ನವದೆಹಲಿ: ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ದೇಶಾದ್ಯಂತ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದೆ. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಇಂದು ಕೊಬಾನಿ ಜಿಡಿಎಂ ಕೊಬಾವಾಲಾ ಪ್ರೌಢಶಾಲೆಯಲ್ಲಿ ರಾಜ್ಯಾದ್ಯಂತ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.
ಗಾಂಧಿನಗರ ಪುರಸಭೆ ವ್ಯಾಪ್ತಿಯ 93 ಶಾಲೆಗಳ ಸುಮಾರು 20,000 ಮಕ್ಕಳಿಗೆ ಲಸಿಕೆ ನೀಡಲು 50 ಆರೋಗ್ಯ ಕಾರ್ಯಕರ್ತರ ತಂಡಗಳು ಕಾರ್ಯನಿರ್ವಹಿಸಲಿವೆ.
ಲಸಿಕಾ ಅಭಿಯಾನದ ಮೊದಲ ದಿನವಾದ ಇಂದು ಗಾಂಧಿನಗರ ಪುರಸಭೆ ವ್ಯಾಪ್ತಿಯ 13 ಶಾಲೆಗಳ ಐದು ಸಾವಿರ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್ ಡೋಸ್ ನೀಡಲು ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ.
ಗುಜರಾತ್ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ 35 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಅಹಮದಾಬಾದ್‌ನಲ್ಲಿ ಸಹ ವ್ಯಾಕ್ಸಿನೇಷನ್ ಪ್ರಾರಂಭವಾಗಿದೆ.