ನವದೆಹಲಿ:ಕೊರೊನಾ ಸೋಂಕಿನ ಎರಡನೇ ಅಲೆ ದೇಶದಲ್ಲಿ ವ್ಯಾಪಕವಾಗಿ ಹಬ್ಬಿದ್ದು, ಬಹುತೇಕ ಜನರು ಮೂರನೇ ಅಲೆಯ ಬಗ್ಗೆ ಚಿಂತಿತರಾಗಿದ್ದಾರೆ. ಮೂರನೇ ಅಲೆಯು ಮಕ್ಕಳಲ್ಲಿ ಸೋಂಕು ವೇಗವಾಗಿ ಹಬ್ಬುವ ಭಯ ಹೆತ್ತವರನ್ನು ಕಾಡುತ್ತಿದೆ. ಇದರ ನಡುವೆ ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಪೋಷಕರಿಗೆ ನೆಮ್ಮದಿ ನೀಡುವಂತಹ ಸುದ್ದಿ ನೀಡಿದ್ದಾರೆ.
ಹೆಚ್ಚಿನ ಅಪಾಯ ಎಂಬುದಕ್ಕೆ ವೈಜ್ಞಾನಿಕ ಆಧಾರ ಇಲ್ಲ
ನಾವು ಕೊರೊನಾದ ಎರಡೂ ಅಲೆಗಳ ಬಗ್ಗೆ ಮಾತನಾಡಿದರೆ, ಮಕ್ಕಳು ಹೆಚ್ಚು ಸುರಕ್ಷಿತರು ಎಂಬುದು ಅಂಕಿ- ಅಂಶಗಳು ತೋರಿಸುತ್ತವೆ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ. ಹೆಚ್ಚಿನ ಮಕ್ಕಳಲ್ಲಿ ಕೊರೊನಾದ ಸೌಮ್ಯ ಲಕ್ಷಣಗಳು ಕಂಡು ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಅಲೆಯಲ್ಲಿ ಮಕ್ಕಳಲ್ಲಿ ಸೋಂಕಿನ ಅಪಾಯ ಹೆಚ್ಚಾಗುತ್ತದೆ ಎಂಬುದು ಹೇಳುವುದು ವೈಜ್ಞಾನಿಕವಾಗಿ ಸರಿಯಲ್ಲ ಎಂದರು.
ವಾಸ್ತವವಾಗಿ ಮಕ್ಕಳು ಈಗ ಮನೆಯಲ್ಲಿ ಸುರಕ್ಷಿತವಾಗಿರುತ್ತಾರೆ. ಮಕ್ಕಳು ಶಾಲೆ, ಕಾಲೇಜಿಗೆ ಹೋದಾಗ ಅವರಿಗೆ ಸೋಂಕು ಬರಬಹುದು. ಆದರೆ, ಇಲ್ಲಿಯವರೆಗೆ ಯಾವುದೇ ಅಂಕಿ - ಅಂಶಗಳು ಗಮನಿಸಿದರೂ ಮಕ್ಕಳಲ್ಲಿ ಸೋಂಕು ಬೇಗನೆ ಕಡಿಮೆಯಾಗುತ್ತದೆ ಎಂಬುದು ಹೇಳುತ್ತವೆ. ಹೆಚ್ಚಿನ ಮಕ್ಕಳನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ. ಇದುವರೆಗೂ ಎರಡೂ ಅಲೆಗಳಲ್ಲಿ ಒಂದೇ ರೀತಿ ಕಂಡು ಬಂದಿದೆ. ಕೆಲವು ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಹೆಚ್ಚಿನ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಬೇಕಾಗಿದೆ ಎಂದು ರಣದೀಪ್ ಗುಲೇರಿಯಾ ಎಚ್ಚರಿಸಿದರು.