ನವದೆಹಲಿ:ಕೊರೊನಾ ಸೋಂಕಿನ ವಿವಿಧ ತಳಿಗಳು ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿವೆ. 2021ಕ್ಕೆ ಈ ಕೊರೊನಾ ಹಾವಳಿ ಮಾಯವಾಗಬಹುದು ಎಂಬ ಭರವಸೆಯನ್ನು ಈಗಾಗಲೇ ಒಮಿಕ್ರಾನ್ ಹುಸಿಗೊಳಿಸಿದೆ. ಈ ಬೆನ್ನಲ್ಲೇ ಕೊರೊನಾದ ಹೊಸ ತಳಿಯೊಂದು ಪತ್ತೆಯಾಗಿದೆ.
ಅಲ್ಫಾ, ಬೀಟಾ, ಕಪ್ಪಾ, ಡೆಲ್ಟಾ, ಡೆಲ್ಟಾ ಪ್ಲಸ್ ನಂತರ ಹಾಗೂ ಒಮಿಕ್ರಾನ್ ಭೀತಿಯಲ್ಲಿ ಜಗತ್ತು ತತ್ತರಿಸಿದೆ. ಒಮಿಕ್ರಾನ್ ತಳಿಯ ಸಾಮರ್ಥ್ಯವೇನು? ಅದಕ್ಕೆ ಹಿಂದಿನ ಲಸಿಕೆಗಳು ಕೆಲಸ ಮಾಡುತ್ತವೆಯೇ? ಎಂಬ ಬಗ್ಗೆ ಪ್ರಯೋಗಗಳು ನಡೆಯುತ್ತಿರುವಾಗಲೇ ಹೊಸದೊಂದು ತಳಿ ಕಾಣಿಸಿಕೊಂಡಿದೆ. ಅದರ ಹೆಸರು ಡೆಲ್ಮಿಕ್ರಾನ್.
ಹೊಸ ರೂಪಾಂತರಿ ಡೆಲ್ಮಿಕ್ರಾನ್ ವಿಭಿನ್ನ ಹೇಗೆ?
ಡೆಲ್ಮಿಕ್ರಾನ್ ಹೊಸ ರೂಪಾಂತರ ವೈರಸ್ ಅಮೆರಿಕ ಮತ್ತು ಯೂರೋಪ್ನ ಹಲವಡೆ ಕಾಣಿಸಿಕೊಂಡಿದ್ದು, ಇದನ್ನು ಅರ್ಥಮಾಡಿಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. ಸಿಂಪಲ್ಲಾಗಿ ಹೇಳುವುದಾದರೆ ಈ ಮೊದಲು ಕಾಣಿಸಿಕೊಂಡಿದ್ದ ಡೆಲ್ಟಾ ಮತ್ತು ಒಮಿಕ್ರಾನ್ ರೂಪಾಂತರ ವೈರಸ್ಗಳ ಮಿಶ್ರಣವೇ ಈ ಡೆಲ್ಮಿಕ್ರಾನ್ ಆಗಿದೆ.