ಕರ್ನಾಟಕ

karnataka

ETV Bharat / bharat

Pfizer vaccine: 12 ವರ್ಷ ಮೇಲ್ಪಟ್ಟವರಿಗೆ ನಮ್ಮ ಲಸಿಕೆ ಸೂಕ್ತ- ಕೇಂದ್ರಕ್ಕೆ ಫೈಜರ್​​ ಮಾಹಿತಿ

ಕೋವಿಡ್‌-19 ನಿರ್ಮೂಲನೆಗೆ ಅಮೆರಿಕದ ಫೈಜರ್ ಹಾಗೂ ಬಯೊಎನ್​ಟೆಕ್‌ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯು 12 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಸೂಕ್ತ ಎಂದು ಭಾರತ ಸರ್ಕಾರಕ್ಕೆ ಫೈಜರ್ ತಿಳಿಸಿದೆ.

Pfizer
ಫೈಜರ್

By

Published : May 27, 2021, 7:11 AM IST

Updated : May 27, 2021, 7:21 AM IST

ನವದೆಹಲಿ: 12 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ತಮ್ಮ ಕೋವಿಡ್​ ಲಸಿಕೆ ಸೂಕ್ತವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಫೈಜರ್ ಮಾಹಿತಿ ನೀಡಿದೆ.

ಅಮೆರಿಕದ ಫೈಜರ್ ಹಾಗೂ ಬಯೊಎನ್​ಟೆಕ್‌ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬಹುದು. ಕೊರೊನಾ ತಡೆಗಟ್ಟುವಲ್ಲಿ ನಮ್ಮ ಲಸಿಕೆ ಶೇಕಡಾ 91ಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ತಮ್ಮ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು, ಈ ಲಸಿಕೆ ವಯಸ್ಕರಿಗಿಂತಲೂ ಮಕ್ಕಳ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರಲಿದೆ ಎಂಬುದನ್ನು ತೋರಿಸಿದೆ. ಹೀಗಾಗಿ 12 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ನಮ್ಮ ಲಸಿಕೆ ಸೂಕ್ತ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:ಭಾರತದಲ್ಲಿ ಹೊಸ ಬಗೆ ಕೋವಿಡ್ ಅಟ್ಟಹಾಸ: ಅಮೆರಿಕದಲ್ಲಿ 12-15 ವಯಸ್ಸಿನ ಮಕ್ಕಳಿಗೂ ಲಸಿಕೆ

ಈಗಾಗಲೇ ಅಮೆರಿಕದಲ್ಲಿ 12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್​​ ಲಸಿಕೆ ನೀಡಲಾಗುತ್ತಿದೆ. ಭಾರತಕ್ಕೆ ಲಸಿಕೆ ತರಲು ಕೆಲವು ಷರತ್ತುಗಳಿದ್ದು, ಕೇಂದ್ರ ಸರ್ಕಾರ ಹಾಗೂ ಫೈಜರ್​ ಈ ಬಗ್ಗೆ ಚರ್ಚಿಸಿವೆ. ಷರತ್ತುಗಳಿದ್ದರೂ ಫೈಜರ್​ 2021 ರಲ್ಲಿ ತನ್ನ 50 ಮಿಲಿಯನ್ ಲಸಿಕೆಗಳನ್ನು ಭಾರತಕ್ಕೆ ಪೂರೈಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಅಮೆರಿಕದ ಮತ್ತೊಂದು ಲಸಿಕೆ ತಯಾರಿಕಾ ಕಂಪನಿಯಾದ ಮಾಡೆರ್ನಾ ಕೂಡ, ಮುಂಬೈ ಮೂಲದ ಸಿಪ್ಲಾ ಔಷಧೀಯ ಕಂಪನಿಯೊಂದಿಗಿನ ವಿಶ್ಲೇಷಣೆಯ ಬಳಿಕ ಭಾರತದಲ್ಲಿ ತನ್ನ ಕೋವಿಡ್​-19 ಲಸಿಕೆಗಳನ್ನು ತಯಾರಿಸಲು ಮುಂದಾಗಿದೆ ಎಂದು ಹೇಳಲಾಗಿದೆ. 12 ರಿಂದ 17 ವರ್ಷದ ಸುಮಾರು 3,700 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿರುವ ಮಾಡೆರ್ನಾ, ತನ್ನ ಲಸಿಕೆ 12 ವರ್ಷ ವಯಸ್ಸಿನ ಮಕ್ಕಳಿಗೆ ಸಹಕಾರಿಯಾಗಿದೆ ಎಂದು ಯುಸ್​ ಸರ್ಕಾರಕ್ಕೆ ತಿಳಿಸಿತ್ತು.

ಇದನ್ನೂ ಓದಿ:12 ವರ್ಷದ ಮಕ್ಕಳಿಗೆ ಕೋವಿಡ್​ ಲಸಿಕೆ ಸಹಕಾರಿ ಎಂದ ಮಾಡೆರ್ನಾ

ಈ ಹಿಂದೆ ದೆಹಲಿ ಹಾಗೂ ಪಂಜಾಬ್​ ಸರ್ಕಾರಗಳು ತಮ್ಮ ರಾಜ್ಯಕ್ಕೆ ಲಸಿಕೆ ಪೂರೈಸುವಂತೆ ಫೈಜರ್ ಮತ್ತು ಮಾಡೆರ್ನಾ ಕಂಪನಿಗಳಿಗೆ ಕೇಳಿದ್ದವು. ಆದರೆ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದವಾಗದ ಕಾರಣ ನೇರವಾಗಿ ದೆಹಲಿ-ಪಂಜಾಬ್​ಗೆ ವ್ಯಾಕ್ಸಿನ್​ ಪೂರೈಸಲು ಫೈಜರ್ ಮತ್ತು ಮಾಡೆರ್ನಾ ನಿರಾಕರಿಸಿದ್ದವು. ಮೂರನೇ ಕೊರೊನಾ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಫೈಜರ್ ಲಸಿಕೆಗೆ ಭಾರತ ಸರ್ಕಾರ ಅಸ್ತು ಎನ್ನುತ್ತದಾ ನೋಡಬೇಕಾಗಿದೆ.

Last Updated : May 27, 2021, 7:21 AM IST

ABOUT THE AUTHOR

...view details