತರ ಬಂಜೆತನದಂತಹ ಯಾವುದೇ ಗಂಭೀರ ಸಮಸ್ಯೆ ಎದುರಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

infertility
ಬಂಜೆತನ

By

Published : Jun 26, 2021, 11:34 AM IST

ನವದೆಹಲಿ:ಕೊರೊನಾ ಲಸಿಕೆಗಳು ಬಂಜೆತನಕ್ಕೆ ಕಾರಣವಾಗುತ್ತವೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಯಾವುದೇ ವ್ಯಾಕ್ಸಿನ್​ಗಳು ಇಂತಹ ಅಡ್ಡಪರಿಣಾಮಗಳನ್ನುಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತ ಮತ್ತು ಇತರ ದೇಶಗಳಲ್ಲಿ ಪೋಲಿಯೋ ಲಸಿಕೆ ಬಂದಾಗ ಕೂಡ ಹೀಗೆಯೇ ವದಂತಿ ಹರಡಿತ್ತು. ಪೋಲಿಯೋ ಲಸಿಕೆ ಪಡೆಯುವ ಮಕ್ಕಳು ಭವಿಷ್ಯದಲ್ಲಿ ಬಂಜೆತನವನ್ನು ಎದುರಿಸಬೇಕಾಗುತ್ತದೆ ಎಂಬ ತಪ್ಪು ಮಾಹಿತಿ ಪಸರಿಸಿತ್ತು. ಈಗ ಕೋವಿಡ್ ವ್ಯಾಕ್ಸಿನ್​ ವಿಚಾರದಲ್ಲೂ ಇದೇ ಆಗುತ್ತಿದೆ. ಇವೆಲ್ಲಾ ಕೆಲಸಗಳನ್ನು ಲಸಿಕಾ ವಿರೋಧಿ ಗುಂಪುಗಳು ಮಾಡುತ್ತಿವೆ ಎಂದು ಭಾರತದಲ್ಲಿ ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಎನ್.ಕೆ. ಅರೋರಾ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದ ವ್ಯಾಕ್ಸಿನ್​ ಪಡೆದ ಇಂಡೋನೇಷ್ಯಾ ವೈದ್ಯರೇ ಈಗ ಬಲಿಪಶುಗಳು..!

ಎಲ್ಲಾ ಲಸಿಕೆಗಳನ್ನು ವೈಜ್ಞಾನಿಕ ಸಂಶೋಧನೆಗಳ ಮೂಲಕವೇ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದನ್ನು ಮೊದಲು ಎಲ್ಲರೂ ತಿಳಿದುಕೊಳ್ಳಬೇಕು. ಹಾಗೆಯೇ ಲಸಿಕೆ ಪಡೆದ ಹಲವರಿಗೆ ಜ್ವರ, ತಲೆನೋವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ. ಕೆಲವರಲ್ಲಿ ಇಲ್ಲ. ಅಡ್ಡಪರಿಣಾಮವಾಗಿಲ್ಲ ಎಂದ ಮಾತ್ರಕ್ಕೆ ಲಸಿಕೆ ಪರಿಣಾಮಕಾರಿಯೆಂದಲ್ಲ. ಅಲ್ಲದೇ ವ್ಯಾಕ್ಸಿನೇಷನ್ ನಂತರ ಯಾವುದೇ ಗಂಭೀರ ಸಮಸ್ಯೆಗಳು ಉಂಟಾಗುವುದಿಲ್ಲ ಎಂದೂ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಶೀಘ್ರದಲ್ಲೇ ಕನಿಷ್ಠ ಕೋವಿಡ್ -19 ಲಸಿಕೆಗಳು ಲಭ್ಯವಾಗಲಿದ್ದು, ಆಗ ದಿನಕ್ಕೆ ಒಂದು ಕೋಟಿಯಂತೆ ತಿಂಗಳಿಗೆ 30-35 ಕೋಟಿ ಡೋಸ್​ ಲಸಿಕೆ ನೀಡಲು ಸಾಧ್ಯವಾಗುತ್ತದೆ ಎಂದು ಅರೋರಾ ಹೇಳಿದರು.

ABOUT THE AUTHOR

...view details