ಕೋಲ್ಕತಾ, ಪಶ್ಚಿಮ ಬಂಗಾಳ:ಕೋವಿಡ್ ಎರಡನೇ ಅಲೆಯಿಂದಾಗಿ ಏಕಾಏಕಿ ಆಮ್ಲಜನಕ ಮತ್ತು ವೆಂಟಿಲೇಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಬೇಡಿಕೆಯನ್ನು ನಿವಾರಿಸುವ ಸಲುವಾಗಿ ವಿಜ್ಞಾನಿಗಳು ಪಾಕೆಟ್ ವೆಂಟಿಲೇಟರ್ ಸಂಶೋಧಿಸಿದ್ದಾರೆ.
ಪಶ್ಚಿಮ ಬಂಗಾಳದ ಡಾ. ರಮೇಂದ್ರ ಲಾಲ್ ಮುಖರ್ಜಿ ಎಂಬುವರು ಈ ಪಾಕೆಟ್ ವೆಂಟಿಲೇಟರ್ ಸಂಶೋಧಿಸಿದ್ದು, ಅತ್ಯಂತ ಸುಲಭವಾಗಿ ಬೇಕಾದ ಸ್ಥಳಗಳಿಗೆ ಕೊಂಡೊಯ್ಯಬಹುದಾಗಿದೆ. ಸೋಂಕಿನ ವೇಳೆ ಉಸಿರಾಟ ತೊಂದರೆಯುಂಟಾದಾಗ ಜೀವ ಉಳಿಸುವಲ್ಲಿ ಇದು ಸಹಕಾರಿಯಾಗಿದೆ. ಕೈಗೆಟಕುವ ಬೆಲೆಯಲ್ಲಿ ಈ ಸಾಧನ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ರಮೇಂದ್ರ ಲಾಲ್ ಮುಖರ್ಜಿ, ನನಗೆ ಕೋವಿಡ್ ಪಾಸಿಟಿವ್ ಸೋಂಕು ಕಾಣಿಸಿಕೊಂಡಿದ್ದೇ ಪಾಕೆಟ್ ವೆಂಟಿಲೇಟರ್ ಆವಿಷ್ಕರಿಸಲು ಪ್ರೇರೇಪಿಸಿತು ಎಂದಿದ್ದಾರೆ. ನನಗೆ ಕೋವಿಡ್ ಬಂದಾಗ ನನ್ನ ದೇಹದಲ್ಲಿ ಆಮ್ಲಜನಕದ ಸ್ಯಾಚುರೇಷನ್ (ಶುದ್ಧತ್ವ) ಮಟ್ಟವು 88ಕ್ಕಿಂತ ಕಡಿಮೆಯಾಗಿತ್ತು. ತೀವ್ರತರನಾದ ಉಸಿರಾಟ ತೊಂದರೆಯಿತ್ತು. ಅದೃಷ್ಟವಶಾತ್ ನಾನು ಸೋಂಕಿನಿಂದ ಪಾರಾದೆ ಎಂದಿದ್ದಾರೆ.