ಹೈದರಾಬಾದ್:ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ನಗರದಾದ್ಯಂತ ಆವರಿಸುತ್ತಿದೆ. ಈಗ ಜನರಲ್ಲಿ ಮಾತ್ರವಲ್ಲ, ವನ್ಯಜೀವಿಗಳಿಗೂ ಮಹಾಮಾರಿ ಅಂಟಿಕೊಂಡಿದೆಯೇ ಎಂಬ ಅನುಮಾನ ಮೂಡಿದೆ.
ಹೈದರಾಬಾದ್ನ ಜೂಯಾಲಾಜಿಕಲ್ ಪಾರ್ಕ್ನಲ್ಲಿರುವ 8 ಸಿಂಹಗಳಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿವೆ. ಈ ಲಕ್ಷಣಗಳು ಕಾಣಿಸಿದ ಹಿನ್ನೆಲೆಯಲ್ಲಿ ಸಿಂಹಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಇಂದು ಸಂಜೆ ವೇಳೆಗೆ ವರದಿ ಬರುವ ಸಾಧ್ಯತೆಯಿದೆ.