ಹಲ್ದ್ವಾನಿ:ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊರೊನಾ ರೋಗಿಗಳಿಗೆ ನೀರು ಕೊಡುತ್ತಿಲ್ಲ ಎಂದು ಸಾವಿಗೂ ಮುನ್ನ ಸೋಂಕಿತ ಮಹಿಳೆವೋರ್ವಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಸುಶೀಲಾ ತಿವಾರಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ನೀರು ಕೊಡುತ್ತಿಲ್ಲವೆಂದು ಸೋಂಕಿತ ಮಹಿಳೆ ಸಾವಿಗೂ ಮುನ್ನ ವಿಡಿಯೋ ಮಾಡಿ ಹೇಳಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಸೋಂಕಿತ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ದಯವಿಟ್ಟು ನೀರು ಕೊಡಿ ಎಂದು ಸಾವಿಗೂ ಮುನ್ನ ಅಂಗಲಾಚಿದ ಕೊರೊನಾ ಸೋಂಕಿತೆ ಮಹಿಳೆ ಸಾವಿಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು, ‘ಇಲ್ಲಿ ನೀರಿನ ಅಭಾವ ಬಹಳ ಇದೆ. ಆಸ್ಪತ್ರೆಯವರು ಇಡೀ ರಾತ್ರಿ ನೀರು ಕೊಡುತ್ತಿಲ್ಲ. ದಯವಿಟ್ಟು ನಮಗೆ ನೀರು ಕೊಡಿ’ ಎಂದು 30 ವರ್ಷದ ಮಹಿಳೆ ಬೇಡಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೂಡಲೇ ಸುಶೀಲಾ ಆಸ್ಪತ್ರೆ ವಿರುದ್ಧ ಸಂಬಂಧಿಕರು ಮತ್ತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಆಸ್ಪತ್ರೆ ಸಿಬ್ಬಂದಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಈ ಆಸ್ಪತ್ರೆಯಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವ ಸಂಖ್ಯೆಯೂ ಹೆಚ್ಚಾಗ್ತಿದೆ.